





ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಈ ಸಂಧರ್ಭದಲ್ಲಿ ಶ್ರೀ ದೇವರಿಗೆ ತಿಂಗಳ ಕಾಲ ವಿಶೇಷ ಕಾರ್ತಿಕ ಪೂಜೆ ನಡೆದು ಕಾರ್ತಿಕ ಮಾಸದ ಕೊನೆಗೆ ಶ್ರೀ ದೇವರಿಗೆ ಲಕ್ಷದೀಪೋತ್ಸವ ಹಾಗೂ ಸಾಮೂಹಿಕ ಕಾರ್ತಿಕ ಪೂಜೆ ಕಾರ್ಯಕ್ರಮ ನ. 19 ರಂದು ಶ್ರೀ ದೇಗುಲದಲ್ಲಿ ನಡೆಯಿತು.



19 ರಂದು ರಾತ್ರಿ ಪ್ರಾರಂಭದಲ್ಲಿ ದೇವಸ್ಥಾನದ ಪ್ರದಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಶ್ರೀ ದೇವರಿಗೆ ಮಹಾಪೂಜೆ ನಡೆದು ಒಳಾಂಗಣದಲ್ಲಿ ಅರ್ಚಕ ಮಹಾಲಿಂಗ ಭಟ್ ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.






ಬಳಿಕ ಹೊರಾಂಗಣದಲ್ಲಿ ದೇವಸ್ಥಾನದ ವ್ವವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಕಟ್ಟಾವು ಧೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ತದನಂತರ ದೇವಸ್ಥಾನದ ಸುತ್ತಲೂ ಭಕ್ತಾದಿಗಳಿಂದ ಅಣತೆ ಅಚ್ಚುವ ಮೂಲಕ ಲಕ್ಷ ದೀಪೋತ್ಸವ ಸಂಭ್ರಮಾಚರಣೆ ಮಾಡಲಾಯಿತು ಬಳಿಕ ಶ್ರೀ ದೇವರಿಗೆ ಸಾಮೂಹಿಕ ಕಾರ್ತಿಕ ಪೂಜೆ ಪ್ರಸಾದ ವಿತರಣೆ ಬೆಡಿಮದ್ದು ಪ್ರದರ್ಶನ ನಡೆದು ಬಳಿಕ ಸಾರ್ನಜನಿಕ ಅನ್ನಪ್ರಸಾದ ವಿತರಣೆ ನಡೆಯಿತು.

ಈ ಸಂಧರ್ಭದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಜನಾರ್ದನ ಪೂಜಾರಿ ಪದಡ್ಕ, ಪುರಂದರ ರೖೆ ಕುದ್ಕಾಡಿ, ಉದಯ ಕುಮಾರ್ ಫಡುಮಲೆ, ಶ್ರೀನಿವಾಸ್ ಗೌಡ ಕನ್ನಯ, ಶಂಕರಿ ಪಟ್ಟೆ, ಗೋಪಾಲ ನಾಯ್ಕ ದೊಡ್ಡಡ್ಕ, ಶ್ರೀಮತಿ ಕನ್ನಡ್ಕ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ಲು, ಸ್ಥಳೀಯರಾದ ಕೃಷ್ಣ ರೖೆ ಕುದ್ದಾಡಿ ಶ್ರೀ ಪೂಮಾಣಿ-ಕಿನ್ನಿಮಾಣಿ ವ್ಯಾಘ್ರ ಚಾಮುಂಡಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ರವಿರಾಜ ರೖೆ ಸಜಂಕಾಡಿ, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ, ಮತ್ತಿತರ ಗಣ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.









