





ಪುತ್ತೂರು : ಮಾರುತಿ ಸುಝುಕಿ ಇಂಡಿಯಾ ಮಾರುಕಟ್ಟೆಗೆ ಪರಿಚಯಿಸಿರುವ ವಿನೂತನ ತಂತ್ರಜ್ಞಾನದ ವಿಕ್ಟೋರಿಸ್ ಕಾರನ್ನು ಇತ್ತೀಚೆಗೆ ಇಲ್ಲಿನ ಹಾರಾಡಿಯ ಭಾರತ್ ಅಟೋಕಾರ್ಸ್ ಮಳಿಗೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.


ಈ ವಿನೂತನ ಕಾರಿನ ಪ್ರಥಮ ಗ್ರಾಹಕರಾದ ರಾಜೇಶ್ ಎ ಆರ್, ಶಿವಪ್ರಸಾದ್ ಕೆ ಎಸ್ ಮತ್ತು ಮೋಹನ್ ಕಾಯರ್ ಮಾರ್ ವಿಟ್ಲ ಇವರಿಗೆ ನ.21 ರಂದು ಕಾರಿನ ಕೀ ಹಸ್ತಾಂತರ ಮೂಲಕ ಸಂಸ್ಥೆಯ ವರ್ಕ್ ಶಾಪ್ ಮ್ಯಾನೇಜರ್ ಆನಂದ ಮೂಲ್ಯ ಶುಭ ಹಾರೈಸಿದರು. ಈ ವೇಳೆ ಸಂಸ್ಥೆಯ ಟೀಂ ಲೀಡರ್ ಶೋಭಿತ್ , ಲಕ್ಷ್ಮೀಶ ಪೂಂಜ , ಸಂತೋಷ್ ಸಹಿತ ಸಿಬಂದಿ ವರ್ಗದವರು ಹಾಜರಿದ್ದರು.














