





ಪುತ್ತೂರು: ಪುತ್ತೂರು ಬಾರ್ ಅಸೋಸಿಯೇಶನ್ಗೆ ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ಸರಕಾರ 2 ಕೋಟಿ ಅನುದಾನ ಮಂಜೂರು ಮಾಡಿದ್ದು, ಇದಕ್ಕಾಗಿ ಮುತುವರ್ಜಿವಹಿಸಿದ ಶಾಸಕ ಅಶೋಕ್ ರೈ ಅವರಿಗೆ ಪುತ್ತೂರು ವಕೀಲರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಮ್ಮ ಬಾರ್ ಅಸೋಸಿಯೇಶನ್ಗೆ ಪೀಠೋಪಕರಣ ಖರೀದಿ ಹಾಗೂ ಇತರೆ ಮೂಲಭೂತ ವ್ಯವಸ್ಥೆಗೆ ಅನುಕೂಲವಾಗುವಂತೆ ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದ್ದೆವು. ಶಾಸಕರ ಮುತುವರ್ಜಿಯಿಂದ ನಮಗೆ 2 ಕೋಟಿ ಅನುದಾನ ಬಂದಿದೆ. ಇದು ಶಾಸಕರ ಅಭಿವೃದ್ದಿ ಇಚ್ಚಾಶಕ್ತಿಗೆ ಒಂದು ದೊಡ್ಡ ಉದಾಹರಣೆಯಾಗಿದೆ. ಪುತ್ತೂರು ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ದಿ ಹೊಂದುತ್ತಿದೆ ಇದಕ್ಕೆ ಶಾಸಕ ಅಶೋಕ್ ರೈಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.





ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಎಂ ಮೋನಪ್ಪ, ಪ್ರ. ಕಾರ್ಯದರ್ಶಿ ಚಿನ್ಮಯ ರೈ, ಕೋಶಾಧಿಕಾರಿ ಮಹೇಶ್, ಜೊತೆ ಕಾರ್ಯದರ್ಶಿ ಮಮತಾ ಸುವರ್ಣ , ಸಂಘದ ಸದಸ್ಯರಾದ ಕುಮಾರನಾಥ ಹಾಗೂ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು.










