





ಕಾಣಿಯೂರು: ಚಾರ್ವಾಕ ಕೊರಿಯಾನ ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಕ್ಷೇತ್ರದ ದಾರಂದ ಮುಹೂರ್ತ ಕಾರ್ಯಕ್ರಮವು ನ. 21ರಂದು ನಡೆಯಿತು. ಹರಿನಾರಾಯಣ ಮನೋಳಿತ್ತಾಯ ಅವರು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.


ಈ ಸಂದರ್ಭದಲ್ಲಿ ಟ್ರಸ್ಟಿನ ಗೌರವ ಅಧ್ಯಕ್ಷರಾದ ಮೋಹನ್ ಗೌಡ ಬಾರೆಂಗಳ, ಗರಡಿಯ ಸೇವಾ ಟ್ರಸ್ಟ್ ನ ಅಧ್ಯಕ್ಷರ ಸತ್ಯನಾರಾಯಣ ಕಲ್ಲೂರಾಯ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಟ್ರಸ್ಟಿನ ಉಪಾಧ್ಯಕ್ಷ ವಸಂತ ದಲಾರಿ, ಟ್ರಸ್ಟಿನ ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ವಿನೋದ್, ನಿವೃತ್ತ ಟ್ಯಾಕ್ಸ್ ಆಫೀಸರ್ ಪೂವಪ್ಪ ದೈಪಿಲ, ಮರದ ಶಿಲ್ಪಿಗಳಾದ ಆನಂದ ಆಚಾರ್ಯ ಮಜ್ಜಾರು, ಮೇಸ್ತ್ರಿಗಳಾದ ಕೃಷ್ಣಪ್ಪ ಕೊಪ್ಪ, ಸ್ವಯಂಸೇವಕ ಸಮಿತಿ ಅಧ್ಯಕ್ಷ ನಂದನ್ ಕಜೆ, ಗೋಪಾಲಕೃಷ್ಣ ಅಭಿಕಾರ, ವಿಶ್ವನಾಥ ದೇವಿನಗರ, ಅನಿಲ್ ನಡುಬೈಲ್, ನಾರ್ಣಪ್ಪ ಜತ್ತೋಡಿ , ಮಾಧವ ಕಲಾಯಿ, ನಯನ ಕಲಾಯಿ, ಗೋಪಾಲಕೃಷ್ಣ ಜತ್ತೋಡಿ, ಯತಿರಾಜ್ ಕಲಾಯಿ, ಅವಿನಾಶ್ ದಲಾರಿ, ಸದಾಶಿವ ಜತ್ತೋಡಿ, ನಾರಾಯಣ ಜತ್ತೋಡಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.















