2024ರ ಉದಯೋನ್ಮುಖ ಕಾವ್ಯ ಚೇತನ ಪ್ರಶಸ್ತಿ ಮುಡಿಗೇರಿಸಿಕೊಂಡ ಗ್ರಾಮೀಣ ಪ್ರತಿಭೆಗೆ ಒಲಿದ ಅವಕಾಶ- ಅಕ್ಷರೋತ್ಸವಕ್ಕೆ ಅನನ್ಯ ಎಚ್ ಸುಬ್ರಹ್ಮಣ್ಯ ಆಯ್ಕೆ-

0

ಪುತ್ತೂರು: ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಪ್ರತಿ ವರ್ಷ ಹಮ್ಮಿಕೊಳ್ಳುವ ಪ್ರತಿಷ್ಠಿತ ಎಕ್ಸೆಲ್ ಅಕ್ಷರೋತ್ಸವ ನಾಡು – ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಆಮಂತ್ರಣ ಸಾಂಸ್ಕೃತಿಕ– ಸಾಹಿತ್ಯ ವೇದಿಕೆಯ ದಶಮಾನೋತ್ಸವದ ಕಾರ್ಯಕ್ರಮಕ್ಕೆ ರಾಷ್ಟ್ರ ಮಟ್ಟದ ಕವಿಗೋಷ್ಠಿಗಾಗಿ ದೇಶದ ಮೂಲೆ ಮೂಲೆಗಳಿಂದ ಕವನಗಳನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪುತ್ತೂರಿನ ವಿವೇಕಾನಂದ ಕಾಲೇಜಿನ ಅಂತಿಮ ವರ್ಷದ ಪದವಿಯ ಕ್ರೀಯಾಶೀಲಾ ವಿದ್ಯಾರ್ಥಿನಿ ಅನನ್ಯ ಎಚ್ ಸುಬ್ರಹ್ಮಣ್ಯ ರವರ ಕವನವು ಆಯ್ಕೆ ಗೊಂಡಿರುವುದು ಹೆಮ್ಮೆಯ ಸಂಗತಿ.


ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಎಚ್ ಸುಬ್ರಹ್ಮಣ್ಯರವರ ಹಾದಿ…
ನಿರಂತರವಾಗಿ ಕವನ,ಲೇಖನ , ಕಥೆ, ನುಡಿಮುತ್ತು, ಪ್ರಬಂಧಗಳನ್ನು ಬರೆಯುತ್ತಾ ಸಮಾಜಕ್ಕೆ ಪರಿಚಯವಾಗಿರುವ ಅನನ್ಯ ಎಚ್ ಸುಬ್ರಹ್ಮಣ್ಯರವರು ಈಗಾಗಲೇ ಹಲವಾರು ಬರಹಗಳನ್ನು ನೀಡಿರುವ ಇವರ ನೂರು ಕವನಗಳ “ಅಭಿಶಸ್ತಿ” ಎನ್ನುವ ಕವನ ಸಂಕಲನ ಬಿಡುಗಡೆಯಾಗಿ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಗುತ್ತಿರುವುದು ಇವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದ್ದು, ನೂರಕ್ಕೂ ಹೆಚ್ಚು ಲೇಖನಗಳು ಜಿಲ್ಲಾ, ರಾಜ್ಯ ಮಟ್ಟದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.


ಜಿಲ್ಲಾ,ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಅನುಭವ ಇವರಿಗಿದ್ದು. ಅನೇಕ ಕವನಗಳಲ್ಲಿ ಬಹುಮಾನಗಳು ಬಂದಿರುತ್ತದೆ. ಇವುಗಳೊಂದಿಗೆ ಜಿಲ್ಲಾ, ರಾಜ್ಯ ಮಟ್ಟದ ಸಂಶೋಧನೆ ಪ್ರಬಂಧ ಮಂಡನೆಗಳು ಹಾಗೂ ಕಾದಂಬರಿ, ಕಥೆಗಳ ವಿಮರ್ಶೆ ಮಾಡಿ ವಾಚಿಸಿರುವ ಅನುಭವಿ ಪ್ರತಿಭೆಯಾಗಿರುತ್ತಾರೆ, ಹಿನ್ನಲೆ ಧ್ವನಿ ಕೊಡುವ ಮೂಲಕ ಗುರುತಿಸಿಕೊಂಡಿದ್ದಾರೆ.


ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಧ್ವನಿ ಕೊಡುವ ಹುಡುಗಿ ಎಂದು ಖ್ಯಾತಿ ಪಡೆದ ಇವರು ತನ್ನದೇ ಕವನ ಲೇಖನಗಳಿಗೆ ಧ್ವನಿ ನೀಡುತ್ತಾ ಬರುತ್ತಿದ್ದಾರೆ. ಅಲ್ಲದೇ ಮಂಗಳೂರಿನ ಆಕಾಶವಾಣಿಯಲ್ಲಿ ಲೇಖನ ಕವನಗಳನ್ನು ವಾಚಿಸಿರುತ್ತಾರೆ.


ಇವರು ಕುಕ್ಕೇ ಸುಬ್ರಹ್ಮಣ್ಯ ನಿವಾಸಿಗಳಾದ ಗಂಗಾಧರ ಮತ್ತು ಜಯಶ್ರೀ ಯವರ ಸುಪುತ್ರಿ.

LEAVE A REPLY

Please enter your comment!
Please enter your name here