





ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಹಾಗೂ ಕಾಣಿಯೂರು ಗ್ರಾಮ ಪಂಚಾಯತ್ ಇದರ ಸಹಭಾಗಿತ್ವದಲ್ಲಿ ಅಂಚೆ ಇಲಾಖೆಯ ಅಪಘಾತ ಹಾಗೂ ಆರೋಗ್ಯ ವಿಮಾ ಶಿಬಿರ ಮತ್ತು ಆಧಾರ್ ತಿದ್ದುಪಡಿ ಕಾರ್ಯಕ್ರಮವು ನ.25ರಂದು ಕಾಣಿಯೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ವಹಿಸಲಿದ್ದಾರೆ. ಕಾಣಿಯೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸಂಜೀವ ನಾಯಕ್ ಕಲ್ಲೇಗ ಪುತ್ತೂರು, ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕಾರದ ಶ್ರೀನಿಧಿ ಆಚಾರ್, ಕಾಣಿಯೂರು ಗ್ರಾ.ಪಂ. ಪಿಡಿಓ ರಘು ಎನ್.ಬಿ, ತಿಮ್ಮಪ್ಪ ಗೌಡ ಕಟ್ಟತ್ತಾರು ಕಾಣಿಯೂರು, ಅಚ್ಯುತ ಗೌಡ ಕೂರೇಲು ದೋಳ್ಪಾಡಿಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಕಾರ್ಯವ್ಯಾಪ್ತಿಯ ಚಾರ್ವಾಕ, ಕಾಣಿಯೂರು, ದೋಳ್ಪಾಡಿ ಗ್ರಾಮದ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಸಿಇಓ ಅಶೋಕ್ ಗೌಡ ತಿಳಿಸಿದ್ದಾರೆ.











