





ಧನಿಗಳು ಹೆಚ್ಚಾಗಿದ್ದಾರೆ. ಆದರೆ ದಾನಿಗಳು ಕಡಿಮೆಯಾಗಿದ್ದಾರೆ- ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿ
ಕಾವು ಹೇಮನಾಥ ಶೆಟ್ಟಿ ನಾಯಕತ್ವದಲ್ಲಿ ಒಳ್ಳೆಯ ಕೆಲಸ-ರಮಾನಾಥ ರೈ
ಹೇಮನಾಥ ಶೆಟ್ಟಿಯವರ ಶ್ರಮವನ್ನು ಅಭಿನಂದಿಸಬೇಕು- ಕಟೀಲ್
ಬಂಟ ಸಮುದಾಯ ಹೆಮ್ಮೆ ಪಡಬೇಕು- ಕಾವು ಹೇಮನಾಥ ಶೆಟ್ಟಿ
ಮುಂಬೈ ಬಂಟರ ಸಂಘದಿಂದ ಪೂರ್ಣ ಸಹಕಾರ ನೀಡುತ್ತೇವೆ- ಪ್ರವೀಣ್ ಭೋಜ ಶೆಟ್ಟಿ
ಸಮಾಜದ ಯಾವುದೇ ಕಾರ್ಯಕ್ಕೂ ಸಿದ್ಧನಿದ್ದೇನೆ- ಅಜಿತ್ ಕುಮಾರ್ ರೈ


ಪತ್ತೂರು: ಬಂಟರ ಸಂಘ ಪುತ್ತೂರು ತಾಲೂಕು ಇದರ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಮಿತಿ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದಲ್ಲಿ ’ಬಂಟೆರೆ ಸೇರಿಗೆ -2025’, ಸಾಧಕರಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ ಸಮಾರಂಭ ನ.22ರಂದು ಸಂಜೆ ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.





ಧನಿಗಳು ಹೆಚ್ಚಾಗಿದ್ದಾರೆ, ಆದರೆ ದಾನಿಗಳು ಕಡಿಮೆಯಾಗಿದ್ದಾರೆ- ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿ:
ಕಲ್ಪ ವೃಕ್ಷದ ಗಿಡಕ್ಕೆ ನೀರೆರೆಯುವ ಮೂಲಕ ಮುಂಬಯಿ ಹೇರಂಭಾ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪುತ್ತೂರು ಬಂಟ ಸಂಘದ ಬಗ್ಗೆ ಅಪಾರ ಗೌರವವಿದೆ. ಬಂಟರ ಸಂಘದಲ್ಲಿ ಮಾತೃ ಸಂಘಕ್ಕೆ ಉನ್ನತ ಸ್ಥಾನವಿದೆ. ಬಂಟ ಸಮಾಜದ ರಮಾನಾಥ ರೈ, ನಳಿನ್ ಕುಮಾರ್ ಕಟೀಲ್ ಅವರಂತಹ ಅನೇಕ ರಾಜಕೀಯ ಧುರೀಣರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ ಮಾತ್ರವಲ್ಲದೆ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬಂಟ ಸಮಾಜದ ಅನೇಕರು ಸಾಧನೆಗೈದಿದ್ದಾರೆ ಎಂದು ಅವರು, ಬಂಟ ಸಂಘದ ಯೋಜಿತ ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಹಕಾರವನ್ನು ನೀಡುತ್ತೇನೆ. ಪ್ರಸ್ತುತ ಧನಿಗಳು ಹೆಚ್ಚಾಗಿದ್ದಾರೆ. ಆದರೆ ದಾನಿಗಳು ಕಡಿಮೆಯಾಗಿರುವುದು ವಿಪರ್ಯಾಸ ಎಂದರು. ಕಾವು ಹೇಮನಾಥ ಶೆಟ್ಟಿಯವರ ನಾಯಕತ್ವದಲ್ಲಿ ತಾಲೂಕು ಬಂಟರ ಸಂಘ ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಬಂಟರ ಸಂಘದ ನೂತನ ಜಾಗದಲ್ಲಿ ಅಭಿವೃದ್ಧಿ ಕೆಲಸ ಶೀಘ್ರವಾಗಿ ನಡೆಯಲಿ ಎಂದರು.
ಅಶೋಕ್ ರೈ ಮೇಲೆ ಅಪಾರ ಗೌರವ ಇದೆ;
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಮೇಲೆ ನನಗೆ ಅಪಾರವಾದ ಪ್ರೀತಿ ಇದೆ. ಅವರ ಲೀಡರ್ಶೀಫ್, ಕಾರ್ಯ ಕೌಶಲ್ಯತೆ ನನಗೆ ತುಂಬಾ ಸಂತೋಷ ನೀಡಿದೆ ಎಂದು ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.

ಕಾವು ಹೇಮನಾಥ ಶೆಟ್ಟಿ ನಾಯಕತ್ವದಲ್ಲಿ ಒಳ್ಳೆಯ ಕೆಲಸ- ರಮಾನಾಥ ರೈ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈಯವರು, ಬಂಟ ಸಮಾಜದಲ್ಲಿ ಸಾವಿರಾರು ಮಂದಿ ಸಾಧಕರಿದ್ದಾರೆ. ನಾನು ಒಂಬತ್ತು ಸಲ ಶಾಸಕನಾಗಿ ಆಯ್ಕೆಯಾಗಬೇಕಾದರೆ ಬಂಟ ಸಮುದಾಯದ ಜನರೂ ಕಾರಣ. ಬಂಟರ ಸಂಘಕ್ಕೆ ಪುತ್ತೂರು ನಗರ ಪ್ರದೇಶದಲ್ಲಿ ಐದೂವರೇ ಎಕ್ರೆ ಸರ್ಕಾರಿ ಜಾಗ ಪಡೆಯುವುದು ಸುಲಭದ ಕೆಲಸವಲ್ಲ. ಆದರೆ ಈ ಕೆಲಸವನ್ನು ಪುತ್ತೂರಿನ ಶಾಸಕರು ಮಾಡಿದ್ದಾರೆ ಎಂದರು. ನನಗೆ ಕಾವು ಹೇಮನಾಥ ಶೆಟ್ಟಿಯವರ ಮೇಲೆ ತುಂಬಾ ಪ್ರೀತಿ, ವಿಶ್ವಾಸ ಇದೆ. ಹೇಮನಾಥ ಶೆಟ್ಟಿಯವರು ತನ್ನ ತಂದೆ-ತಾಯಿ ಹೆಸರಿನಲ್ಲಿ ನೀಡಿದ ’ ಬಂಟ ಶಿರೋಮಣಿ’ ಪ್ರಶಸ್ತಿಯನ್ನು ಕೃತಜ್ಞತೆಯಿಂದ ಸ್ವೀಕರಿಸಿದ್ದೇನೆ. ಪುತ್ತೂರು ನನ್ನ ಹುಟ್ಟೂರು, ಬಂಟ್ವಾಳದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೇನೆ. 9 ಬಾರಿ ಚುನಾವಣೆಗೆ ಸ್ವರ್ಧೆ ಮಾಡಿ 6 ಬಾರಿ ಗೆದ್ದಿದ್ದೇನೆ. 8 ಬಾರಿ ನನಗೆ ಬಂಟ ಸಮುದಾಯದವರೇ ಪ್ರತಿಸ್ಪರ್ಧಿಯಾಗಿದ್ದರು. ಪುತ್ತೂರು ಬಂಟರ ಸಂಘವು ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ನಾಯಕತ್ವದಲ್ಲಿ ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹೇಮನಾಥ ಶೆಟ್ಟಿಯವರ ಶ್ರಮವನ್ನು ಅಭಿನಂದಿಸಬೇಕು- ಕಟೀಲ್:
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಎಲ್ಲರನ್ನೂ ಒಗ್ಗೂಡಿಸಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿರುವ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಶ್ರಮವನ್ನು ನಾವು ಅಭಿನಂದಿಸಬೇಕು, ಸಾಧಕರನ್ನು ಸನ್ಮಾನಿಸಿರುವುದು ಸಂತಸದ ವಿಚಾರ ಎಂದರು.
ಮುಂಬೈ ಬಂಟರ ಸಂಘದಿಂದ ಪೂರ್ಣ ಸಹಕಾರ ನೀಡುತ್ತೇವೆ- ಪ್ರವೀಣ್ ಭೋಜ ಶೆಟ್ಟಿ:
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು, ಬಂಟ ಸಮಾಜದ ಅನೇಕರು ದೊಡ್ಡ ದೊಡ್ಡ ಉದ್ಯಮಿಗಳಾಗಿದ್ದಾರೆ. ಮುಂಬೈಯಲ್ಲಿ 4 ಲಕ್ಷ ಬಂಟ ಸಮುದಾಯದವರಿದ್ದಾರೆ. ನಮ್ಮ ಸಮಾಜ ಬಲಿಷ್ಠವಾಗಲು ಸಂಖ್ಯೆ ಮುಖ್ಯವಾಗಿದೆ ಎಂದರು. ಪುತ್ತೂರು ಬಂಟರ ಸಂಘದಿಂದ ನಿರ್ಮಾಣವಾಗಲಿರುವ ನೂತನ ಕಲ್ಯಾಣ ಮಂಟಪ ಸಹಿತ ಇತರ ಕೆಲಸಗಳಿಗೆ ಮುಂಬೈ ಬಂಟರ ಸಂಘದಿಂದ ಪೂರ್ಣ ಸಹಕಾರ ನೀಡುತ್ತೇವೆ. ಇದಕ್ಕಾಗಿ ಮುಂಬೈಯಲ್ಲಿ ಸಮಿತಿ ರಚಿಸಿಕೊಂಡು ಕಾರ್ಯೋನ್ಮುಖರಾಗುತ್ತೇವೆ ಎಂದರು.
ಸಮಾಜದ ಯಾವುದೇ ಕೆಲಸಕ್ಕೂ ಸಿದ್ಧನಿದ್ದೇನೆ- ಅಜಿತ್ ಕುಮಾರ್ ರೈ:
ಸಾಧಕರನ್ನು ಸನ್ಮಾನಿಸಿದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ತನ್ನೊಂದಿಗೆ ಇತರೇ ಸಮಾಜದವರೂ ಮುಂದೆ ಬರಬೇಕೆಂಬ ನಿಟ್ಟಿನಲ್ಲಿ ಬಂಟ ಸಮಾಜ ಕಾರ್ಯನಿರ್ವಹಿಸುತ್ತಿದೆ. ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಕಾರ್ಯವಾಗಿದೆ ಎಂದರು.
ಸಮಾಜದ ಯಾವುದೇ ಕೆಲಸಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದ ಅಜಿತ್ ಕುಮಾರ್, ಬಂಟ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಾ ಯಾವುದೇ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಿದ್ದೇನೆ. ನಾನು ಪ್ರಚಾರ ಪ್ರಿಯನಲ್ಲ. ನನ್ನ ಯಾವುದೇ ಕಾರ್ಯದ ಮುಂದೆ ನನ್ನ ಹೆಸರನ್ನು ಹಾಕಿಸುವುದಿಲ್ಲ ಎಂದರು.
ಬಂಟ ಸಮುದಾಯವು ಹೆಮ್ಮೆ ಪಡಬೇಕು- ಕಾವು ಹೇಮನಾಥ ಶೆಟ್ಟಿ :
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಬಂಟರೆಂದರೆನೇ ಸಾಧಕರು. ಉದ್ಯಮ, ಕ್ರೀಡೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಬಂಟ ಸಮಾಜದವರು ಸಾಧನೆಗಳನ್ನು ಮಾಡುತ್ತಿದ್ದಾರೆ. ಇಂತಹ ಸಾಧಕರನ್ನು ಸಮಾಜ ಗುರುತಿಸಬೇಕೆಂಬ ನಿಟ್ಟಿನಲ್ಲಿ ದರ್ಬೆಯಿಂದ ಮೆರವಣಿಗೆ ಮೂಲಕ ಕರೆತರಲಾಗಿದೆ. ಇಂತಹ ಸಾಧಕರ ಬಗ್ಗೆ ಇಡೀ ಬಂಟ ಸಮುದಾಯವು ಹೆಮ್ಮೆ ಪಡಬೇಕು ಎಂದರು. ಬಂಟರ ಸಂಘದಲ್ಲಿ ಈ ತನಕ ಸೇವೆ ಸಲ್ಲಿಸಿದ ಎಲ್ಲಾ ಅಧ್ಯಕ್ಷರೂ ಶಕ್ತಿ ಮೀರಿ ದುಡಿದು ಸಂಘವನ್ನು ಬಲಿಷ್ಠಗೊಳಿಸಿದ್ದಾರೆ. ಪುತ್ತೂರಿನಲ್ಲಿ 30 ಸಾವಿರ ಬಂಟರು ಇದ್ದಾರೆ. ಬಂಟರು ಎಲ್ಲಾ ಒಂದಾಗಬೇಕು, ಆ ಮೂಲಕ ಬಲಿಷ್ಠವಾಗಿ ಸಂಘಟನೆಯನ್ನು ಮುನ್ನಡೆಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ ಸುಮಾ ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ವಂದಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಮತ್ತು ಶ್ರೀನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಉಪಾಧ್ಯಕ್ಷರಾದ ರಮೇಶ್ ರೈ ಡಿಂಬ್ರಿ, ಸುಭಾಸ್ ಕುಮಾರ್ ಶೆಟ್ಟಿ ಆರುವಾರು, ಜೊತೆ ಕಾರ್ಯದರ್ಶಿಗಳಾದ ಪುಲಸ್ತ್ಯ ರೈ, ಸ್ವರ್ಣಲತಾ ಜೆ.ರೈ, ಹರಿಣಾಕ್ಷಿ ಜೆ.ಶೆಟ್ಟಿ, ನಿರ್ದೇಶಕರಾದ ಸುಽರ್ ಶೆಟ್ಟಿ ತೆಂಕಿಲ, ನಿತಿನ್ ಪಕ್ಕಳ, ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಸದಾಶಿವ ರೈ ಸೂರಂಬೈಲು, ಶಶಿಕಿರಣ್ ರೈ ನೂಜಿಬೈಲು, ದಂಬೆಕ್ಕಾನ ಸದಾಶಿವ ರೈ, ಶಿವನಾಥ ರೈ ಮೇಗಿನಗುತ್ತು, ರಮೇಶ್ ಆಳ್ವ, ದಯಾನಂದ ರೈ ಮನವಳಿಕೆಗುತ್ತು, ರಾಧಾಕೃಷ್ಣ ರೈ, ಪ್ರಕಾಶ್ ರೈ ಸಾರಕರೆ, ಇಂದುಶೇಖರ್ ಶೆಟ್ಟಿ, ಶಶಿರಾಜ್ ರೈ, ರವಿಪ್ರಸಾದ್ ಶೆಟ್ಟಿ ಬನ್ನೂರು, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರಾದ ಜೈರಾಜ್ ಭಂಡಾರಿ ನೊಣಾಲು, ಜಯಪ್ರಕಾಶ್ ರೈ ನೂಜಿಬೈಲು, ಪುರಂದರ ರೈ ಮಿತ್ರಂಪಾಡಿ, ರಮೇಶ್ ರೈ ಸಾಂತ್ಯ, ವಾಣಿ ಶೆಟ್ಟಿ ನೆಲ್ಯಾಡಿ, ಪ್ರಮುಖರಾದ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಕರುಣಾಕರ ರೈ ದೇರ್ಲ, ಕೆ.ಎಚ್. ದಾಸಪ್ಪ ರೈ, ನಾರಾಯಣ ಚೌಟ ಬೂಡಿಯಾರ್, ಕುದ್ಕಾಡಿ ಶೀನಪ್ಪ ರೈ, ಜಯರಾಜ್ ರೈ, ಎ.ಕೆ. ಜಯರಾಮ ರೈ, ಸಂತೋಷ್ ಭಂಡಾರಿ, ಸಂದೀಪ್ ರೈ ಚಿಲ್ಮೆತ್ತಾರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ದಯಾನಂದ ರೈ ಕೊರ್ಮಂಡ, ರವೀಂದ್ರನಾಥ ರೈ ಬಳ್ಳಮಜಲು, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ಸುಭಾಸ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತಡ್ಕ, ಅರಿಯಡ್ಕ ಕೃಷ್ಣ ರೈ ಪನ್ನೆಗುತ್ತು ಪುಣ್ಚಪ್ಪಾಡಿ, ಎನ್.ಚಂದ್ರಹಾಸ್ ಶೆಟ್ಟಿ, ಡಾ. ಬೂಡಿಯಾರ್ ಸಂಜೀವ ರೈ, ಹೇಮಂತ್ ರೈ ಮನವಳಿಕೆ, ನಾರಾಯಣ ರೈ ಬಾರಿಕೆ, ಸಂತೋಷ್ ಕುಮಾರ್ ರೈ ಇಳಂತಾಜೆ, ಶ್ರೀಧರ್ ರೈ ಹೊಸಮನೆ, ಜಯಕುಮಾರ್ ರೈ ಮಿತ್ರಂಪಾಡಿ, ವಸಂತ್ ಕುಮಾರ್ ರೈ ದುಗ್ಗಳ, ರಂಜಿನಿ ಶೆಟ್ಟಿ ಪುತ್ತೂರು, ಸಂದೇಶ್ ರೈ, ಪ್ರೇಮನಾಥ್ ಶೆಟ್ಟಿ ಕಾವು, ದಿವ್ಯನಾಥ ಶೆಟ್ಟಿ ಕಾವು, ಮಾರಪ್ಪ ಶೆಟ್ಟಿ ಬೈಲುಗುತ್ತು, ಪತ್ರಕರ್ತೆ ಮಮತಾ ಶೆಟ್ಟಿ, ರಂಜಿತಾ ಶೆಟ್ಟಿ ಕಾವು, ಮೋಹನ್ ರೈ ನರಿಮೊಗ್ರು, ಶರತ್ ರೈ ಕಾವು, ಅನಿತಾ ಹೇಮನಾಥ ಶೆಟ್ಟಿ, ಕೆ.ಎಂ. ಮೋಹನ್ ರೈ ಮಾಡಾವು, ಚನಿಲ ತಿಮ್ಮಪ್ಪ ಶೆಟ್ಟಿ, ಕಿರಣ್ ರೈ ಕಬ್ಬಿನಹಿತ್ಲು,ರಾಕೇಶ್ ರೈ ಕೆಡೆಂಜಿ, ರೋಶನ್ ರೈ ಬನ್ನೂರು, ರವೀಂದ್ರ ರೈ ನೆಕ್ಕಿಲು, ಸದಾನಂದ ಶೆಟ್ಟಿ ಕೂರೇಲು, ಡಾ. ಕಿರಣ್ಚಂದ್ರ ರೈ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮ ಪಿ.ಶೆಟ್ಟಿ, ಕೋಶಾಽಕಾರಿ ಅರುಣಾ ರೈ ಸಹಿತ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

ದರ್ಬೆಯಿಂದ ಬಂಟರಭವನ ತನಕ ‘ಬಂಟೆರೆ ಮೆರವಣಿಗೆ’
ಸಂಜೆ ’ಬಂಟೆರೆ ಮೆರವಣಿಗೆ’ ದರ್ಬೆ ರೈ ಪೆಟ್ರೋಲ್ ಪಂಪ್ ಬಳಿ ಆರಂಭಗೊಂಡು, ಕೊಂಬೆಟ್ಟು ಬಂಟರ ಭವನದ ತನಕ ಅದ್ದೂರಿಯಾಗಿ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಚಿನ್ನದ ಪದಕ ಪ್ರಶಸ್ತಿ ಪುರಸ್ಕೃತರನ್ನು ವಾಹನದ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು. ಸಾಧನೆಗೈದ ಸಮಾಜ ಬಾಂಧವರನ್ನು ಪ್ರಪ್ರಥಮ ಬಾರಿಗೆ ಮೆರವಣಿಗೆಯ ಮೂಲಕ ಕರೆತರುವ ಕಾರ್ಯ ನಡೆದಿರುವುದು ವಿಶೇಷವಾಗಿತ್ತು. ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಬಂಟೆರೆ ಮೆರವಣಿಗೆಗೆ ಚಾಲನೆಗೈದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಧ್ವಜ ಹಸ್ತಾಂತರಗೈದರು. ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರ ರತ್ನ ಅಗರಿ ನವೀನ್ ಭಂಡಾರಿ, ಜನಜಾಗೃತಿ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ವಿಶಿಷ್ಠ ಕಲ್ಪನೆಯಲ್ಲಿ ಮೂಡಿಬಂದ ಸುಂದರವಾದ ರಥ ಎಲ್ಲರ ಗಮನ ಸೆಳೆಯಿತು. ರಥದಲ್ಲಿ ಮಾಜಿ ಸಚಿವ ರಮಾನಾಥ ರೈ, ಉದ್ಯಮಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆಸೀನರಾಗಿದ್ದರು.
13 ಮಂದಿಗೆ ಚಿನ್ನದ ಪದಕ
ಪ್ರಶಸ್ತಿ ಪ್ರದಾನವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13 ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬನ್ನೂರುಗುತ್ತು ತಾರಾ ಅಂತಪ್ಪ ಶೆಟ್ಟಿ ಕಾವು ಬಂಟ ಶಿರೋಮಣಿ ಪ್ರಶಸ್ತಿಯನ್ನು ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ (ಪ್ರಾಯೋಜಕರು-ಕಾವು ಹೇಮನಾಥ ಶೆಟ್ಟಿ), ಮಿತ್ರಂಪಾಡಿ ಚಿನ್ನಪ್ಪ ರೈ ಸ್ಮರಣಾರ್ಥ ಸಮಾಜ ಸೇವಾ ಮಿತ್ರ ಪ್ರಶಸ್ತಿಯನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ರವರಿಗೆ (ಪ್ರಾಯೋಜಕರು- ಜಯರಾಮ್ ರೈ ಮಿತ್ರಂಪಾಡಿ ಅಬುಧಾಬಿ), ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿಯವರಿಗೆ (ಪ್ರಾಯೋಜಕರು- ಡಾ. ಬೂಡಿಯಾರ್ ಸಂಜೀವ ರೈ), ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿಯನ್ನು ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ (ಪ್ರಾಯೋಜಕರು-ಸವಣೂರು ಕೆ.ಸೀತಾರಾಮ ರೈ), ಪುತ್ತೂರು ಬಂಟಿಸಿರಿ ಪ್ರಶಸ್ತಿಯನ್ನು ಆಪ್ತ ಸಮಾಲೋಚಕಿ ರಾಣಿ ಶೆಟ್ಟಿಯವರಿಗೆ (ಪ್ರಾಯೋಜಕರು- ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ), ಉತ್ತಮ ಶಿಕ್ಷಕ ಅಶ್ವಿನಿ ಪ್ರಶಸ್ತಿಯನ್ನು ವಿಠಲ ರೈ ಕೊಣಾಲುಗುತ್ತುರವರಿಗೆ (ಪ್ರಾಯೋಜಕರು- ದೇರ್ಲ ಕರುಣಾಕರ್ ರೈ), ಪಂಚಮಿ ಉದ್ಯಮಿ ಸಿರಿ ಪ್ರಶಸ್ತಿಯನ್ನು ಎನ್. ಶಿವಪ್ರಸಾದ್ ಶೆಟ್ಟಿ ಕಿನಾರರವರಿಗೆ (ಪ್ರಾಯೋಜಕರು-ಮಿತ್ರಂಪಾಡಿ ಪುರಂದರ ರೈ), ಸಿರಿ ಕಡಮಜಲು ಕೃಷಿ ಪ್ರಶಸ್ತಿಯನ್ನು ಸುಧಾಕರ್ ರೈ ಪರಾರಿಗುತ್ತುರವರಿಗೆ (ಪ್ರಾಯೋಜಕರು- ಕಡಮಜಲು ಸುಭಾಸ್ ರೈ), ದಿ.ರೇಖಾ ಮುತ್ತಪ್ಪ ರೈ ಮತ್ತು ದಿ.ಜಯಂತ್ ರೈ ಸ್ವರಣಾರ್ಥ ಕ್ರೀಡಾ ಪ್ರಶಸ್ತಿಯನ್ನು ಎ.ಎನ್.ಸದಾಶಿವ ರೈ ಆಜಿಲಾಡಿಬೀಡುರವರಿಗೆ (ಪ್ರಾಯೋಜಕರು-ಎನ್.ಚಂದ್ರಹಾಸ್ ಶೆಟ್ಟಿ), ಅರಣ್ಯಾಧಿಕಾರಿ ದಿ. ಮಂಜುನಾಥ ಶೆಟ್ಟಿ ಪನಡ್ಕ ಸ್ಮರಣಾರ್ಥ ಅರಣ್ಯ ಮಿತ್ರ ಪ್ರಶಸ್ತಿಯನ್ನು ಪಿ.ಡಿ.ಕೃಷ್ಣಕುಮಾರ್ ರೈ ಪುಣ್ಚಪ್ಪಾಡಿ ದೇವಸ್ಯರವರಿಗೆ (ಪ್ರಾಯೋಜಕರು- ವಿಜಯಾ ಮಂಜುನಾಥ ಶೆಟ್ಟಿ), ಬೂಡಿಯಾರ್ ಮಹಿಳಾ ಕೃಷಿ ಪ್ರಶಸ್ತಿಯನ್ನು ದಯಾ ವಿ. ರೈ ಕೇಕಾನಜೆ (ಪ್ರಾಯೋಜಕರು-ಬೂಡಿಯಾರ್ ಗುಲಾಬಿ ಎಂ. ಚೌಟ ಮತ್ತು ಮಕ್ಕಳು) ಪಿಯುಸಿ ವಿಭಾಗದ ಪ್ರತಿಭಾನ್ವಿತ ವಿದ್ಯಾ ಅರಿಯಡ್ಕ ಪ್ರಶಸ್ತಿಯನ್ನು ವರ್ಷಿಣಿ ಆಳ್ವರವರಿಗೆ (ಪ್ರಾಯೋಜಕರು- ಅರಿಯಡ್ಕ ಚಿನ್ನಪ್ಪ ನಾೖಕ್), ಎಸ್ಎಸ್ಎಲ್ಸಿ ವಿಭಾಗದ ಪ್ರತಿಭಾನ್ವಿತ ವಿದ್ಯಾ ಚನಿಲ ಪ್ರಶಸ್ತಿಯನ್ನು ಅನ್ವಿತಾ ರೈಯವರಿಗೆ(ಪ್ರಾಯೋಜಕರು- ಚನಿಲ ತಿಮ್ಮಪ್ಪ ಶೆಟ್ಟಿ) ರವರಿಗೆ ನೀಡಲಾಯಿತು. ಸನ್ಮಾನಿತರ ಪರವಾಗಿ ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿ ಮಾತನಾಡಿದರು.
ಘಮ ಘಮ ಸವಿಯ ಭೋಜನ;
ಶುಚಿ-ರುಚಿಯಾದ ಸಸ್ಯಹಾರಿ ಮತ್ತು ಮಾಂಸಾಹಾರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಾಂಸಾಹಾರಿ ಊಟದಲ್ಲಿ ನಾಟಿ ಕೋಳಿ ಸುಕ್ಕ, ಕೋರಿ-ರೊಟ್ಟಿ, ಗೀರೈಸ್, ಬೂತಾಯಿ ಪುಳಿಮುಂಚಿ, ಪಾಯಸ, ಪಲ್ಯ, ಸಾರು, ಸಾಂಬಾರು, ಅನ್ನ, ಒಡ್ಪಲೆ ಇತ್ತು. ಸಂಜೆ ಉಪಾಹಾರದಲ್ಲಿ ಕಡ್ಲೆ-ಅವಲಕ್ಕಿ, ಕಾಫಿ, ಚಾ ನೀಡಲಾಯಿತು. ಮಧ್ಯಾಹ್ನ ಲಿಂಬೆ ಶರಬತ್ತು ನೀಡಲಾಗಿತ್ತು.

ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಅದ್ದೂರಿ ಸನ್ಮಾನ;
ಸುವರ್ಣ ಕರ್ನಾಟಕ ಪ್ರಶಸ್ತಿ ಹಾಗೂ ಡಾಕ್ಟರೇಟ್ ಪದವಿ ಪುರಸ್ಕೃತರಾದ ಮುಂಬಯಿ ಹೇರಂಭಾ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕ ಡಾ| ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರನ್ನು ಉದ್ಯಮ ಕ್ಷೇತ್ರದ ಸಾಧಕರ ನೆಲೆಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಮಹಾದ್ವಾರ ಉದ್ಘಾಟನೆ, ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
‘ಬಂಟರ ಸೇರಿಗೆ 2025’ರ ಮೆರವಣಿಗೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೊದಲು ಬಂಟರ ಭವನದಲ್ಲಿ ಮಹಾದ್ವಾರ ಉದ್ಘಾಟನೆ, ಧ್ವಜಾರೋಹಣ, ಜ್ಯೋತಿ ಪ್ರಜ್ವಲನೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಿತು.

ಅಭಿವೃದ್ಧಿ ಕೆಲಸಗಳಿಗೆ ಸಹಕಾರ ಅಗತ್ಯ-ಹೇಮನಾಥ ಶೆಟ್ಟಿ:
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿ ಮಾತನಾಡಿ, ಬಂಟರ ಸಂಘದ ವತಿಯಿಂದ ನಿರ್ಮಾಣವಾಗಲಿರುವ ನೂತನ ಕಲ್ಯಾಣ ಮಂಟಪ ಸಹಿತ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಬಂಟ ಸಮಾಜ ಬಾಂಧವರು ಮತ್ತು ದಾನಿಗಳ ಸಹಕಾರ ಅಗತ್ಯ ಎಂದರು.
ಜಾಗ ಮಂಜೂರು ಗೊಳಿಸಿರುವುದು ಸಂತೋಷದ ವಿಷಯವಾಗಿದೆ- ಸವಣೂರು ಸೀತಾರಾಮ ರೈ:
ಮಹಾದ್ವಾರ ಉದ್ಘಾಟಿಸಿ ಮಾತನಾಡಿದ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರು, ಕಾವು ಹೇಮನಾಥ ಶೆಟ್ಟಿಯವರು ವೈವಿಧ್ಯಮಯ ಕಾರ್ಯಕ್ರಮದ ಮೂಲಕ ಸಂಘವನ್ನು ಬೆಳೆಸುತ್ತಿದ್ದಾರೆ. ಕಾವು ಹೇಮನಾಥ ಶೆಟ್ಟಿಯವರ ಪ್ರಯತ್ನದ ಫಲವಾಗಿ ಶಾಸಕ ಅಶೋಕ್ ಕುಮಾರ್ ರೈಯವರು ಬಂಟರ ಸಂಘಕ್ಕೆ ಸ್ವಂತ ಜಾಗವನ್ನು ಮಂಜೂರುಗೊಳಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.
ಯಾರೂ ಉನ್ನತ ವಿದ್ಯೆಯಿಂದ ವಂಚಿತರಾಗಬಾರದು -ಬೂಡಿಯಾರ್ ರಾಧಾಕೃಷ್ಣ ರೈ :
ಚಾವಡಿ ಮಾತಿನಲ್ಲಿ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು, ಬಂಟ ಸಮಾಜದಲ್ಲಿ ಉನ್ನತ ವಿದ್ಯೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಬಂಟ ಸಮಾಜದ ಯಾರೂ ಉನ್ನತ ವಿದ್ಯೆಯಿಂದ ವಂಚಿತರಾಗಬಾದರು. ಕಲಿಕೆಯಲ್ಲಿ ಆಸಕ್ತಿ ಇದ್ದರೆ ವೈದ್ಯಕೀಯ ಸಹಿತ ಉನ್ನತ ವಾಸ್ಯಂಗ ಮಾಡಬೇಕು ಎಂದು ಹೇಳಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಧ್ವಜಾರೋಹಣ ನೆರವೇರಿಸಿದರು. ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟ ನಿರ್ದೇಶಕ ಅರಿಯಡ್ಕ ಚಿಕ್ಕಪ್ಪ ನಾೖಕ್, ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿರವರು ಜ್ಯೋತಿ ಪ್ರಜ್ವಲನೆ ಮಾಡಿದರು. ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಬಂಟರ ಸಂಘದ ನಿರ್ದೇಶಕರಾದ ದಂಬೆಕ್ಕಾನ ಸದಾಶಿವ ರೈ, ಎನ್.ರವೀಂದ್ರ ಶೆಟ್ಟಿ ನುಳಿಯಾಲು, ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಅಭ್ಯಾಗತರಾಗಿ ಭಾಗವಹಿಸಿದ್ದರು.
ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ಸಹಕರಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ, ದಯಾನಂದ ರೈ ಕೋರ್ಮಂಡ, ರಂಜನಿ ರೈ ಸಹಕರಿಸಿದರು.
ಯಕ್ಷ ನಾಟ್ಯ ವೈಭವ: ಸಂಜೆ ಯಕ್ಷ ಮಾಣಿಕ್ಯ ಚಿಂತನಾ ಹೆಗ್ಡೆ ಮಾಳಕೋಡ್ ಮತ್ತು ಬಳಗದಿಂದ ಯಕ್ಷ ನಾಟ್ಯ ವೈಭವ ನಡೆಯಿತು.

ರೂ.36 ಕೋಟಿಯಲ್ಲಿ ಬಂಟರ ಸಂಘದ ನೂತನ ಜಾಗದಲ್ಲಿ ಅಭಿವೃದ್ಧಿ ಕೆಲಸ
ಪುತ್ತೂರು ಬಂಟರ ಸಂಘಕ್ಕೆ ಶಾಸಕ ಅಶೋಕ್ ಕುಮಾರ್ ರೈ ಮೂಲಕ ಮಂಜೂರು ಆಗಿರುವ ಐದೂವರೇ ಎಕ್ರೆ ಜಾಗದಲ್ಲಿ ಸುಮಾರು 36 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಹಂತ ಹಂತವಾಗಿ ನಡೆಯಲಿದೆ. ಅತೀ ಶೀಘ್ರದಲ್ಲಿ ಭೂಮಿ ಪೂಜೆ ನಡೆಯಲಿದೆ. ಆ ಬಳಿಕ ಜಿಲ್ಲೇಯಲ್ಲೇ ವಿಶಿಷ್ಟ ಮಾದರಿಯ ವಿಶಾಲವಾದ ಕಲ್ಯಾಣ ಮಂಟಪ ನಿರ್ಮಾಣ, 350 ಕಾರು ನಿಲ್ಲಿಸಬಹುದಾದ ಪಾರ್ಕಿಂಗ್ ವ್ಯವಸ್ಥೆ ಆಗಲಿದೆ. ನೂತನ ಜಾಗಕ್ಕೆ ಹೋಗುವ ರಸ್ತೆಗೆ ಶಾಸಕ ಅಶೋಕ್ ಕುಮಾರ್ ರೈ ಒಂದು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಿದ್ದಾರೆ ಮತ್ತು ಸಮುದಾಯ ಭವನಕ್ಕೆ 50 ಲಕ್ಷ ರೂಪಾಯಿ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ. ಮುಂದೆ ಈ ಜಾಗದಲ್ಲಿ ಶಿಕ್ಷಣ ಸಂಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಭಾಂಗಣ ನಿರ್ಮಾಣ ಸಹಿತ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಲಿದ್ದೇವೆ. ದಾನಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಪ್ರವೀಣ್ ಭೋಜ, ಶೆಟ್ಟಿ, ಪ್ರಕಾಶ್ ಶೆಟ್ಟಿ, ಶಶಿಕಿರಣ್ ಶೆಟ್ಟಿ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ದಾನಿಗಳ ನೆರವಿನಿಂದ ಈ ಎಲ್ಲಾ ಯೋಜನೆಗಳು ಕಾರ್ಯಗತವಾಗಲಿದೆ
ಕಾವು ಹೇಮನಾಥ ಶೆಟ್ಟಿ
ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು

ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು










