





ಸುಳ್ಯ, ಬೆಳ್ತಂಗಡಿ, ಪುತ್ತೂರಿನಲ್ಲಿ ಸುದ್ದಿ ಪತ್ರಿಕೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಕೇಂದ್ರ ಪ್ರದೇಶವಾದ ರೇಸ್ಕೋರ್ಸ್ ರಸ್ತೆಯ ಬಳಿ ಕಛೇರಿ ಇತ್ತು. ಈ ಮೇಲಿನ ಊರಿನವರಿಗೆ ಬೆಂಗಳೂರಿನಲ್ಲಿ ಮಾಧ್ಯಮ ಕಛೇರಿಯಾಗಿ ಕೆಲಸ ಮಾಡುತ್ತಿದ್ದದ್ದಲ್ಲದೆ ಅಲ್ಲಿಯ ವರದಿಗಳನ್ನು ಸುಳ್ಯ, ಪುತ್ತೂರು, ಬೆಳ್ತಂಗಡಿಗಳಿಗೆ ಸಂಗ್ರಹಿಸುವ ಮಾಧ್ಯಮವಾಗಿ ಕೆಲಸ ಮಾಡುತ್ತಿತ್ತು. ಈ ಊರಿನಿಂದ ಬೆಂಗಳೂರಿಗೆ ಹೋಗುವವರಿಗೆ ಹಾಗೂ ಬೆಂಗಳೂರಿನಲ್ಲಿರುವ ನಮ್ಮ ಊರಿನವರಿಗೆ ಸಂಪರ್ಕ ಸೇತುವೆಯಾಗಿ ಮಾಹಿತಿ, ಸೇವಾ ಕೇಂದ್ರವಾಗಿ ಕೆಲಸ ನಿರ್ವಹಿಸಿತ್ತು.


ಕೊರೋನಾ ಸಂದರ್ಭದಲ್ಲಿ ಒದಗಿದ ಆರ್ಥಿಕ ಸಮಸ್ಯೆಯಿಂದ ಮತ್ತು ಅಲ್ಲಿ ಕೊರೋನಾದಿಂದಾಗಿ ಮಳಿಗೆಗಳು ಬಂದ್ ಆಗಿರುವುದರಿಂದ ಕಛೇರಿ ಸ್ಥಗಿತಗೊಳಿಸಿ ಪುತ್ತೂರು, ಸುಳ್ಯ, ಬೆಳ್ತಂಗಡಿ ಪತ್ರಿಕೆಯ ಕಡೆ ಗಮನ ಹರಿಸಿದ್ದೆವು. ಆ ಸಮಯದಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡು ವೆಬ್ಸೈಟ್, ಚಾನೆಲ್ ಮತ್ತು ಸ್ಟುಡಿಯೋಗಳನ್ನು ಪ್ರಾರಂಭಿಸಿ ಇಲ್ಲಿ ಅತ್ಯಽಕ ಪ್ರಸಾರದ ಪತ್ರಿಕೆ ಮಾತ್ರವಲ್ಲ ಜಗತ್ತಿನಾದ್ಯಂತ ಸುಳ್ಯ, ಪುತ್ತೂರು, ಬೆಳ್ತಂಗಡಿಯವರು ನೋಡುತ್ತಿರುವ ಪತ್ರಿಕೆಯಾಗಿ ಯಶಸ್ವಿಯಾಗಿದ್ದೇವೆ. ತಾಲೂಕಿನಲ್ಲಿ ಅತ್ಯಽಕ ಪ್ರಸಾರದ ವೆಬ್ಸೈಟ್ ಮತ್ತು ಚಾನೆಲ್ ಆಗಿ ಜಗತ್ತಿನಾದ್ಯಂತ ಇರುವ ಆಯಾ ತಾಲೂಕಿನ ಜನರನ್ನು ತಲುಪುತ್ತಿದ್ದೇವೆ.





ಊರಿನಲ್ಲಿ ಕೃಷಿಕರಿಗಾಗಿ ಕೃಷಿ ಅರಿವು ಕೇಂದ್ರ ಮತ್ತು ಸಸ್ಯಜಾತ್ರೆಗಳನ್ನು ಏರ್ಪಡಿಸಿದ್ದೇವೆ. ಕೃಷಿಗೆ ಸಂಬಂಧಪಟ್ಟ ವಿವಿಧ ತರಬೇತಿಗಳನ್ನು, ಶಿಬಿರಗಳನ್ನು ಏರ್ಪಡಿಸಿದ್ದೇವೆ. ಊರಿನಲ್ಲಿ ಪ್ರತಿಯೊಂದು ಮನೆಯಲ್ಲಿ ಉದ್ಯಮ ಪ್ರಾರಂಭವಾಗಬೇಕೆಂದು ಬಯಸಿ ಉದ್ಯಮಶೀಲತೆಗೆ ಸಂಬಂಧಪಟ್ಟ ಶಿಬಿರಗಳನ್ನು, ತರಬೇತಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. ಉದ್ಯಮ ಮಾಡುವವರಿಗೆ ಮಾರುಕಟ್ಟೆಯ ಸಹಾಯವನ್ನು ಒದಗಿಸಲಿಕ್ಕಾಗಿ ಅರಿವು ಸ್ಟಾಲ್ಗಳನ್ನು ಹಾಕಿ ಬೇರೆ ಬೇರೆ ಕಡೆ ಅವರ ಉತ್ಪನ್ನಗಳ ಪ್ರದರ್ಶನ, ಮಾರುಕಟ್ಟೆ ಮಾಡುತ್ತಿದ್ದೇವೆ. ಉದ್ಯಮಿಯಾಗುವ ಕನಸು ಕಟ್ಟುವವರಿಗೆ ಅದನ್ನು ನನಸು ಮಾಡುವ ಸಲುವಾಗಿ ವಿವಿಧ ತಜ್ಞರನ್ನು ಕರೆಸಿ ತರಬೇತಿ ಕಾರ್ಯಾಗಾರ ನಡೆಸಿ ಅವರಿಗೆ ಅಗತ್ಯದ ಮಾಹಿತಿ ಒದಗಿಸುತ್ತಿದ್ದೇವೆ.
ಈ ಎಲ್ಲಾ ಕಾರ್ಯಕ್ರಮಗಳ ಮುಂದಿನ ಭಾಗವಾಗಿ ಅವುಗಳನ್ನು ಬೆಂಗಳೂರಿಗೆ ವಿಸ್ತರಿಸುವ ಸಲುವಾಗಿ ಬೆಂಗಳೂರಿನಲ್ಲಿ ಕಛೇರಿ ತೆರೆದಿದ್ದೇವೆ. ಸುಳ್ಯ ಪುತ್ತೂರು, ಬೆಳ್ತಂಗಡಿಯ ಸಹಿತ ದ.ಕ ಜಿಲ್ಲೆಯ ಸಾಧಕರನ್ನು ಬೆಂಗಳೂರಿನಲ್ಲಿ ಗುರುತಿಸಿ ಇಲ್ಲಿ ಪರಿಚಯಿಸುವ ಕೆಲಸ ಪ್ರಾರಂಭಿಸಲಿದ್ದೇವೆ. ಹಿಂದಿನಂತೆಯೇ ಸುಳ್ಯ, ಪುತ್ತೂರು, ಬೆಳ್ತಂಗಡಿಯ ಪತ್ರಿಕೆ ಮತ್ತು ಚಾನೆಲ್ಗೆ ರಾಜ್ಯದ ಕೇಂದ್ರ ಬೆಂಗಳೂರಿನಿಂದ ವರದಿಗಳನ್ನು ಸಂಗ್ರಹಿಸಿ ನೀಡಲಿದ್ದೇವೆ. ಬೆಂಗಳೂರಿನಲ್ಲಿರುವ ನಮ್ಮ ಊರಿನವರಿಗೆ ಊರಿಗೆ ಬಂದಾಗ ಮಾಹಿತಿ ಮತ್ತು ಸೇವೆಯನ್ನು ಒದಗಿಸುವ ಹಾಗೆಯೇ ಊರಿನಿಂದ ಬೆಂಗಳೂರಿಗೆ ಹೋಗುವ ನಮ್ಮ ಮಾಹಿತಿ ಮತ್ತು ಸೇವಾ ಕೇಂದ್ರವಾಗಿ ಕೆಲಸ ಮಾಡುವ ಚಿಂತನೆ ಹಾಕಿಕೊಂಡಿದ್ದೇವೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ನ.30ರಂದು ನಡೆಯಲಿರುವ ಅರೆಭಾಷಾ ಅಕಾಡೆಮಿ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಿದ್ದೇವೆ. ಹಾಗೂ ಅಲ್ಲಿರುವ ಸಮುದಾಯದೊಡನೆ ಸಂಪರ್ಕ ಮತ್ತು ಸೇವೆಯನ್ನು ಪ್ರಾರಂಭಿಸಲಿದ್ದೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊ. 8050294067 (ಬೆಂಗಳೂರು)










