





ಪುತ್ತೂರು: ಕರ್ನಾಟಕ ರಾಜ್ಯ ವಕ್ಫ್ ಬೋರ್ಡಿನ ನಿರ್ದೇಶನದಂತೆ ರಾಜ್ಯದ ವಕ್ಫ್ ಬೋರ್ಡಿನಲ್ಲಿ ನೋಂದಾವಣೆಗೊಂಡ ಮಸ್ಜಿದ್, ಮದರಸ, ದರ್ಗಾ, ಖಬರ್ ಸ್ಥಾನ, ಈದ್ಗಾ ಮೈದಾನ ಸೇರಿದಂತೆ ಎಲ್ಲಾ ಸಂಸ್ಥೆಗಳ ಆಸ್ತಿ ವಿವರಗಳನ್ನು ಕೇಂದ್ರ ಸರಕಾರದ ‘ಉಮೀದ್ ಆ್ಯಪ್’ನಲ್ಲಿ ನ.27ರ ಮೊದಲಾಗಿ ನೋಂದಾಯಿಸುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ.



ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ 93 ಸಂಸ್ಥೆಗಳು ವಕ್ಫ್ ನಲ್ಲಿ ನೋಂದಾವಣೆಗೊಂಡಿದ್ದು, ಈ ಪೈಕಿ ಕೇವಲ 22 ಸಂಸ್ಥೆಗಳು ಈಗಾಗಲೇ ತಮ್ಮ ಆಸ್ತಿ ವಿವರಗಳನ್ನು ಉಮೀದ್ ಆಪ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ನೋದಾಯಿಸಿಕೊಂಡಿದೆ. ಉಳಿದಂತೆ 71 ಸಂಸ್ಥೆಗಳು ನ.27ಕ್ಕೆ ಮುಂಚಿತವಾಗಿ ತಮ್ಮ ವಿವರಗಳನ್ನು ಅಪ್ಲೋಡ್ ಮಾಡಿ ನೋಂದಾವಣೆ ಮಾಡಿಕೊಳ್ಳಲು ಅನುಕೂಲವಾಗುವಂತೆ ದ.ಕ ಜಿಲ್ಲಾ ವಕ್ಫ್ ಕಚೇರಿ ಮತ್ತು ಪುತ್ತೂರು ತಾಲೂಕು ಸೀರತ್ ಕಮಿಟಿ ಕಚೇರಿಯಲ್ಲಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಂಸ್ಥೆಗಳ ಆಡಳಿತ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಸಂಸ್ಥೆಗಳು ಮಾನ್ಯತೆ ಕಳೆದು ಕೊಳ್ಳುವುದನ್ನು ತಪ್ಪಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ, ನ್ಯಾಯವಾದಿ ಮತ್ತು ನೋಟರಿ ನೂರುದ್ದೀನ್ ಸಾಲ್ಮರ ಅವರನ್ನು (9448124100) ಸಂಪರ್ಕಿಸಬಹುದಾಗಿದೆ.














