





ಪುತ್ತೂರು: ಮಾಣಿ ಸಮೀಪದ ಕೊಡಾಜೆ ಐಕ್ಯ ವೇದಿಕೆ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಭಾರತ್ ಕಾರ್ಸ್ ಆಯ್ಕೆಯಾದರು.



ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವೇದಿಕೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಶುಭ ಹಾರೈಸಿದರು.





ಐಕ್ಯ ವೇದಿಕೆಯ ನೂತನ ಅಧ್ಯಕ್ಷರಾಗಿ ಭಾರತ್ ವೆಹಿಕಲ್ ಬಜಾರ್ ಮಾಲಕ ಅಶ್ರಫ್ ತಿಂಗಳಾಡಿ, ಉಪಾಧ್ಯಕ್ಷರಾಗಿ ರಝಾಕ್ ಅನಂತಾಡಿ, ಆದಂ
ಎಸ್.ಎಂ.ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಅನಂತಾಡಿ, ಜೊತೆ ಕಾರ್ಯದರ್ಶಿಯಾಗಿ ಎಸ್.ಎಸ್. ಮಸೂದ್ ಕೊಡಾಜೆ, ಕೋಶಾಧಿಕಾರಿಯಾಗಿ ಎಸ್.ಎಸ್. ರಫೀಕ್ ಕೊಡಾಜೆ ಆಯ್ಕೆಯಾದವರು.
ಗೌರವ ಸಲಹೆಗಾರರಾಗಿ ನಿಕಟಪೂರ್ವ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸೋಡ್ತಿ ಉಸ್ತುವಾರಿಯಾಗಿ ನಿಕಟಪೂರ್ವ ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮನ್ಸೂರ್ ನೇರಳಕಟ್ಟೆ, ಪತ್ರಿಕಾ ಕಾರ್ಯದರ್ಶಿ ಗಳಾಗಿ ನೌಫಲ್ ಕೊಡಾಜೆ ಹಾಗೂ ಮಜೀದ್ ಅನಂತಾಡಿ, ಕ್ರೀಡಾ ಕಾರ್ಯದರ್ಶಿಗಳಾಗಿ
ರಫೀಕ್ ಪಂಥಡ್ಕ ಹಾಗೂ ಫಾರೂಕ್ ಕೊಡಾಜೆ, ಆರೋಗ್ಯ ಕಾರ್ಯದರ್ಶಿಯಾಗಿ ಸಲೀಂ ಪರ್ಲೋಟ್ , ಶೈಕ್ಷಣಿಕ ಕಾರ್ಯದರ್ಶಿಯಾಗಿ ಹಫೀಝ್ ನೇರಳಕಟ್ಟೆ, ಸಾಮಾಜಿಕ ಕಾರ್ಯದರ್ಶಿಯಾಗಿ ಫಾರೂಕ್ ಪಂಥಡ್ಕ ಅವರನ್ನು ಆರಿಸಲಾಯಿತು.
ಕಾರ್ಯದರ್ಶಿ ಶರೀಫ್ ಅನಂತಾಡಿ ಸ್ವಾಗತಿಸಿ, ವರದಿ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ ವಂದಿಸಿದರು.








