





ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿನ ಗ್ರಾಮಚಾವಡಿಯ ಎದುರು ಕಬ್ಬಿನ ಹಾಲಿನ ಮತ್ತು ಪೈಪ್ ಸಾಮಾಗ್ರಿಗಳ ಮಾರಾಟದ ಹಿರಿಯ ವ್ಯಾಪಾರಸ್ಥರಾಗಿದ್ದ ಕೆ. ಶ್ರೀನಿವಾಸ ರಾವ್(86ವ)ರವರು ನ.18ರಂದು ಮಂಗಳೂರಿನ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.


ಹಲವು ವರ್ಷಗಳ ಹಿಂದೆ ಪುತ್ತೂರು ಕೋರ್ಟ್ ರಸ್ತೆ ಗ್ರಾಮಚಾವಡಿಯ ಎದುರು ಕಬ್ಬಿನ ಹಾಲಿನ ಅಂಗಡಿಯನ್ನು ಮತ್ತು ಪೈಪ್ ಸಾಮಾಗ್ರಿಗಳ ಮಾರಾಟ ಮಳಿಗೆ ಹೊಂದಿದ್ದರು. ಎಂ.ಟಿ.ರಸ್ತೆಯ ಮಹಮ್ಮಾಯಿ ದೇವಸ್ಥಾನದ ಬಳಿ ಮನೆ ಮಾಡಿಕೊಂಡಿದ್ದ ಅವರು ಕೆಲವು ವರ್ಷಗಳಿಂದ ಮಂಗಳೂರಿನಲ್ಲಿರುವ ಮಗಳ ಜೊತೆಯಲ್ಲಿ ವಾಸ್ತವ್ಯ ಹೊಂದಿದ್ದರು. ಅಲ್ಲಿ ಅವರು ನಿಧನರಾದರು.













