ಒಡಿಯೂರು ಶ್ರೀ ದತ್ತ ಜಯಂತಿ ಮಹೋತ್ಸವಕ್ಕೆ ಪುತ್ತೂರಿನಿಂದ ಉಚಿತ ಬಸ್ ಸೇವೆ

0

ಪುತ್ತೂರು: ನ.28ರಿಂದ ಡಿ.4ರ ತನಕ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯಲಿರುವ ಶ್ರೀ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ ಹಾಗೂ ಶ್ರೀದತ್ತ ಕೋಟಿ ನಾಮಜಪ ಯಜ್ಞ ಮತ್ತು ಶ್ರೀಗುರುದೇವದತ್ತ ಲಕ್ಷ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಭಕ್ತಾಧಿಗಳಿಗೆ ನ.28ರಂದು ಪುತ್ತೂರಿನಿಂದ ಉಚಿತ ಬಸ್ ಸೇವೆ ಆಯೋಜನೆ ಮಾಡಲಾಗಿದ್ದು, ನ.28ರ ಬೆಳಗ್ಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿಯಿಂದ ಹೊರಡಲಿದ್ದು, ಕ್ಷೇತ್ರದ ಭಕ್ತಾದಿಗಳು ಇದರ ಪ್ರಯೋಜನ ಪಡೆಯುವಂತೆ ಒಡಿಯೂರು ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 97436 51514 ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here