





ಪುತ್ತೂರು: ಕುರುಂಜಿ ವೆಂಕಟ್ರಮಣ ಗೌಡ ಸಮುದಾಯ ಭವನ ಸುಳ್ಯದಲ್ಲಿ ನಡೆದ ನ್ಯಾಶನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ಇಂಪ್ಯಾಕ್ಟ್ ಆರ್ಟ್ & ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯವರು ನಡೆಸಿದ ಸ್ಪರ್ಧೆಯಲ್ಲಿ ಅವಿ . ವಿ . ರೈ 50 ರಿಂದ 55 ಕೆ.ಜಿ. ಕಟಾ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು ಅನಿ. ವಿ.ರೈ 40ರಿಂದ 45 ಕೆ.ಜಿ. ಕಟಾ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಪುತ್ತೂರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಆಲೈಡ್ ಆರ್ಟ್ಸ್ ನ ವಿದ್ಯಾರ್ಥಿಗಳಾಗಿರುವ ಇವರು ಕರಾಟೆ ಶಿಕ್ಷಕ ಸುರೇಶ್ ಎಂ ರವರಿಂದ ತರಬೇತಿ ಪಡೆಯುತ್ತಿದ್ದಾರೆ. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯಾಗಿರುವ ಅವಿ .ವಿ. ರೈ ಮತ್ತು ಮೂರನೇ ತರಗತಿಯ ವಿದ್ಯಾರ್ಥಿಯಾಗಿರುವ ಅನಿ.ವಿ.ರೈ ಇವರು ವಿನೋದ್ ರೈ ಮತ್ತು ಅಕ್ಷತಾ.ವಿ.ರೈ ದಂಪತಿಯ ಪುತ್ರರಾಗಿದ್ದಾರೆ.












