ಡಿ.2: ಪುತ್ತೂರು ಜೋಸ್ ಆಲುಕ್ಕಾಸ್ ನಲ್ಲಿ ಸಿ.ಎಸ್.ಆರ್. ಫಂಡ್ ನ ಚೆಕ್ ಹಸ್ತಾಂತರ

0

ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹಾರ ನಡೆಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನಲ್ಲಿ ಡಿ.2ರಂದು ಸರಕಾರಿ ಶಾಲೆಗಳಿಗೆ ಅಗತ್ಯ ಸಾಮಾಗ್ರಿ ಖರೀದಿಗೆ ಸಿ.ಎಸ್.ಆರ್. ಫಂಡ್ ನಿಂದ ಕೊಡಮಾಡುವ ಮೊತ್ತದ ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.


ಮುಖ್ಯ ಅತಿಥಿಯಾಗಿ ಐ.ಎಂ.ಡಿ.ಯ ನೂತನ ಅಧ್ಯಕ್ಷರೂ, ಹಿರಿಯ ವೈದ್ಯರಾಗಿರೂ, ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿರುವ ಡಾ. ಶ್ರೀಪತಿ ರಾವ್ ರವರು ಅಗಮಿಸಲಿದ್ದಾರೆ. ಉಳಿದಂತೆ ಅತಿಥಿಗಳಾಗಿ‌ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ ಎಂದು ಪುತ್ತೂರು ಶಾಖಾ ವ್ಯವಸ್ಥಾಪಕರಾದ ಹರಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here