




ಉಪ್ಪಿನಂಗಡಿ:ಅಪ್ರಾಪ್ತೆಯನ್ನು ಹಿಂಬಾಲಿಸುತ್ತಿದ್ದುದಲ್ಲದೆ ಆಕೆಯನ್ನು ಮನೆಗೆ ಕರೆದ ಆರೋಪದಲ್ಲಿ ಓರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.



ಮಹಮ್ಮದ್ ಮುಸ್ತಫಾ(40ದ.)ಬಂಧಿತ ಆರೋಪಿ. ಕಳೆದ ಎರಡು ತಿಂಗಳಿನಿಂದ ಅಪ್ರಾಪ್ತೆಯನ್ನು ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಹಿಂಬಾಲಿಸುತ್ತಿದ್ದ ಆರೋಪಿಯು ನ.29ರಂದು ಆಕೆಯನ್ನು ಆತನ ಮನೆಗೆ ಕರೆದಿದ್ದುದಾಗಿ ಆಕೆಯ ಅಣ್ಣ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.














