




ಕಷ್ಟದಲ್ಲಿದವರ ಜೀವನ ಬದಲಾಯಿಸಿದಾಗ ಸಂತೃಪ್ತತೆ-ರಾಮಕೃಷ್ಣ ಪಿ.ಕೆ



ಪುತ್ತೂರು:ಅಂತರರಾಷ್ಟ್ರೀಯ ರೋಟರಿ ಫೌಂಡೇಶನ್‌ಗೆ ರೊಟೇರಿಯನ್ಸ್‌ರವರ ನೀಡುವ ದೇಣಿಗೆಯಿಂದ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದೆ. ರೋಟರಿ ಫೌಂಡೇಶನ್ ಬಗ್ಗೆ ಆಳವಾಗಿ ಚಿಂತನೆ ಮಾಡಿದಾಗ ರೋಟರಿಗೆ ಸೇರಲು ಇಚ್ಚೆಯಾಗುತ್ತದೆ. ಸಮಾಜದಲ್ಲಿನ ಕಷ್ಟದಲ್ಲಿರುವವರಿಗೆ ಸ್ಪಂದಿಸಿ ಅವರ ಜೀವನ ಬದಲಾವಣೆಯಾದಾಗ ಮನಸ್ಸಿಗೆ ಸಂತೃಪ್ತತೆ ಮೂಡುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ಹೇಳಿದರು.






ಡಿ.೨ ರಂದು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಉಪ್ಪಿನಂಗಡಿಗೆ ಜಿಲ್ಲಾ ಗವರ್ನರ್ ಅಧೀಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಕ್ಲಬ್‌ನ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಕಾರ್ಯಗಳೇ ಜೀವನ, ಸಮಾಜಸೇವೆ-ಡಾ.ರಾಜಾರಾಮ್ ಕೆ.ಬಿ:
ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿ ಮಾತನಾಡಿ, ಜೀವನದ ಪ್ರತಿ ಕ್ಷಣ ಸಮಾಜ ಕಾರ್ಯಗಳ ಮೂಲಕ ಅನುಭವಿಸಬೇಕು, ಸಂಭ್ರಮಿಸಬೇಕು ಅದುವೇ ಜೀವನ, ಅದುವೇ ಸಮಾಜಸೇವೆ. ರೋಟರಿ ಧ್ಯೇಯವಾಕ್ಯವಾಗಿರುವ ಒಳಿತಿಗಾಗಿ ಒಂದಾಗೋಣ ಎಂಬಂತೆ ಮನುಕುಲದ ಸೇವೆಯಲ್ಲಿ ಸ್ನೇಹತ್ವದಿಂದ, ಬಾಂಧವ್ಯದೊಂದಿಗೆ ರೋಟರಿಯ ಇಂಪು, ಕಂಪನ್ನು ಪಸರಿಸೋಣ ಎಂದರು.

ಜಿಲ್ಲೆಯಲ್ಲಿ ರೋಟರಿ ಉಪ್ಪಿನಂಗಡಿ ಹೆಸರು ಗಳಿಸಲಿ-ಹರೀಶ್ ಸಿ.ಎಚ್:
ರೋಟರಿ ವಲಯ ಸೇನಾನಿ ಹರೀಶ್ ಸಿ.ಎಚ್ ಮಾತನಾಡಿ, ರೋಟರಿ ಉಪ್ಪಿನಂಗಡಿ ಕ್ಲಬ್ ಕಳೆದ ಆರು ತಿಂಗಳಲ್ಲಿ ಅಮೂಲ್ಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ನೆಕ್ಕಿಲಾಡಿ ಶಾಲೆಗೆ ರೂ.ಒಂದು ಲಕ್ಷ ದೇಣಿಗೆ, ಕಿವಿ ಕೇಳದ ಬಾಲಕನೋರ್ವನಿಗೆ ರೂ.62 ಸಾವಿರ ವೆಚ್ಚದಲ್ಲಿ ಶ್ರವಣ ಸಾಧನ ನೀಡುವಿಕೆ ಹೀಗೆ ರೋಟರಿಯ ಎಲ್ಲಾ ವಿಭಾಗಗಳಲ್ಲಿ ಜನಮೆಚ್ಚುಗೆಯ ಕಾರ್ಯವನ್ನು ಹಮ್ಮಿಕೊಂಡಿದ್ದು ಇದು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಸರು ಗಳಿಸಲಿ ಎಂದರು.
ಟೀಮ್ ವರ್ಕ್‌ನಿಂದಾಗಿ ಸಮಾಜಸೇವೆ-ಜೋನ್ ಕೆನ್ಯೂಟ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಮಾತನಾಡಿ, ಕಳೆದ ಆರು ತಿಂಗಳಲ್ಲಿ ಕ್ಲಬ್ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡಿದೆಯಾದರೆ ಅದು ನನ್ನ ಒಬ್ಬನ ಶ್ರಮವಲ್ಲ, ಅದು ಕ್ಲಬ್‌ನ ಟೀಮ್ ವರ್ಕ್ ಆಗಿದೆ ಜೊತೆಗೆ ಇತರ ಕ್ಲಬ್‌ಗಳ ಸದಸ್ಯರೂ ಕೂಡ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲೂ ನಾವು ಮಾಡುವ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಅಭಿನಂದನೆ:
ಕ್ಲಬ್ ನಿರ್ವಹಿಸುತ್ತಿರುವ ಯಾವುದೇ ಕಾರ್ಯಕ್ರಮಕ್ಕೆ ದೇಣಿಗೆ ಮೂಲಕ ಸಹಕರಿಸುತ್ತಿರುವ ಸದಸ್ಯರಾದ ಸ್ವರ್ಣೇಶ್ ಗಾಣಿಗ, ಚಂದಪ್ಪ ಮೂಲ್ಯ, ಅಬ್ದುಲ್ ರಹಿಮಾನ್ ಯೂನಿಕ್, ಇಸ್ಮಾಯಿಲ್ ಇಕ್ಬಾಲ್‌ರವರುಗಳಿಗೆ ಹಾಗೂ ಸಭಾ ಕಾರ್ಯಕ್ರಮದ ಬಳಿಕ ರಸಮಂಜರಿ ಕಾರ್ಯಕ್ರಮವನ್ನು ನೀಡಲಿರುವ ವೈಶಾಲಿ ಕುಂದರ್‌ರವರಿಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.
ಕೊಡುಗೆ ಹಸ್ತಾಂತರ:
34ನೇ ನೆಕ್ಕಿಲಾಡಿ ಸರಕಾರಿ ಶಾಲೆಗೆ ಜೆಎಸ್‌ಡಬ್ಲ್ಯೂ ಫೌಂಡೇಶನ್ ಮೂಲಕ ಸಿಎಸ್‌ಆರ್ ಮ್ಯಾನೇಜರ್, ಕ್ಲಬ್ ಸದಸ್ಯ ಪ್ರದೀಪ್ ಪೂಜಾರಿರವರ ಪ್ರಾಯೋಜಕತ್ವದಲ್ಲಿ ಮೈಕಾ ಸೆಟ್‌ನ್ನು ಶಾಲೆಯ ಶಿಕ್ಷಕ ವೃಂದ ಹಾಗೂ ಎಸ್‌ಡಿಎಂಸಿ ವೃಂದದವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಕ್ಲಬ್ ನಿಕಟಪೂರ್ವ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ನಿಯೋಜಿತ ಅಧ್ಯಕ್ಷ ಕೇಶವ್ ಪಿ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಿತಾ ಬ್ರ್ಯಾಗ್ಸ್ ಹಾಗೂ ವೀಣಾ ಮಸ್ಕರೇನ್ಹಸ್‌ರವರು ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಕಾಂತ್ ಪಟೇಲ್ ವರದಿ ಮಂಡಿಸಿ, ವಂದಿಸಿದರು. ಸದಸ್ಯರಾದ ಇಸ್ಮಾಯಿಲ್ ಇಕ್ಬಾಲ್, ರಾಜಶೇಖರ ಶೆಟ್ಟಿ, ಜಗದೀಶ್ ನಾಯಕ್, ಅರುಣ್ ಬಿ.ಕೆ,ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಪೂರ್ವಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಜಿಲ್ಲಾ ಗವರ್ನರ್‌ರವರ ಪರಿಚಯ ಮಾಡಿದರು. ಸದಸ್ಯರಾದ ಲವೀನಾ ಪಿಂಟೊ ಹಾಗೂ ರವೀಂದ್ರ ದರ್ಬೆ ಕಾರ್ಯಕ್ರಮ ನಿರೂಪಿಸಿದರು.

ಶಮಿಕಾರವರಿಂದ ಗಾಂಧಾರಿ ವಿದ್ಯೆ ಪ್ರದರ್ಶನ..ಸನ್ಮಾನ
ಡಿ.6 ಹಾಗೂ 7ರಂದು ಪುತ್ತೂರಿನಲ್ಲಿ ಕಣ್ಣುಮುಚ್ಚಿ ನಿರಂತರ 24 ಗಂಟೆ ಸ್ಯಾಂಡ್ ಆರ್ಟ್(ಗಾಂಧಾರಿ ವಿದ್ಯೆ) 300 ಕಲಾ ವಿನ್ಯಾಸ ರಚನೆಯ ಸಾಧನೆ ಮೂಲಕ ಏಷ್ಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಹೆಜ್ಜೆ ಇಡಲಿರುವ ಉಪ್ಪಿನಂಗಡಿ ಇಂದ್ರಪ್ರಸ್ಥದ ೯ನೇ ತರಗತಿ ವಿದ್ಯಾರ್ಥಿನಿ, ಕ್ಲಬ್ ನಿಯೋಜಿತ ಅಧ್ಯಕ್ಷ ಕೇಶವ್ ಪಿ.ಎಂರವರ ಪುತ್ರಿ ಶಮಿಕಾ ಎಂ.ಕೆರವರು ವೇದಿಕೆಯಲ್ಲಿಯೇ ಗಣ್ಯರ ಎದುರು ರೋಟರಿ ಧ್ಯೇಯವಾಕ್ಯ UNITE FOR GOOD ದೊಂದಿಗೆ ರೋಟರಿಯ ಲೋಗೊವನ್ನು ಕಣ್ಣಿಗೆ ಬಟ್ಟೆ ಕಟ್ಟಿ ಬಿಡಿಸುವ ಮೂಲಕ ಎಲ್ಲರ ಪ್ರಶಂಸೆ ಗಳಿಸಿದರು. ಶಮಿಕರವರು ಧ್ಯೇಯವಾಕ್ಯ ಹಾಗೂ ಲೋಗೊವನ್ನು ಬಿಡಿಸುತ್ತಿರುವಾಗ ಅನಿತಾ ಕ್ರಾಸ್ತಾರವರು ‘ಅರಳುವ ಹೂಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ’ ಎಂಬ ಕನ್ನಡ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಹುರಿದುಂಬಿಸಿದರು. ಕಲೆಯನ್ನು ಬಿಡಿಸಿದ ಬಳಿಕ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿರವರು ಗ್ಲಿಟರ್ ಪುಡಿಯನ್ನು ಕಲೆಯ ಮೇಲೆ ಚೆಲ್ಲುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಮಿಕರವರ ಕಲೆಗೆ ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಡಿಜಿ ಭೇಟಿ..
ಬೆಳಿಗ್ಗೆ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರನ್ನು ನೆಕ್ಕಿಲಾಡಿ ರಾಘವೇಂದ್ರ ಮಠದ ಬಳಿ ಸ್ವಾಗತಿಸಲಾಯಿತು. ಬಳಿಕ ರೋಟರಿ ಬೆಳಕು ಯೋಜನೆಯ ಉದ್ಘಾಟನೆ, ನೆಕ್ಕಿಲಾಡಿ ಶಾಲೆಯಲ್ಲಿ ವಿವಿಧ ಕೊಡುಗೆಗಳ ಹಸ್ತಾಂತರ, ಮಧ್ಯಾಹ್ನ ಅಧ್ಯಕ್ಷರ ನಿವಾಸದಲ್ಲಿ ಕ್ಲಬ್ ಅಸೆಂಬ್ಲಿಯಲ್ಲಿ ಸಂಜೆ ಚರ್ಚ್ ಹಾಲ್‌ನಲ್ಲಿ ನಡೆದ ಅಧಿಕೃತ ಭೇಟಿ ಸಮಾರಂಭದಲ್ಲಿ ಅವರು ಭಾಗಿಯಾದರು.

ಸನ್ಮಾನ..
ಕ್ಲಬ್ ವತಿಯಿಂದ 34ನೇ ನೆಕ್ಕಿಲಾಡಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಆಂಗ್ಲ ಮಾಧ್ಯಮ ವಿಭಾಗವನ್ನು ಆರಂಭಿಸಿ, ಅದಕ್ಕೆ ಶಿಕ್ಷಕರನ್ನು ನೇಮಿಸಿ ಆ ಶಿಕ್ಷಕರಿಗೆ ವರ್ಷಪೂರ್ತಿ ಸಂಬಳವನ್ನು ನೀಡಲು ದೇಣಿಗೆ ಮೂಲಕ ಸಹಕಾರ ನೀಡಿದ ಮಾಜಿ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಪುತ್ತೂರು, ಪೂರ್ವಾಧ್ಯಕ್ಷ ಡಾ.ನಿರಂಜನ್ ರೈ ಉಪ್ಪಿನಂಗಡಿ, ವಲಯ ಸೇನಾನಿ ಹರೀಶ್ ಸಿ.ಎಚ್ ವಿಟ್ಲ, ಪ್ರದೀಪ್ ಪೂಜಾರಿ ಉಪ್ಪಿನಂಗಡಿ, ವಂದನಾ ಮುದಲಾಜೆ ಉಪ್ಪಿನಂಗಡಿ, ವಾಲ್ಟರ್ ಡಿ’ಸೋಜ ಪುತ್ತೂರು, ಅಬೂಬಕ್ಕರ್ ಕುತ್ತಾರ್ ಹಾಗೂ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ, ಬಿಡಿಎಸ್ ದಂತ ವೈದ್ಯಕೀಯ ಶಿಕ್ಷಣವನ್ನು ಮಾಡುತ್ತಿರುವ ರೋಟರಿ ಅಸಿಸ್ಟೆಂಟ್ ಗವರ್ನರ್ ಹಾಗೂ ರೋಟರಿ ಉಪ್ಪಿನಂಗಡಿ ಪೂರ್ವಾಧ್ಯಕ್ಷ ಡಾ.ರಾಜಾರಾಮ್ ಕೆ.ಬಿರವರ ದಂಪತಿ ಪುತ್ರ ಡಾ.ಹೃಷಿಕೇಶ್‌ರವರುಗಳನ್ನು ಸನ್ಮಾನಿಸಲಾಯಿತು.









