




ಪುತ್ತೂರು: ಸ ಉ ಹಿ ಪ್ರಾ ಶಾ ಕೆಮ್ಮಾಯಿ ಕೃಷ್ಣನಗರದಲ್ಲಿ ನಡೆದ ಕೋಡಿಂಬಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಸಿ ದೀಪ ಬೆಳಗಿಸಿ ಉದ್ಘಾಟಿಸಿದರು.




ವೇದಿಕೆಯಲ್ಲಿ ಶಾಲಾ SDMC ಅಧ್ಯಕ್ಷ ರವಿ, ನಗರಸಭಾ ಅಧ್ಯಕ್ಷರಾದ ಲೀಲಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಪೂಜಾರಿ ಬಡಾವು, ನಿವೃತ್ತ ಶಿಕ್ಷಕಿ ಜೂಲಿಯಾನವಾಸ್ ,ವಕೀಲರಾದ ಹರಿಣಾಕ್ಷಿ, ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಉದಯ ಆಚಾರ್ಯ, ಶಿಕ್ಷಣ ಸಂಯೋಜಕಿ ಪುಷ್ಪಾ ಮತ್ತು ಸಿ. ಆರ್. ಪಿ ದೇವಕಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.






ಶಾಲಾ ಮುಖ್ಯಗುರು ಮರಿಯಮ್ಮ ಪಿ ಎಸ್ ಸ್ವಾಗತಿಸಿ, ಶಿಕ್ಷಕರಾದ ಅಶ್ರಫ್ ವಂದಿಸಿದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿರಿಯರ ಹಾಗೂ ಕಿರಿಯರ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಕೆಮ್ಮಾಯಿ ಕೃಷ್ಣನಗರ ಶಾಲೆ ಪಡೆದುಕೊಂಡಿದೆ . ಕಾರ್ಯಕ್ರಮಕ್ಕೆ SDMC ಸದಸ್ಯರು ಪೋಷಕರು ಶಿಕ್ಷಕರು ಸಹಕಾರ ನೀಡಿದರು.










