




ಡಿ.7 ಹೊರೆಕಾಣಿಕೆ ಸಮರ್ಪಣೆ, ಬೆಳ್ಳಿಯ ಉಬ್ಬು ಛಾಯ ಬಿಂಬದ ಮೆರವಣಿಗೆ



- ಡಿ.8 ಪ್ರತಿಷ್ಠೆ, ಸಭಾ ಕಾರ್ಯಕ್ರಮ, ಏಕಾಹ ಭಜನೆ ಪ್ರಾರಂಭ
- ಡಿ.9 ಏಕಾಹ ಭಜನೆಯ ಮಂಗಳೋತ್ಸವ, ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ


ಪುತ್ತೂರು: ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರದ ಲೋಕಾರ್ಪಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಡಿ.7ರಿಂದ ಪ್ರಾರಂಭಗೊಂಡು ಡಿ.9ರ ತನಕ ಸಂಭ್ರಮಿಸಲಿದೆ ಎಂದು ಭಜನಾ ಮಂದಿರ ಲೋಕಾರ್ಪಣಾ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ ಹೇಳಿದರು.





ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ವೇ.ಮೂ ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಇವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಿ.7ರಂದು ಬೆಳಗ್ಗೆ 7 ಭಜನಾ ಮಂದಿರದಲ್ಲಿ ಗಣಮತಿ ಹೋಮದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. 9.30ರಿಂದ ಶಿವನಾಮ ಸಂಕೀರ್ಯನೆಯೊಂದಿಗೆ ದೇವರ ಬೆಳ್ಳಿಯ ಉಬ್ಬು ಛಾಯೆ ಬಿಂಬದ ಮೆರವಣಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡಲಿದ್ದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 10.30ಕ್ಕೆ ಕುಂಜೂರು ಪಂಜ ಶ್ರೀ ದುರ್ಗಾ ಭಜನಾ ಮಂದಿರದ ಬಳಿಯಿಂದ ಹಸಿರು ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆ ಪ್ರಾರಂಭಗೊಳ್ಳಲಿದೆ. ಕುಂಜೂರುಪಂಜ ಶ್ರೀದುರ್ಗಾ ಭಜನಾ ಮಂದಿರದ ಅಧ್ಯಕ್ಷ ರಾಧಾಕೃಷ್ಣ ಗೌಡ ಗೆಣಸಿನಕುಮೇರು ಹಾಗೂ ಬಂಗಾರಡ್ಕ ಶ್ರೀ ರಾಮ ಭಜನಾ ಮಂದಿರ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಹೊರೆಕಾಣಿಕೆ ಮೆರವಣಿಗೆಯು ಭಜನಾ ಮಂದಿರಕ್ಕೆ ಆಗಮನವಾದ ಬಳಿಕ ಉಗ್ರಾಣ ಮುಹೂರ್ತ ನಡೆಯಲಿದೆ. ನಂತರ ನಡೆಯುವ ಧ್ವಜಾರೋಹಣವನ್ನು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ನೆರವೇರಿಸಲಿದ್ದಾರೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ಕ್ಕೆ ವೈದಿಕರ ಆಗಮನದ ನಂತರ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನನಗಳು ನಡೆದು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಡಿ.8ರಿಂದ 6.30ಕ್ಕೆ ಸ್ಥಳ ಶುದ್ದಿ, ಸಾನಿದ್ಯ ಕಲಶ ಪೂಜೆ ನಡೆದು 8.44ಕ್ಕೆ ಶ್ರೀ ಶಕ್ತಿ ಜಟಾಧಾರಿ ದೇವರ ಬೆಳ್ಳಿಯ ಉಬ್ಬು ಛಾಯಾ ಬಿಂಬ ಪ್ರತಿಷ್ಠೆ ನಡೆಯಲಿದೆ. ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಶಿವಪಂಚಾಕ್ಷರಿ ಹೋಮ ನಡೆಯಲಿದೆ. 11ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಎಂ. ಕೆ. ಪ್ರಸಾದ್ ದೀಪಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇ ಗೌಡ, ಕಿಶೋರ್ ಬೊಟ್ಯಾಡಿ, ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡಲಿದ್ದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕುಕ್ಕುಮುಗೇರು ಶ್ರೀ ಉಳ್ಳಾಕುಲು ದೈವಸ್ಥಾನದ ಆಡಳಿತ ಮೊಕ್ತೇಸರ ಚಿಕ್ಕಪ್ಪ ನಾಕ್ ಅರಿಯಡ್ಕ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ರಿಂದ ಏಕಾಹ ಭಜನೆ ಪ್ರಾರಂಭಗೊಳ್ಳಲಿದ್ದು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಲಿದ್ದಾರೆ. ಸಂಜೆ 6ರಿಂದ ದುರ್ಗಾ ನಮಸ್ಕಾರ ಪೂಜೆ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಡಿ.9ರ ಸಂಜೆ ಏಕಾಹ ಭಜನೆ ಮಂಗಳೋತ್ಸವ, 5.30ರಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಭಜನಾ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಅಜಿತ್ ರೈ ಹೊಸಮನೆ ಮಾತನಾಡಿ, ಸುಮಾರು 25 ವರ್ಷಗಳ ಇತಿಹಾಸವಿರುವ ಭಜನಾ ಮಂದಿರವು ಇದೀಗ ವಿಶಿಷ್ಠ ರೀತಿಯಲ್ಲಿ ಸುಮಾರು ರೂ.85 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಜಾತಿ, ರಾಜಕೀಯ ಎಲ್ಲವನ್ನು ಬದಿಗೊತ್ತಿ ಹಿಂದು ಸಮಾಜದ ಸದೃಡತೆಗಾಗಿ ಭಜನಾ ಮಂದಿರ ನಿರ್ಮಾಣಗೊಂಡಿದೆ. ವಿಶಾಲ ಭಜನಾ ಮಂದಿರ, ಪಾಕಶಾಲೆ, ಕಚೇರಿ ಕೊಠಡಿ, ಸ್ನಾನಗೃಹ, ಶಾಚಾಲಯಗಳು ನಿರ್ಮಾಣ ಹಾಗೂ ಸುಮಾರು 10ಸಾವಿರ ಚದರ ಅಡಿ ವಿಸ್ತೀರ್ಣದ ಅಂಗಲಕ್ಕೆ ಇಂಟರ್ಲಾಕ್ ಅಳವಡಿಸಲಾಗಿದೆ.
ಲೋಕಾರ್ಪಣಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ರೈ ಹೊಸಮನೆ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ., ಉಪಾಧ್ಯಕ್ಷ ಲಕ್ಷ್ಮಣ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಭಜನೆಯಿಂದ ಭಗವಂತನನ್ನು ಕಾಣಬಹುದು, ಆಸ್ತಿಕ ಸಮಾಜವನ್ನು ಒಟ್ಟು ಗೂಡಿಸುವ ಉದ್ದೇಶದಿಂದ ಸುಮಾರು 26 ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಭಜನಾ ಮಂದಿರ ಪ್ರಾರಂಭಿಸಲಾಗಿತ್ತು. ಇಲ್ಲಿ ಪ್ರತಿ ಶುಕ್ರವಾರ ಭಜನೆ, ಸಂಕ್ರಮಣದ ದಿನ ವಿಶೇಷ ಭಜನೆ, ವಾರ್ಷಿಕವಾಗಿ ಸತ್ಯನಾರಾಯಣ ಪೂಜೆ, ಗಣೇಶ ಚತುರ್ಥಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ನೂತನ ಭಜನಾ ಮಂದಿರ ನಿರ್ಮಿಸುವ ಉದ್ದೇಶದಿಂದ ದೈವಜ್ಞ ಪಂಜ ಸತ್ಯನಾರಾಯಣ ಭಟ್ರವರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆ ನಡೆಸಿ, 2022ರಲ್ಲಿ ಭಜನಾ ಮಂದಿರದ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಇದೀಗ ಭವ್ಯ ಭಜನಾ ಮಂದಿರವು ನಿರ್ಮಾಣಗೊಂಡಿದೆ. ಭಜನಾ ಮಂದಿರದ ನಿರ್ಮಾಣದಲ್ಲಿ ಶೇ.60ರಷ್ಟು ಕೆಲಸಗಳು ಊರಿನ ಭಕ್ತಾದಿಗಳ ಕರಸೇವೆಯ ಮೂಲಕ ನಡೆದಿರುವುದು ವಿಶೇಷವಾಗಿದೆ.
-ಸೀತಾರಾಮ ರೈ ಕೈಕಾರ, ಅಧ್ಯಕ್ಷರು ಲೋಕಾರ್ಪಣ ಸಮಿತಿ.
ಭಜನಾ ಮಂದಿರ ನಿರ್ಮಾಣದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಅಶೋಕ್ ಕುಮಾರ್ ರೈ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇ ಗೌಡ, ಕಿಶೋರ್ ಬೊಟ್ಯಾಡಿಯವರು ಸರಕಾರದ ಅನುದಾನ ಹಾಗೂ ವೈಯಕ್ತಿಕ ದೇಣಿಗೆ ನೀಡಿರುತ್ತಾರೆ. ಅಲ್ಲದೆ ಊರ ಪರವೂರು ದಾನಿಗಳು ಮತ್ತು ಭಕ್ತಾದಿಗಳು ಆರ್ಥಿಕ ಹಾಗೂ ವಸ್ತು ರೂಪದಲ್ಲಿ ಸಹಕಾರ ನೀಡಿರುತ್ತಾರೆ.
-ಅಜಿತ್ ರೈ ಹೊಸಮನೆ,
ಅಧ್ಯಕ್ಷ ಭಜನಾ ಮಂದಿರದ ಆಡಳಿತ ಸಮಿತಿ







