ಶಾಸಕರ ಭೇಟಿಗೆ ಟೋಕನ್ ವ್ಯವಸ್ಥೆಗೆ ಕಲಿಯುಗ ಸೇವಾ ಸಮಿತಿಯಿಂದ ಮನವಿ

0

ಪುತ್ತೂರು: ಸಾರ್ವಜನಿಕರು ಪುತ್ತೂರು ಶಾಸಕರನ್ನು ಭೇಟಿ ಮಾಡಲು ವಾರದ ಒಂದು ದಿನ ಸೋಮವಾರ ಮಾತ್ರ ಅವಕಾಶಗಳಿರುತ್ತದೆ. ಈ ಸಂದರ್ಭ ಟೋಕನ್ ವ್ಯವಸ್ಥೆ ಮೂಲಕ ಭೇಟಿಗೆ ಅವಕಾಶ ಮಾಡಿದಲ್ಲಿ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತದೆ ಎಂದು ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.

ಈಗಿರುವ ವ್ಯವಸ್ಥೆಯಂತೆ ಭೇಟಿಗೆ ಮೊದಲು ಬಂದವರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇದಕ್ಕಾಗಿ ಬೆಳಗ್ಗಿನಿಂದಲೇ ಸಾಲಿನಲ್ಲಿ ಕಾಯಬೇಕಾಗುತ್ತದೆ. ದೂರದೂರದಿಂದ ಬಂದವರು, ವೃದ್ಧರು, ವೈಧ್ಯರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಮೊದಲು ಬಂದವರಿಗೆ ಟೋಕನ್‌ಗಳನ್ನು ಕೊಟ್ಟು ಕ್ರಮ ಸಂಖ್ಯೆಯಂತೆ ಜನರಿಗೆ ಸಾಸಕರ ಬೇಟಿಗೆ ಅವಕಾಶ ಕಲ್ಪಸಿದಲ್ಲಿ ತುಂಬಾ ಜನ ಇದರ ಪ್ರಯೋಜನ ಪಡೆಯುತ್ತಾರೆ ಇದರಿಂದ ಜನರಿಗೆ ಶಾಸಕರ ಭೇಟಿ ಸುಲಭವಾಗಲಿದೆ ಎನ್ನುವುದು ಬಹು ಜನರ ಅಪೇಕ್ಷೆಯೂ ಆಗಿದೆ. ಈ ಕುರಿತು ಪರಸೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here