




ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಆಶ್ರಯದಲ್ಲಿ ರೋಟರಿ ಜಿಲ್ಲಾ ಕ್ರೀಡಾಕೂಟ “ಖೇಲ್ ಮಿಲನ್-2025” ಡಿ.6 ಹಾಗೂ 7 ರಂದು ದರ್ಬೆ ಫಿಲೋಮಿನಾ ಕಾಲೇಜು ಕ್ರೀಡಾಂಗಣ, ಸುದಾನ ಸ್ಪೋರ್ಟ್ಸ್ ಕ್ಲಬ್, ದಿ ಪುತ್ತೂರು ಕ್ಲಬ್ ಇಲ್ಲಿ ನಡೆಯಲಿದೆ.



ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಡಿ.7 ರಂದು ಕ್ರೀಡಾಕೂಟದ ಉದ್ಘಾಟನೆ ನೆರವೇರಲಿದ್ದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್, ಜಿಲ್ಲಾ ಕ್ರೀಡಾ ಚೇರ್ಮನ್ ಬಾಲಚಂದ್ರ, ವೈಸ್ ಚೇರ್ಮನ್ ಶಿವರಾಮ ಏನೆಕಲ್, ರೋಟರಿ ವಲಯ ಐದರ ವಲಯ ಸೇನಾನಿ ಭರತ್ ಪೈರವರು ಭಾಗವಹಿಸಲಿದ್ದಾರೆ.





ಡಿ.6 ರಂದು ಶಟಲ್ ಬ್ಯಾಡ್ಮಿಂಟನ್ ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್, ಟೆನ್ನಿಸ್ ಪಂದ್ಯವನ್ನು ಮರೀಲು ದಿ ಪುತ್ತೂರು ಕ್ಲಬ್, ಡಿ.7 ರಂದು ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಅಥ್ಲೆಟಿಕ್ಸ್ ಹಾಗೂ ಇತರ ಆಟಗಳು ಜರಗಲಿವೆ ಎಂದು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಖೇಲ್ ಮಿಲನ್ 2025 ಇದರ ಚೇರ್ಮನ್ ಎಕೆಎಸ್ ವಿಶ್ವಾಸ್ ಶೆಣೈ, ಕಾರ್ಯದರ್ಶಿ ನವೀನ್ ರೈ ಪಂಜಳರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







