




ಚೀಟಿ ಎತ್ತುವ ಮೂಲಕ ಫಲಾನುಭವಿಗಳ ಆಯ್ಕೆ ನಡೆಸಿದ್ದೇವೆ: ಶಾಸಕ ಅಶೋಕ್ ರೈ



ಪುತ್ತೂರು: ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ನಡೆದಿದ್ದು, ಪುತ್ತೂರು, ಬಂಟ್ವಾಳ ತಾಲೂಕಿನ ಹಲವರಿಗೆ ಯೋಜನೆಯು ಫಲ ನೀಡಲಿದೆ. ಸರಕಾರದ ಆದೇಶದಂತೆ ಸೀಮಿತ ಅರ್ಜಿದಾರರಿಗೆ ಮಾತ್ರ ಈ ಯೋಜನೆ ನೀಡಲಾಗುತ್ತಿದ್ದು, ಫಲಾನುಭವಿಗಳನ್ನು ಚೀಟಿ ಎತ್ತುವ ಮೂಲಕ ಪಕ್ಷಾತೀತವಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.





ಕೆಲವೊಂದು ಯೋಜನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಮತ್ತೆ ಕೆಲವು ಯೋಜನೆಗಳು ಒಂದೆರಡು ಮಂದಿಗೆ ಮಾತ್ರ ನೀಡಲು ಅವಕಾಶವಿರುತ್ತದೆ. ಈ ಎಲ್ಲಾ ಯೋಜನೆಗಳಿಗೂ ಅರ್ಜಿಗಳು ತುಂಬಾ ಬಂದಿದ್ದು ಈ ಕಾರಣಕ್ಕೆ ಅರ್ಜಿ ಹಾಕಿರುವ ಎಲ್ಲಾ ಫಲಾನುಭವಿಗಳ ಹೆಸರನ್ನು ಬರೆದು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿದೆ. ಯಾರಿಗೂ ಅನ್ಯಾಯ ಆಗಬಾರದು , ಮನಸ್ಸಿಗೆ ನೋವಾಗಬಾರದು ಎಂಬ ಉದ್ದೇಶದಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದ್ದೇವೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಆಯ್ಕೆಯಾದ ಅದೃಷ್ಟ ಫಲಾನುಭವಿಗಳು:
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಗಂಗಾ ಕಲ್ಯಾಣ ಯೋಜನೆ ಉಮೇಶ ಬಲ್ನಾಡು , ಕೇಶವ ಶಾಂತಿಗೋಡು, ಚನಿಯ ಬಡಗನ್ನೂರು ,ಚೋಮ ಕೊಳ್ತಿಗೆ ಗ್ರಾಮ , ಕವಿತ ನೆಟ್ಟಣಿಗೆ ಮುಡ್ನೂರು ,ಗಣೇಶ ಆರ್ಯಾಪು ಗ್ರಾಮ ,ಕೊಗ್ಗು ಮುಗೇರ ಅಳಿಕೆ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು , ಚನಿಯ ಮುಗೇರ ನಿಡ್ಪಳ್ಳಿ ಗ್ರಾಮ ,ರಾಧ ಆರ್ಯಾಪು ಗ್ರಾಮ ,ಗೀತಾ ಸರ್ವೆ ಗ್ರಾಮ ,ಚನಿಯ ಬೆಟ್ಟಂಪಾಡಿ ಗ್ರಾಮ ,ಯಮುನಾ ಪೆರುವಾಯಿ ಗ್ರಾಮ ಬಂಟ್ವಾಳ ತಾಲೂಕು ,ಕಮಲ ಪುಣಚ ಗ್ರಾಮ ಪುತ್ತೂರು ತಾಲೂಕು ,ಕಾಂತಪ್ಪ ಕಬಕ ಗ್ರಾಮ ,ಪುಣಚ ಗ್ರಾಮ ಬಾಬು ಮುಗೇರ ಇವರು ಆಯ್ಕೆಯಾಗಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ಕೃಷ್ಣಪ್ಪ ಪಡ್ನೂರು ಗ್ರಾಮ ಪುತ್ತೂರು ತಾಲೂಕು ಹಾಗೂ ಉಮೇಶ ಕೊಡಿಂಬಾಡಿ ಅಂಚೆ ಬೆಳ್ಳಪ್ಪಾಡಿ ಗ್ರಾಮ ಪುತ್ತೂರು ತಾಲೂಕು ರವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಆದಿಜಾಂಬ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ದಿವ್ಯ ಕೆ ದರ್ಬೆ ಇವರು ಆಯ್ಕೆಯಾಗಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಹೈನುಗಾರಿಕೆ ಯೋಜನೆಯಡಿ ಪೂವಪ್ಪ ಎ ಪೆರ್ನೆ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಆಯ್ಕೆಯಾಗಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆ– ರಾಮಣ್ಣ ವಿಟ್ಲಮುಡ್ನೂರು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಹಾಗೂ ವಿನಾಯಕ ಕೆ ಮಾಣಿಲ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ಆಯ್ಕೆಯಗಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಸ್ವಯಂ ಉದ್ಯೋಗ ನೇರಸಾಲ ಯೋಜನೆ-
ಕತ್ತೋಡಿ ಕೆದಂಬಾಡಿ ಗ್ರಾಮ , ಕೆ ಶಾರದ ಕೊಳ್ತಿಗೆ ಗ್ರಾಮ ,ಬಾಬು ಪಿ ಆರ್ಯಾಪು ಗ್ರಾಮ,ಡಿಕಯ್ಯ ವಿಟ್ಲ ಕಸಬ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು , ಸಂದೇಶ ಕೆ ಅಳಿಕೆ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ,ರವಿ ಬೆಳ್ಳಿಪ್ಪಾಡಿ ಗ್ರಾಮ ಇವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಆದಿಜಾಂಬ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಯೋಜನೆ-
ಮುರಳಿ ಎಸ್ ನೆಕ್ಕಿಲಾಡಿ ಗ್ರಾಮ ಪುತ್ತೂರು ತಾಲೂಕುರವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಆದಿಜಾಂಬ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಯೋಜನೆ-
ಪ್ರಶಾಂತ್ ಬಜತ್ತೂರು ಗ್ರಾಮ ಪುತ್ತೂರು ತಾಲೂಕುರವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಆದಿಜಾಂಬ ಅಭಿವೃದ್ದೀ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಸ್ವಾವಲಂಭಿ ಸಾರಥಿ-4 ಚಕ್ರದ ವಾಹನ ಯೋಜನೆಯಡಿ ಯೋಜನೆ-
ಭಾಸ್ಕರ ಪಿ ಆರ್ಯಾಪು ಗ್ರಾಮ,ಪುಷ್ಪರಾಜ ಚಿಕ್ಕಮುಡ್ನೂರು ಗ್ರಾಮ ರವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ ದಕ್ಷಿಣ ಕನ್ನಡ ಜಿಲ್ಲೆ 2025-26ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿ ಯೋಜನೆ- ಗುರಿ- 01 ಕೊಳ್ತಿಗೆ ಗ್ರಾಮದ
ಕಲೈಚೆಲ್ವಿ .ಎಸ್ ಆಯ್ಕೆಯಾಗಿದ್ದಾರೆ.






