




ಉಪ್ಪಿನಂಗಡಿ: ಇನ್ಸಿಟ್ಯುಷನ್ ಆಫ್ ಕರಾಟೆ ಆಂಡ್ ಅಲೈಡ್ಆರ್ಟ್ಸ್ ಬಜಾಲ್ ಹಾಗೂ ಎಕ್ಕೂರು ಡೋಜೋಸ್ ಇವರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಪ್ರವೀಣ್ಕುಮಾರ್ ಮೆಮೊರಿಯಲ್ಕಪ್ 36ನೇ ರಾಜ್ಯಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್ ಶಿಪ್ 2025 ಕರಾಟೆ ಸ್ಪರ್ಧೆಯಲ್ಲಿಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಕ್ಷತ್ ಎಸ್. ರೈ ಇವರು ವೈಯಕ್ತಿಕ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.



ಇವರು ಇಳಂತಿಲ ನಿವಾಸಿ ಶರತ್ ರೈ ಹಾಗೂ ಶಕಿತ ಎಸ್. ರೈ ದಂಪತಿಯ ಪುತ್ರ. ಈತನ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ಅಭಿನಂದನೆ ಸಲ್ಲಿಸಿದ್ದಾರೆ.














