




ವಿಟ್ಲ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಮೂವರ ಪೈಕಿ ಇಬ್ಬರನ್ನು ವಿಟ್ಲ ಠಾಣಾ ಪೊಲೀಸರು ಬಂಽಸಿರುವ ಘಟನೆ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ಡಿ.10 ರಂದು ನಡೆದಿದೆ.



ಮಣಿಪುರ ಮೂಲದ ಬಿಸ್ವಜಿತ್ ದೇಕಾ (28 ವ.) ಹಾಗೂ ಅಳಿಕೆ ನಿವಾಸಿ ಆನಂದ ಪೂಜಾರಿ (69 ವ.) ಬಂಧಿತರು. ಈ ಪೈಕಿ ನಾರಾಯಣ ಚೆಲ್ಲಡ್ಕ ರವರು ಪರಾರಿಯಾಗಿದ್ದಾರೆ.





ಡಿ.10ರಂದು ರಾತ್ರಿ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿನ ರಸ್ತೆ ಬದಿಯಲ್ಲಿ ಕುಳಿತು ಕಾನೂನು ಬಾಹಿರವಾಗಿ ಮದ್ಯಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ, ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿ ಮೂವರ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ. ಆ ಪೈಕಿ ಓರ್ವ ಪರಾರಿಯಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










