




ಪುತ್ತೂರು: ಕಡಬ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಂದೀಪನಿ ವಿದ್ಯಾ ಸಂಸ್ಥೆಯ ಪ್ರೌಢ ಶಾಲಾ ವಿಭಾಗವು ಸಮಗ್ರ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.




ವಿಜೇತರಾದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿವರ :
ಹಿಂದಿ ಭಾಷಣ -ಯಜ್ಞ ಜೆ ಎಸ್- ಪ್ರಥಮ, ಸಂಸ್ಕೃತ ಭಾಷಣ – ಸಿಂಚಿತ ಪಿ-ದ್ವಿತೀಯ, ಗಝಲ್ -ವಿಶಾಖ ಪಿ-ದ್ವಿತೀಯ, ಚಿತ್ರಕಲೆ – ಧನ್ವಿತ್ ಕುಲಾಲ್ -ದ್ವಿತೀಯ, ಭಾವಗೀತೆ-ಆರಾಧ್ಯಸಿ,ಯು- ದ್ವಿತೀಯಸ್ಥಾನ ಪಡೆದು ಯಜ್ಞ ಜೆ ಎಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.





ಇವರಿಗೆ ಶಾಲಾ ಅಧ್ಯಕ್ಷರಾದ ಎಸ್ ಜಯರಾಮ ಕೆದಿಲಾಯ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಅಭಿನಂದನೆಗಳನ್ನು ತಿಳಿಸಿರುತ್ತಾರೆ ಎಂದು ಮುಖ್ಯ ಗುರುಗಳಾದ ಪ್ರಸನ್ನ ಕೆ ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





