




ಆಲಂಕಾರು: ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 20ನೇ ಸೇವೆ ’ ಜಾಂಬವತೀ ಕಲ್ಯಾಣ’ ಡಿ.13ರಂದು ಸಂಜೆ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.



ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲ ಭಟ್ ನೈಮಿಷ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ದಿವಾಕರ ಆಚಾರ್ಯ ಹಳೆನೇರೆಂಕಿ, ಹರಿ ನಗ್ರಿ ಸಹಕರಿಸಿದರು. ಮುಮ್ಮೇಳದಲ್ಲಿ ಗೀತಾ ಕುದ್ವಣ್ಣಾಯ ಕಲ್ಲೇರಿ (ಬಲರಾಮ), ರಾಮ್ ಪ್ರಕಾಶ್ ಕೊಡಂಗೆ (ನಾರದ), ಗೋಪಾಲ ಭಟ್ ನೈಮಿಷ (ಕೃಷ್ಣ 1), ಗುರುಪ್ರಸಾದ್ ಆಲಂಕಾರು (ಜಾಂಬವಂತ), ದಿವಾಕರ ಆಚಾರ್ಯ ಹಳೆನೇರೆಂಕಿ (ಕೃಷ್ಣ 2) ಸಹಕರಿಸಿದರು. ಕೊರಂಬಾಡಿ ರಕ್ಷಿತ್‌ರಾಜ್ ಮತ್ತು ಮನೆಯವರು ಸೇವಾರ್ಥಿಗಳಾಗಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ಮತ್ತು ಸದಸ್ಯರು, ದೇವಸ್ಥಾನದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಸ್ವಾಗತಿಸಿ, ವಂದಿಸಿದರು.













