ಉದನೆ‌ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟ

0

ಕ್ರೀಡೆಯಿಂದ ನಾಯಕತ್ವದ ಗುಣ ಬೆಳೆಯುತ್ತದೆ-ಮಾಮಚ್ಚನ್ .ಎಂ

ಪುತ್ತೂರು: ಕ್ರೀಡೆಯಿಂದ ನಾಯಕತ್ವದ ಗುಣ ಬೆಳೆಯುತ್ತದೆ.ಪ್ರತಿಯೊಬ್ಬರಲ್ಲಿ ಪ್ರತಿಭೆ ಇದೆ‌.ಅದನ್ನು ಅನಾವರಣ ಗೊಳಿಸುವ ಅವಕಾಶವನ್ನು ಸ್ಪರ್ಧೆಗಳು ಮಾಡುತ್ತದೆ.ಆರೋಗ್ಯ ನಮ್ಮ ಸಂಪತ್ತು.ಹವ್ಯಾಸಕ್ಕಾಗಿ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ .ದ.ಕ ಜಿಲ್ಲಾ ಸಮಿತಿ ಇದರ ಜಿಲ್ಲಾ ಕಾರ್ಯಾದಕ್ಷ ಮಾಮಚ್ಚನ್ ಎಂ ಹೇಳಿದರು‌.

ಅವರು ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲಾ ಕ್ರೀಡಾಪಟುಗಳಿಗೆ ಐಸ್ ಕ್ರೀಮ್ ವಿತರಿಸಿ ಶುಭವನ್ನು ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಹ ಸಂಚಾಲಕ ಡೀಕನ್ ಜಾರ್ಜ್, ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ನೋಡಬೇಕು .ನಮ್ಮ ಎದುರು ಸ್ಪರ್ಧಿಸುತ್ತಿರುವ ಸ್ಪರ್ಧಿಗಳು ನಮ್ಮ ಸ್ನೇಹಿತರೇ ಆಗಿರುತ್ತಾರೆ.ಅವರ ಜೊತೆ ಗೆದ್ದರೂ ಸೋತರೂ ಅದರ ಅನುಭವವನ್ನು ಸವಿಯ ಬೇಕು ಎಂದರು.

ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಗುರು ಶ್ರೀಧರ ಗೌಡ ಪ್ರಾಸ್ತಾವಿಕ ಮಾತನಾಡಿದರು.ವೇದಿಕೆಯಲ್ಲಿ ಕನ್ನಡ ಮಾಧ್ಯಮ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಜಯಪ್ರಕಾಶ್,ಆಂಗ್ಲ ಮಾಧ್ಯಮ ವಿಭಾಗದ ರಕ್ಷಕ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಪಿಂಕಿ ಸಾಜು ಉಪಸ್ಥಿತರಿದ್ದರು.ನಿಲಯವಾರು ವಿದ್ಯಾರ್ಥಿಗಳ ಪಥ ಸಂಚಲನ ಹಾಗೂ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ‌ ಎಲ್ಲರ ಗಮನ ಸೆಳೆಯಿತು.ದೈಹಿಕ ಶಿಕ್ಷಕರಾದ ರಾಜೇಶ್ ರೈ ಸ್ವಾಗತಿಸಿ ಜಿಮ್ಸನ್ ವರ್ಗೀಸ್ ವರ್ಗೀಸ್ ವಂದಿಸಿದರು.ಶಿಕ್ಷಕ ಯಶೋಧರ ಕಾರ್ಯಕ್ರಮ ನಿರೂಪಿದರು.

LEAVE A REPLY

Please enter your comment!
Please enter your name here