




ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪ್ರೇರಣೆಯಿಂದ ಪ್ರಾರಂಭಗೊಂಡ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಪುತ್ತೂರು ವತಿಯಿಂದ ರಾಜ್ಯದ ವಿವಿಧೆಡೆ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ನಡೆಸುವ ಚಿಂತನೆಯಂತೆ ಇದೀಗ ಸುಳ್ಯ ತಾಲೂಕಿನ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲೂ ಡಿ.15ರಂದು ಉದ್ಘಾಟನೆಗೊಂಡಿತು. ಶ್ರೀನಿವಾಸ ಹೆಬ್ಬಾರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.




ಈ ಸಂದರ್ಭ ದೇವಾಲಯ ಸಂವರ್ಧನಾ ಸಮಿತಿ ಪ್ರಮುಖ್ ಕೇಶವ ಪ್ರಸಾದ್ ಮುಳಿಯ ಹಿಂದೂ ಧಾರ್ಮಿಕ ಶಿಕ್ಷಣದ ಕುರಿತು ಪ್ರಾಸ್ತಾವಿಕ ಮಾತಾಡಿ ವಿದ್ಯಾರ್ಥಿಗಳಿಗೆ ಸುಜ್ಞಾನ ದೀಪಿಕೆ ಪುಸ್ತಕವನ್ನು ಹಸ್ತಾಂತರಿಸಿದರು. ಅಧ್ಯಕ್ಷತೆ ವಹಿಸಿದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಅವರು ಧಾರ್ಮಿಕ ಶಿಕ್ಷಣದ ಮಹತ್ವ ಕುರಿತು ಮಾತಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಸಂಯೋಜಕಿ ಶ್ವೇತಾ ಕಾನಾವು ಸ್ವಾಗತಿಸಿ, ಪೂರ್ಣಿಮ ಉಮೇಶ್ ವಂದಿಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರದ ಸಂಯೋಜಕಿ ಅಶ್ವಿನಿ ಕೂಡಿಬೈಲು ನೆರವೇರಿಸಿದರು.





ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಆರಂಭದ ತರಗತಿಯಾಗಿ ಶ್ಲೋಕದ ಅರ್ಥ ವಿವರಿಸಿ, ಭಜನೆ ಹಾಗೂ ಚಟುವಟಿಕೆ ತಿಳಿಸಿದರು. ಸಂಯೋಜಕರಾದ ಡಾ. ವಿಜಯಸರಸ್ವತಿ ಅವರು ಶ್ಲೋಕ ಅರ್ಥ ಹಾಗೂ ದೈನಂದಿನ ಜೀವನದ ಆಚಾರ ವಿಚಾರಗಳನ್ನು ವಿವರಿಸಿದರು. ಸಂಯೋಜಕರಾದ ಶಂಕರಿ ಶರ್ಮ ಅವರು ಕಥೆ ಹಾಗೂ ಸದ್ವಿಚಾರ ವನ್ನು ಹೇಳಿಕೊಟ್ಟರು. ಕಾರ್ಯಕ್ರಮದಲ್ಲಿ ಗಣ್ಯರು, ಸ್ಥಳೀಯ ಭಕ್ತಾದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.







