




ಪುತ್ತೂರು: ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಸುಳ್ಯ ಕ್ಷೇತ್ರದ 21 ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯರ ಶಿಫಾರಸ್ಸಿನ ಮೇರೆಗೆ ರಾಜ್ಯ ವಿಪತ್ತು ಉಪಶಮನ (SDMF) ನಿಧಿಯಿಂದ ಅನುದಾನ 10 ಕೋಟಿ 82 ಲಕ್ಷ ರೂ. ಬಿಡುಗಡೆಯಾಗಿದೆ.



ಈ ನಿಧಿಯಿಂದ ವಿಶೇಷವಾಗಿ ನೆಲ್ಯಾಡಿ ಗ್ರಾಮದ ಬೈಲು-ಕುತ್ಯಾಡಿ ಸೇತುವೆಗೆ 60 ಲಕ್ಷ ರೂ. ಮತ್ತು ಆಲಂಕಾರು ಗ್ರಾಮದ ಕಕ್ವೆ ರಸ್ತೆ ಮರು ನಿರ್ಮಾಣಕ್ಕೆ 50ಲಕ್ಷ ರೂ. ಹಾಗೂ ಸುಳ್ಯ ತಾಲೂಕಿನ ವಿವಿಧ ರಸ್ತೆ ಮತ್ತು ಸೇತುವೆಗಳು ಹಾಗೂ ತಡೆಗೊಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದೆ.













