





ಪುತ್ತೂರು: ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿರುವ ಮನೈ ಆರ್ಕೆಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಎವಿಯೇಷನ್ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಇಂಟರ್ನ್ಯಾಷನಲ್ ಡಿಪ್ಲೋಮಾ ಇನ್ ಏರ್ಲೈನ್ ಅಂಡ್ ಏರ್ಪೋರ್ಟ್ ಅಪರೇಷನ್ ಕೋರ್ಸ್ ನ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ALVIDA 2K25 ಡಿ. 16 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.




ಶ್ರೀ ಪ್ರಗತಿ ಎಜುಕೇಶನ್ ಫೌಂಡೇಶನ್ ಮೂಡಬಿದ್ರೆ ಇದರ ಕಾರ್ಯದರ್ಶಿ ಗೋಕುಲ್ ನಾಥ್ ಪಿ. ವಿ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಮಾಧವಿ ಎನ್. ಸಿ. ಮಾತನಾಡಿ, ಮುಂದೆಯೂ ಕಾಲೇಜಿನೊಂದಿಗೆ ನಿಮ್ಮ ನಿರಂತರ ಸಂಪರ್ಕವಿರಲಿ ಮುಂದಿನ ವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ರಶ್ಮಿತಾ ಎಂ ಎಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ತಮ್ಮ ಒಂದು ವರ್ಷದ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಶ್ರೀ ಪ್ರಗತಿ ಎಜುಕೇಶನ್ ಫೌಂಡೇಶನ್ ಇದರ ಉಪಾಧ್ಯಕ್ಷೆ ಹೇಮಲತಾ ಗೋಕುಲ್ ನಾಥ್ ಉಪಸ್ಥಿತರಿದ್ದರು.







ಕಾರ್ಯಕ್ರಮದ ಆಯೋಜಕರಾದ ಕಿರಿಯ ವಿದ್ಯಾರ್ಥಿಗಳು ಬೀಳ್ಕೊಡುತ್ತಿರುವ ಹಿರಿಯ ವಿದ್ಯಾರ್ಥಿಗಳಿಗೆ ತಮ್ಮ ಕಿರು ಕಾಣಿಕೆ, ಶುಭಾಶಯ ಪತ್ರಗಳನ್ನು ನೀಡಿ, ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ನಡೆಸಿ ಬೀಳ್ಕೊಟ್ಟರು. ಪ್ರಥಮ ಬಿಬಿಎ ವಿದ್ಯಾರ್ಥಿಗಳಾದ ಅನೂಪ್ ಸ್ಯಾಮ್ ಮಸ್ಕರೇನಸ್ ಸ್ವಾಗತಿಸಿ, ಸುಜ್ಞಾನಂದ ಎಸ್ ಆಚಾರ್ಯ ವಂದಿಸಿದರು. ಮೂರನೇ ಬ್ಯಾಚ್ ವಿದ್ಯಾರ್ಥಿನಿಯರಾದ ಹರ್ಷಿತ ಮತ್ತು ದೇವಿಕಾ ಪ್ರಾರ್ಥಿಸಿ, ಬಿಬಿಎ ವಿದ್ಯಾರ್ಥಿನಿಯರಾದ ಫಾತಿಮಾ ಹಾಗೂ ರಿಯಾ ಕೆ.ಜೆ. ಕಾರ್ಯಕ್ರಮವನ್ನು ನಿರೂಪಿಸಿದರು.









