ಬಜತ್ತೂರು ಶಾಲೆಯಲ್ಲಿ ಮಕ್ಕಳ ಕಲರವ ’ ಪ್ರತಿಭಾ ಪುರಸ್ಕಾರ 2025’

0

ನೆಲ್ಯಾಡಿ: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಬಜತ್ತೂರು, ಸರಕಾರಿ ಪ್ರೌಢಶಾಲೆ ವಳಾಲು, ಅಂಗನವಾಡಿ ಕೇಂದ್ರ ನೀರಕಟ್ಟೆ ಮತ್ತು ವಳಾಲು ಇವುಗಳ ಸಹಭಾಗಿತ್ವದಲ್ಲಿ ಮಕ್ಕಳ ಕಲರವ’ ಪ್ರತಿಭಾ ಪುರಸ್ಕಾರ 2025’ ಕಾರ್ಯಕ್ರಮ ಡಿ.30ರಂದು ಬಜತ್ತೂರು ಸರಕಾರಿ ಹಿ.ಪ್ರಾ.ಶಾಲಾ ಜ್ಞಾನದೇಗುಲ ರಂಗಮಂದಿರದಲ್ಲಿ ನಡೆಯಿತು.


ಪ್ರತಿಭಾ ಪುರಸ್ಕಾರ ಸಮಿತಿ ಗೌರವಾಧ್ಯಕ್ಷ ವಿಲ್ಫ್ರೆಡ್ ಡಿ.ಸೋಜ ಅವರು ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು. ಬಳಿಕ ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷ ಧನಂಜಯ ಬಾರಿಕೆ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್. ಉದ್ಘಾಟಿಸಿ ಶುಭಹಾರೈಸಿದರು. ಬಜತ್ತೂರು ಗ್ರಾ.ಪಂ.ಸದಸ್ಯರಾದ ಉಮೇಶ ಓಡ್ರಪಾಲ್, ಪ್ರೆಸಿಲ್ಲಾ ಡಿ.ಸೋಜ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ., ಶಿಶು ಅಭಿವೃದ್ಧಿ ಇಲಾಖೆ ಉಪ್ಪಿನಂಗಡಿ ವಲಯ ಮೇಲ್ವಿಚಾರಕಿ ಉಮಾವತಿ, ಪ್ರತಿಭಾ ಪುರಸ್ಕಾರ ಸಮಿತಿ ಗೌರವಾಧ್ಯಕ್ಷ ವಿಲ್ಫ್ರೆಡ್ ಡಿ.ಸೋಜ, ಶಿಕ್ಷಣ ಸಮನ್ವಯ ಟ್ರಸ್ಟ್ ಅಧ್ಯಕ್ಷರಾದ ಉದಯರಾವ್ ಮಣಿಕ್ಕಳ, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ನಾಕ್, ವಳಾಲು ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಗಣ್ಯಶ್ರೀ, ಅನಿಸಾ, ಪ್ರತಿಭಾಪುರಸ್ಕಾರ ಸಮಿತಿ ಕೋಶಾಧಿಕಾರಿ ಸಫ್ರಾರಾಜ್, ವಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಸಂತ ಪಿಜಕ್ಕಳ, ವಳಾಲು ಎಂಜೆಎಂ ಅಧ್ಯಕ್ಷ ರಫೀಕ್ ಎಂ., ಹಿರಿಯ ವಿದ್ಯಾರ್ಥಿ ವಿನೋದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರಾಥಮಿಕ ಶಾಲಾ ವರದಿಯನ್ನು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಂಜುನಾಥ್. ಪ್ರೌಢಶಾಲಾ ವರದಿಯನ್ನು ಪ್ರೌಢಶಾಲಾ ಮುಖ್ಯಶಿಕ್ಷಕಿ ಯಶೋಧ ವಿ. ವಾಚಿಸಿದರು. ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ದಡ್ಡು ಸ್ವಾಗತಿಸಿದರು. ಪ್ರೌಢಶಾಲಾ ಹಿರಿಯ ಶಿಕ್ಷಕಿ ಮಾಲತಿ ವಂದಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕ ಮೋಹನಚಂದ್ರ ಮತ್ತು ಪ್ರೌಢಶಾಲಾ ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.

ಗೌರವಾರ್ಪಣೆ:
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಡುಗೆ ಸಿಬ್ಬಂದಿಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ದತ್ತಿ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಣ ಸಮನ್ವಯ ಟ್ರಸ್ಟ್ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಬಜತ್ತೂರು ಶಾಲಾ ವಾಹನ ಚಾಲಕರು, ನಿರ್ವಾಹಕರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here