







ಅಧ್ಯಕ್ಷೆ; ಪ್ರವೀಣಿ ಸುಧಾಕರ್ ಶೆಟ್ಟಿ, ಕಾರ್ಯದರ್ಶಿ; ಶ್ರೇಯಸ್ ಶೆಟ್ಟಿ, ಕೋಶಾಧಿಕಾರಿ; ಹರೀಶ್ ರೈ
ಮಹಿಳಾ ಜೆಸಿ ಸಂಯೋಜಕರಾಗಿ ನವ್ಯಪ್ರಸಾದ್


ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜ.3ರಂದು ನೆಲ್ಯಾಡಿ ಗೌರಿಜಾಲ್ ಆರ್ಕೇಡ್ನಲ್ಲಿ ನಡೆಯಿತು.



ಜೆಸಿಐ ನೆಲ್ಯಾಡಿಯ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಚುನಾವಣಾ ಅಧಿಕಾರಿ ಸುಚಿತ್ರ ಬಂಟ್ರಿಯಾಲ್ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. 2026ಚನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರವೀಣಿ ಸುಧಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ಶ್ರೇಯಸ್ ಶೆಟ್ಟಿ, ಮಹಿಳಾ ಜೆಸಿ ಸಂಯೋಜಕರಾಗಿ ನವ್ಯ ಪ್ರಸಾದ್, ಕೋಶಾಧಿಕಾರಿಯಾಗಿ ಹರೀಶ್ ರೈ ಅಮುಂಜ ಆಯ್ಕೆಯಾದರು.
ಜೆಜೆಸಿ ಸಂಯೋಜಕರಾಗಿ ವಿಶ್ವನಾಥ ಶೆಟ್ಟಿ, ಆಡಳಿತ ವಿಭಾಗದ ಉಪಾಧ್ಯಕ್ಷರಾಗಿ ಇಸ್ಮಾಯಿಲ್, ವ್ಯವಹಾರ ವಿಭಾಗದ ಉಪಾಧ್ಯಕ್ಷರಾಗಿ ಲೀಲಾಮೋಹನ್, ತರಬೇತಿ ವಿಭಾಗದ ಉಪಾಧ್ಯಕ್ಷರಾಗಿ ಜಾಹ್ನವಿ, ಸಮುದಾಯ ವಿಭಾಗದ ಉಪಾಧ್ಯಕ್ಷರಾಗಿ ಸೌಮ್ಯ ವಿಶ್ವನಾಥ್ ಶೆಟ್ಟಿ, ಕಾರ್ಯಕ್ರಮ ವಿಭಾಗದ ಉಪಾಧ್ಯಕ್ಷರಾಗಿ ವಿನ್ಯಾಸ್ ಬಂಟ್ರಿಯಾಲ್, ಸಹ ಕಾರ್ಯದರ್ಶಿಯಾಗಿ ಸುಪ್ರಿತಾ ರವಿಚಂದ್ರ, ಪ್ರಗತಿ ಸಂಪಾದಕರಾಗಿ ವಿನಯ್ ರಾವ್ ಆಯ್ಕೆಯಾದರು. ನಿರ್ದೇಶಕರಾಗಿ ರಹಿಮಾನ್, ರಶ್ಮ ದಯಾಕರ್, ವಿಮಲ್ ಕುಮಾರ್, ಸತೀಶ್ ಕೆ.ಎಸ್., ಮಿಥುನ್, ಹರೀಶ್ ಬಾರಿಂಜ ಹಾಗೂ ಅಶೋಕ್ ರೈ ಅಮುಂಜ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜ.೨೯ರಂದು ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜರಗಲಿದೆ.










