ಬಡಗನ್ನೂರು ಗ್ರಾ. ಪಂ ಸಾಮಾನ್ಯ ಸಭೆ

0

ಬಡಗನ್ನೂರುಃ  ಕಾಡುಕೋಣಗಳ ಹಾವಳಿ ಇರುವ ಸಜಂಕಾಡಿಯಿಂದ ಕನ್ನಡ್ಕದ ವರೆಗಿನ ಅರಣ್ಯ ಪ್ರದೇಶದಲ್ಲಿ ದಾರಿದೀಪ ಹಾಗೂ ಏಚ್ಚರಿಕೆ ನಾಮಫಲಕ ಅಳವಡಿಸುವಂತೆ ಅರಣ್ಯ ಇಲಾಖೆಗೆ ಬರೆಯಲು ಬಡಗನ್ನೂರು ಗ್ರಾ. ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೖೆಗೊಳ್ಳಲಾಯಿತು. ಸಭೆಯು ಗ್ರಾ. ಪಂ ಅಧ್ಯಕ್ಷೆ  ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ  ಗ್ರಾ. ಪಂ ಸಭಾಂಗಣದಲ್ಲಿ ನಡೆಯಿತು.

ಈಶ್ವರಮಂಗಲ – ಸುಳ್ಯಪದವು  ಲೋಕೋಪಯೋಗಿ ರಸ್ತೆರ ಸಜಂಕಾಡಿ ಮತ್ತು ಕನ್ನಡ್ಕ ಈ ಅರಣ್ಯ ಪ್ರದೇಶದಲ್ಲಿ ಕಾಡುಕೋಣಗಳು ಹಗಲು ಮತ್ತು  ರಾತ್ರಿ ಹೋತ್ತಿಗೆ  ಸಂಚಾರಿಸುತ್ತಿದ್ದು   ವಾಹನ ಸಂಚಾರ ಮತ್ತು ಪಾದನಡಿಗೆ  ಭಯದ ಭೀತಿ ಎಧುರಾಗಿದೆ  ಸ್ಥಳೀಯರಿಗೆ ಇದರ ಅರಿವು ಇದೆ ಆದರಿಂದ ಜಾಗ್ರತೆಯಿಂದ ಹೋಗುತ್ತಾರೆ.  ಹೊರ ಪ್ರದೇಶದಿಂದ ಬರುವರಿಗೆ ಇದರ ಅರಿವು ಇಲ್ಲದೆ ಸಂಚಾರಿ ಅವಘಡ ಸಂಭವಿಸುವ ಸಾಧ್ಯ ಬರಬಹುದು. ಈ ದೃಷ್ಟಿಯಿಂದ , ಸಜಂಕಾಡಿಯಿಂದ  ಕನ್ನಡ್ಕವರೆಗಿನ ಪ್ರದೇಶಗಳಲ್ಲಿ ರಸ್ತೆಗೆ ದಾರಿದೀಪ ಹಾಗೂ ಏಚ್ಚರಿಕೆ ನಾಮಫಲಕ ಅಳವಡಿಸುವಂತೆ ಅರಣ್ಯ ಇಲಾಖೆಗೆ ಬರೆಯುವಂತೆ ಸದಸ್ಯ ಧರ್ಮೆಂದ್ರ ಕುಲಾಲ್ ಪದಡ್ಕ ಸಭೆಯಲ್ಲಿ ಆಗ್ರಹಿಸಿದರು. ಇವರೊಂದಿಗೆ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ವೆಂಕಟೇಶ್ ಕನ್ನಡ್ಕ ಧ್ವನಿ ಗೂಡಿಸಿದರು ಈ ಬಗ್ಗೆ ಚರ್ಚಿಸಿ ಸರ್ವಸದಸ್ಯರ ಸಮ್ಮತಿಯಲ್ಲಿ ಅರಣ್ಯ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗೆ ಪತ್ರ ಬರೆಯಲು ನಿರ್ಣಯ ಕೖೆಗೊಳ್ಳಲಾಯಿತು.

ಶೇಕಾಡ 25 ರಲ್ಲಿ ಪ. ಜಾತಿ ಮತ್ತು ಪಂಗಡದ ಕುಟುಂಬಕ್ಕೆ ನೀರಿನ ಡ್ರಮ್ ನೀಡುವ ಬಗ್ಗೆ ನಿರ್ಣಯ ಮಾಡಿ ತಿಂಗಳಾದರು ಡ್ರಮ್ ವಿತರಣೆ ಮಾಡದ ಬಗ್ಗೆ ಸದಸ್ಯ ರವಿರಾಜ ರೖೆ ಸಜಂಕಾಡಿರವರು ಪಿಡಿಒ ರವರನ್ನು ಪ್ರಶ್ನಿಸಿದ ಅವರು ಯಾವಾಗ ವಿತರಣೆ ಮಾಡುವುದು ಹೇಳಿ, ಇಲ್ಲದಿದ್ದರೆ ನಾವು ಸುಳ್ಳುಗಾರರಾಗುತ್ತೇವೆ ಎಂದು ಹೇಳಿದರು. ಇವರೊಂದಿಗೆ ಕಲಾವತಿ ಗೌಡ ಪಟ್ಲಡ್ಕ ಧ್ವನಿಗೂಡಿಸಿದರು  ತಕ್ಷಣ ಡ್ರಮ್ ಖರೀದಿಸಿ ಎಲ್ಲಾ ವಾರ್ಡ್ ನಲ್ಲಿ ಒಂದೇಭಾರಿ ವಿತರಣೆ ಮಾಡುವ ಅಭಿವೃದ್ಧಿ ಅಧಿಕಾರಿ ಬಿ.ಕೆ ಸುಬ್ಬಯ್ಯ ಉತ್ತರಿಸಿದರು.

ಸಂಜೀವಿನ ಕಟ್ಟಡ ನಿರ್ಮಾಣದಲ್ಲಿ   ನಮ್ಮ ಅನುದಾನ ಮತ್ತು ಶ್ರಮ ಹೆಚ್ಚು ಇದೆ. ಆದುದರಿಂದ ಇದರ ಉದ್ಘಾಟನೆ ನಮ್ಮ ಅವದಿಯಲ್ಲಿ  ಅಗಬೇಕು ಮತ್ತು ಇದರ ಸಂಪೂರ್ಣ ಜವಾಬ್ದಾರಿ ಪಂಚಾಯತಿಗೆ ಇರಬೇಕು ಎಂದು ಸದಸ್ಯ ಸಂತೋಷ ಆಳ್ವ ಗಿರಿಮನೆ ಹೇಳಿದರು.  ಗುತ್ತಿಗೆಗಾರರನ್ನು ಸಭೆಗೆ ಕರೆದು ಮಾತನಾಡಿದರು ಕಾಮಗಾರಿ ಪೂರ್ಣಗೊಳಿಸಿ ಕೊಡುವುದಾಗಿ ಭರವಸೆ ನೀಡಿದರು ಜನವರಿ ಅಂತ್ಯದೋಳಗೆ ಉದ್ಘಾಟನೆ ಮಾಡುವ ಬಗ್ಗೆ ನಿರ್ಣಯ ಮಾಡಲಾಯಿತು.ಬಡಗನ್ನೂರು ಗ್ರಾಮದ ಗಡಿಳಾಗದಲ್ಲಿ ಪಂಚಾಯತ್ ವತಿಯಿಂದ ದಿಕ್ಸೂಚಿ ನಾಮಫಲಕ ಅಳವಡಿಕೆ ಮಾಡುವ ಬಗ್ಗೆ ನಿರ್ಣಯ ಮಾಡಲಾಯಿತು. ಕ್ರೀಡಾ ಅನುಧಾನ ಉಳಿಕೆ ಮೊತ್ತದಲ್ಲಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಆಟಿಕೆಸಾಮಾಗ್ರಿ ವಿತರಿಸುವ ಬಗ್ಗೆ  ನಿರ್ಣಯಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೊಡ್ ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಆಳ್ವ ಗಿರಿಮನೆ, ಧರ್ಮೆಂದ್ರ ಕುಲಾಲ್ ಫದಡ್ಕ,ಕುಮಾರ ಅಂಬಟೆಮೂಲೆ, ಪದ್ಮನಾಭ ಕನ್ನಡ್ಕ, ವೆಂಕಟೇಶ್ ಕನ್ನಡ್ಕ, ಕಲಾವತಿ ಗೌಡ ಷಟ್ಲಡ್ಕ, ಶ್ರೀಮತಿ ಕನ್ನಡ್ಕ, ಸುಜಾತಾ ಮೖೆಂದನಡ್ಕ, ಸವಿತಾ ನೆರೋಳತ್ತಡ್ಕ, ದಮಯಂತಿ ಕೆಮನಡ್ಕ, ಜ್ಯೋತಿ ಅಂಬಟೆಮೂಲೆ, ರವಿಶ್ಚಂದ್ರ ಸಾರೆಪ್ಪಾಡಿ  ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಬಿ. ಕೆ ಸುಬ್ಬಯ್ಯ ಸಾರ್ವಜನಿಕ ಅರ್ಜಿ ಮತ್ತು ಸರಕಾರಿ ಸುತೋಲೆಗಳನ್ನು ಸಭೆಯಲ್ಲಿ ಓದಿದರು. ಗ್ರಾ. ಪಂ ಕಾರ್ಯದರ್ಶಿ ಕೊರಗಪ್ಪ ನಾಯ್ಕ ಸ್ವಾಗತಿಸಿ ವಂದಿಸಿದರು ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here