ಮಾಹಿ ಸಿರಿ ನ್ಯಾಚುರಲ್ಸ್ ಉತ್ಪನ್ನಗಳ ಮಳಿಗೆ ಭಾರಧ್ವಜ್ ಎಂಟರ್‌ಪ್ರೈಸಸ್ ಶುಭಾರಂಭ

0

ಪುತ್ತೂರು: ಮಾಹಿ ಸಿರಿ ನ್ಯಾಚುರಲ್ಸ್ ಉತ್ಪನ್ನಗಳ ಮಾರಾಟ ಮಳಿಗೆ ಭಾರದ್ವಜ್ ಎಂಟರ್‌ಪ್ರೈಸಸ್ ಜ.4ರಂದು ಬೊಳುವಾರು ಮುಖ್ಯರಸ್ತೆಯ ಇನ್‌ಲ್ಯಾಂಡ್ ಮಯೂರದ ಬಳಿಯ ನೀಕ್ಷಾ ಆರ್ಕೇಡ್‌ನಲ್ಲಿ ಶುಭಾರಂಭಗೊಂಡಿತು.


ಮಹಾರಾಷ್ಟ್ರ ಕೊಲ್ಲಾಪುರ ಕನ್ನೇರಿ ಶ್ರೀಸಿದ್ಧಗಿರಿ ಮಠದ ಪೀಠಾಧ್ಯಕ್ಷ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದೊಂದಿಗೆ ಪ್ರಾರಂಭಗೊಂಡ ಮಳಿಗೆಯನ್ನು ಕೊಂಚೂರು ದತ್ತಗೋಸೇವಾ ಫೌಂಡೇಶನ್ ಪೀಠಾಧ್ಯಕ್ಷ ಸವಿತಾನಂದನಾಥ ಮಹಾಸ್ವಾಮಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ಬೆಳೆಯುವ ಕೃಷಿ, ತಿನ್ನುವ ಆಹಾರದ ವಿಷಯುಕ್ತವಾಗಿದೆ. ನಾವು ಹಣ ಸಂಪಾದನೆ ಮಾಡಿ ಆಸ್ಪತ್ರೆ ಕಟ್ಟುವುದರಲ್ಲಿದ್ದೇವೆ. ಆದರೆ ಇರುವ ಸಂಪಾದನೆಯಲ್ಲಿ ಉತ್ತಮ ಜೀವನದ ಬಗ್ಗೆ ಯೋಚಿಸುವುದಿಲ್ಲ. ಹಣ ಸಂಪಾದಿಸಿ, ಯಾವುದೋ ಖಾಯಿಲೆಯಿಂದ ಆಸ್ಪತ್ರೆ ಹಣ ಪಾವತಿಸುವ ಬದಲು, ಸ್ವಲ್ಪ ದುಬಾರಿಯಾದರೂ ಸಾವಯವ ಉತ್ಪನ್ನಗಳನ್ನು ಬಳಸಿಕೊಂಡು ಆರೋಗ್ಯವಂತರಾಗಿ ಜೀವನ ನಡೆಸುವ ಬಗ್ಗೆ ಎಲ್ಲರೂ ಯೋಚಿಸಬೇಕಾದ ಅವಶ್ಯಕತೆಯಿದೆ. ನಾವು ದೇಸೀಯ ಆಹಾರ ಪದ್ದತಿಯಾಗಿರುವ ಸಾವಯವ ಆಹಾರ ವಸ್ತುಗಳನ್ನು ಬಳಸಿಕೊಳ್ಳಬೇಕು. ರೈತರಿಗೂ ಪ್ರೋತ್ಸಾಹ ನೀಡಬೇಕು ಎಂದರು.


ದ.ಕ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎಂ.ಜಿ ಸತ್ಯನಾರಾಯಣ ಮಾತನಾಡಿ, ಮೆಕಾಲೆ ಶಿಕ್ಷಣ ನೀತಿಯಿಂದಾಗಿ ಭಾರತದ ವಿದ್ಯಾ ಪದ್ದತಿ ಬದಲಾಗಿದೆ. ಕೃಷಿ ಪದ್ದತಿ ನಾಶದಿಂದಾಗಿ ಈಗ ಸಾವಯವದ ಪಾಠ ಮಾಡಬೇಕಾದ ಅನಿವಾರ್ಯತೆಯಿದೆ. ಪ್ರತಿದಿನ ನಾವು ಆಹಾರಕ್ಕಿಂತ ಔಷಧಿಯ ಸೇವನೆ ಮಾಡುವಂತಾಗಿದೆ. ಶಿಕ್ಷಣದ ಸಾಯುವದ ಪಾಠದ ಚಿಂತನೆ ಮಾಡದಿದ್ದರೆ ನಮ್ಮ ಆಯುಷ್ಯ ಕಡಿಮೆಯಾಗಲಿದೆ. ರಾಸಾಯನಿಕ ಪದ್ದತಿಯಿಂದ ಸಾವಯವದ ಕಡೆ ಬದಲಾಗದಿದ್ದರೆ ಬದುಕುವುದೇ ಕಷ್ಟವಾಗಲಿದೆ ಎಂದರು.


ಎವಿಜಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ವಿ ನಾರಾಯಣ ಮಾತನಾಡಿ, ಸಾವಯವ ಆಹಾರಕ್ಕೂ ಈಗಿನ ಆಹಾರಕ್ಕೂ ವ್ಯತ್ಯಾಸ ತಿಳಿಯಬೇಕು. ನಾವು ಸಾತ್ವಿಕ ಆಹಾರಗಳನ್ನೇ ತಿನ್ನಬೇಕು. ಈಗ ಮಾವು ತಿನ್ನುವಂತಹ ಆಹಾರಗಳು ತಾಮಸ ಆಹಾರವಾಗಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಾವಯವದ ಇನ್ನಷ್ಟು ಮಳಿಗೆ ಪ್ರಾರಂಭವಾಗಲಿ. ಜನರ ಸಹಕಾರ ದೊರೆಯಲಿ ಎಂದರು. ಆ ಮೂಲಕ ಜನರಿಗೆ ಉತ್ತಮ ಆರೋಗ್ಯ ದೊರೆಯಲಿ ಎಂದು ಹೇಳಿದರು.


ಖ್ಯಾತ ವೈದ್ಯ ಡಾ.ರಾಜ್ ಗೋಪಾಲ್ ಎನ್ ಮಾತನಾಡಿ, ರಾಸಾಯನಿಕಗಳ ಬಳಕೆಯಿಂದ ಮಣ್ಣು, ನೀರು, ಕೃಷಿ, ಆಹಾರ, ಆರೋಗ್ಯ ಎಲ್ಲವೂ ಹಾನಿಯಾಗಿದೆ. ಸಾವಯವ ವಸ್ತುಗಳ ಬಳಕೆಯ ಮೂಲಕ ಉತ್ತಮ ಆರೋಗ್ಯ, ಪರಿಸರ ನಿರ್ಮಾಣವಾಗಲಿದೆ. ಇದರ ಬಳಕೆ ರಾಷ್ಟ್ರ ವ್ಯಾಪಿಯಾಗಿ ವಿಸ್ತಾರಗೊಳ್ಳಬೇಕು ಎಂದರು.


ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ, ಇಂದಿನ ಕಾಲದಲ್ಲಿ ಸಾವಯವ ಉತ್ಪನ್ನಗಳ ಮಹತ್ವ ಬಳಷ್ಟಿದೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಆ ಆಹಾರಗಳನ್ನು ನಾವು ಬಳಸುವಂತಾಗಿದೆ. ಈ ಸಂದರ್ಭದಲ್ಲಿ ಇಂತಹ ಮಳಿಗೆಗಳ ಆವಶ್ಯಕತೆಯಿದೆ. ಸಾವಯವ ಆಹಾರಗಳ ಮಹತ್ವ ಇಟ್ಟುಕೊಂಡು ಇಲ್ಲಿ ಮಳಿಗೆ ಪ್ರಾರಂಭಿಸಿದ್ದು ಶ್ಲಾಘನೀಯ ಎಂದರು. ಈಗಲೂ ಬಹಳಷ್ಟು ಭೇಡಿಕೆ ಇದೆ. ಇಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು ಪ್ರತಿವಾರ ಸಾವಯವ ಸಂತೆ ಮಾಡಬೇಕು ಎಂದರು.


ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮೂಲಚಂದ್ರ ಕುಕ್ಕಾಡಿ, ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.


ರೈತರಿಗೆ ಸನ್ಮಾನ:
ಮಳಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಸಾಧಕರಾದ ಪಿ ಅಂಗಾರ, ಕು. ವಿನಯ ನರಿಮೊಗರು, ಎಡ್ವರ್ಡ್ ಗ್ರೆಗೋರಿ , ನವೀನ್ ಮುರುಳ್ಯ, ಜೆರಾಲ್ಡ್ ಲೋಬೋ, ನಾರಾಯಣ ನಲಿಕೆ, ಅಬ್ದುಲ್ ಖಾದರ್, ಕೃಷ್ಣಪ್ಪ ಪುರುಷ, ಪದ್ಮಾವತಿ ಗೌಡ ಕಾವು, ಶ್ರೀಮತಿ ಜ್ಯೋತಿ ಮತ್ತು ನರಸಿಂಹ ಮಯ್ಯ ಇವರಿಗೆ ಶಾಲು, ಹಣ್ಣುಹಂಪಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಂಬಿಕಾ ವಿದ್ಯಾಲಯದ ಶಿಕ್ಷಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕ ರಾಮ್‌ಪ್ರಸಾದ್ ರೈತಗೀತೆ ಹಾಡಿ, ಸ್ವಾಗತಿಸಿದರು. ಶಿವಪ್ರಸಾದ್, ಪುನೀತ್ ರೈ, ಮಹಾಬಲ ರೈ, ಕೃಷ್ಣಪ್ರಸಾದ್ ಅತಿಥಿಗಳನ್ನು ಶಾಲು ಹಾಕಿ ಹೂಗುಚ್ಛ ನೀಡಿ ಸ್ವಾಗತಿಸಿದರು. ದಿವ್ಯಪ್ರಸಾದ್ ವಂದಿಸಿದರು.

ಮಳಿಗೆಯಲ್ಲಿ ಸಾವಯವ ದವಸ ಧಾನ್ಯಗಳು, ದೇಸೀ ದನದ ತುಪ್ಪ, ಸಾವಯವ ಸೋಪುಗಳು, ಹರ್ಬಲ್ ಟೀ, ಹರ್ಬಲ್ ಎಣ್ಣೆಗಳು, ಸಾವಯವ ಮಸಾಲೆಗಳು, ಆಯುರ್ವೇದಿಕ್ ಔಷಧಿಗಳು ಮತ್ತಿತರ ಸೌಲಭ್ಯಗಳು ದೊರೆಯುತ್ತದೆ. ಗ್ರಾಹಕರು ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಮ್ಹಾಲಕ ರಾಮ್‌ಪ್ರಸಾದ್ ವಿನಂತಿಸಿದರು.

LEAVE A REPLY

Please enter your comment!
Please enter your name here