ಕಾಣಿಯೂರು ಪ್ರಗತಿಯಲ್ಲಿ ಮೇಳೈಸಿದ ಪ್ರಗತಿ ಜಾತ್ರೆ

0

ಕಾಣಿಯೂರು: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ ಬೆಳೆಸುವ ಉದ್ದೇಶದಿಂದ ಮೆಟ್ರಿಕ್ ಮೇಳ ಹಮ್ಮಿಕೊಳ್ಳಲಾಗಿದ್ದು, ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ, ತರಗತಿಯಲ್ಲಿ ಪಡೆದ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉದ್ಯಮಿ ಚಂದ್ರಶೇಖರ ಬರೆಪ್ಪಾಡಿ ಹೇಳಿದರು. ಅವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಜ.21ರಂದು ನಡೆದ ಪ್ರಗತಿ ಜಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ದೇವಪ್ಪರವರು ಮಾತನಾಡಿ, ಶಾಲಾ ಮಕ್ಕಳಿಗೆ ವ್ಯವಹಾರ ಜ್ಞಾನವನ್ನು ಕಲಿಸಲು ಹಾಗೂ ಮುಂದಿನ ಕಾಲಮಾನದಲ್ಲಿ ಅವರ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಹಕರಿಯಾಗುತ್ತದೆ ಎಂದರು.


ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧನಂಜಯ ಕೇನಾಜೆ, ಶಾಲಾ ಆಡಳಿತ ಸಮಿತಿ ಸದಸ್ಯ ನಾಗೇಶ್ ರೈ ಮಾಳ, ಟ್ರಸ್ಟಿಗಳಾದ ವೃಂದಾ ಜೆ ರೈ, ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಸಹಾಯಕ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ ಮಾಳ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮಾಧ್ಯಮ ಮುಖ್ಯಸ್ಥೆ ವಿನಯ ವಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿಯರಾದ ಸವಿತಾ ಕೆ, ಧನ್ಯ ಎಂ.ಎ ಹಾಗೂ ಪೋಷಕ ಬಂಧು ದಿನೇಶ್ ಪೈಕ ಸಹಕರಿಸಿದರು.

ಗಮನ ಸೆಳೆಯಿತು ಪ್ರಗತಿ ಜಾತ್ರೆ….
ಪ್ರಗತಿ ಜಾತ್ರೆಯಲ್ಲಿ ಹಲವಾರು ವಿಶೇಷತೆಗಳು ಎಲ್ಲರ ಗಮನ ಸೆಳೆದವು. ಪ್ರಾರಂಭದಲ್ಲಿ ಚೆಂಡೆ, ಗೊಂಬೆ ಬಳಗದೊಂದಿಗೆ ಅತಿಥಿ ಗಣ್ಯರನ್ನು ಬರಮಾಡಿಕೊಳ್ಳಲಾಯಿತು. ತೊಟ್ಟಿಲು, ಜಾರುಬಂಡಿ, ತಿರುಗುವ ಕುದುರೆ, ಘೋಸ್ಟ್ ಹೌಸ್,ಸಿನಿಮಾ ಮಂದಿರ, ಮನೆಯಲ್ಲೇ ತಯಾರಿಸಿದ ತಿಂಡಿ ತಿನಿಸುಗಳು, ಸೊಪ್ಪು ತರಕಾರಿಗಳು, ಹಣ್ಣುಗಳು, ಚಾಟ್ಸ್, ವಿವಿಧ ಪಾನೀಯಗಳು, ಪೊಟಾಟೋ ಟ್ವಿಸ್ಟರ್, ಕಾರ್ನ್ ಸ್ಟಾಲ್, ಐಸ್ ಕ್ರೀಮ್, ಮಜ್ಜಿಗೆ, ಫ್ಯಾನ್ಸಿ, ಪ್ಲಾಸ್ಟಿಕ್ ವಸ್ತುಗಳು, ನರ್ಸರಿ, ಲಕ್ಕಿ ಗೇಮ್ಸ್, ಅಕ್ವೇರಿಯಂ, ಆಯುರ್ವೇದಿಕ್ ಉತ್ಪನ್ನಗಳು, ವಸ್ತ್ರ ಮಳಿಗೆ, ವೆಜ್ ಬಿರಿಯಾನಿ ಮುಂತಾದವುಗಳು ಗ್ರಾಹಕರ ಮನಸೂರೆಗೊಂಡಿತು.

LEAVE A REPLY

Please enter your comment!
Please enter your name here