







55ನೆ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಜಿತೇಶ್ ರೈ


ಪುತ್ತೂರು :ತರಬೇತಿ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿಯೇ ಇರುವ ಜೆಸಿಐ ಇಂಡಿಯಾದ ಪುತ್ತೂರು ಘಟಕದ 55ನೇ ವರ್ಷದ ಪದಗ್ರಹಣ ಸಮಾರಂಭವು ಜ. 15ರಂದು ರೋಟರಿ ಮನಿಷಾ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.



ಮುಖ್ಯ ಅತಿಥಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರ ಪುರಂದರ ರೈ ಮಿತ್ರಂಪಾಡಿರವರು ನೂತನ ಘಟಕಡಾಳಿತ ಮಂಡಳಿಯನ್ನು ಅಭಿನಂದಿಸಿ , ಶುಭ ಹಾರೈಸಿದರು. ಪ್ರಥಮಾರ್ಧದಲ್ಲಿ 2025ನೆ ಸಾಲಿನ ಜೆಸಿಐ ಪುತ್ತೂರಿನ ಅಧ್ಯಕ್ಷ ಭಾಗ್ಯೇಶ್ ರೈಯವರು ಸಭೆಯನ್ನು ಪ್ರಾರಂಭಿಸಿ ,ಅತಿಥಿಗಳನ್ನು ಸ್ವಾಗತಿಸಿ ಒಂದು ವರ್ಷದ ವರದಿಯನ್ನು ಸಭೆಯ ಮುಂದಿಟ್ಟು , ಸಹಕಾರ ನೀಡಿದ ನಿಕಟಪೂರ್ವಾಧ್ಯಕ್ಷರು, ಪೂರ್ವಾಧ್ಯಕ್ಷರು, ಹಾಗೂ ಸರ್ವ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.
2025ರ ನಿಕಟಪೂರ್ವ ಅಧ್ಯಕ್ಷರಾದ ಮೋಹನ.ಕೆ ಅವರನ್ನು ಪೂರ್ವಾಧ್ಯಕ್ಷರುಗಳಾದ ವಿಶ್ವಪ್ರಸಾದ್ ಸೇಡಿಯಾಪು, ಕೃಷ್ಣಮೋಹನ್ ಪಿ ಎಸ್, ರವಿ ಮುಂಗ್ಲಿಮನೆ, ವಸಂತ ಜಾಲಾಡಿ, ಗೌತಮ್ ರೈ, ಶರತ್ ರೈ, ಪುರುಷೋತ್ತಮ ಶೆಟ್ಟಿ,ಜಗನ್ನಾಥ ರೈ,ಉಮೇಶ್ ಶೆಟ್ಟಿ, ಸ್ವಾತಿ ಜೆ ರೈ, ಸೂರಪ್ಪ ಗೌಡ, ವಿಜಯ ಮೊಳೆಯಾರ್,ಶಶಿರಾಜ್ ರೈ, ಸುಹಾಸ್ ಮರಿಕೆ ಪೂರ್ವಾಧ್ಯಕ್ಷರ ಸಾಲಿಗೆ ಸೇರಿಸಿದರು.

ನಂತರ ನೂತನ ಅಧ್ಯಕ್ಷರಾದ ಜಿತೇಶ್ ರೈಯವರನ್ನು ಭಾಗ್ಯೇಶ್ ರೈರವರು ವೇದಿಕೆಗೆ ಆಹ್ವಾನಿಸಿ ಅಧಿಕಾರ ಹಸ್ತಾಂತರಿಸಿ ಪ್ರಮಾಣವಚನವನ್ನು ಬೋಧಿಸಿದರು.
ದ್ವಿತೀಯಾರ್ಧದಲ್ಲಿ ಸಭೆಯನ್ನು ಮುನ್ನಡೆಸಿದ ನೂತನ ಅಧ್ಯಕ್ಷರಾದ ಜಿತೇಶ್ ರೈಯವರು ತನ್ನ ಮುಂದಿನ ಯೋಚನೆಗಳ ಬಗ್ಗೆ ಸಭೆಗೆ ತಿಳಿಸಿ ಎಲ್ಲಾರ ಸಹಕಾರವನ್ನು ಯಾಚಿಸಿದರು.
ಗೌರವ ಉಪಸ್ಥಿತರಿದ್ದ ವಲಯ 15ರ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ರವರು ರಾಜ್ಯದಲ್ಲಿ 2ನೆ ಅತೀ ದೊಡ್ಡ ಘಟಕವಾಗಿರುವ ಪುತ್ತೂರು ಘಟಕವು ಇನ್ನಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು. 2025ನೆ ಸಾಲಿನಲ್ಲಿ ಪುತ್ತೂರು ಘಟಕದಿಂದ ಮಾಡಿದ ವಿವಿಧ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ಸಭೆಯಲ್ಲಿ ವಲಯ 15ರ ವಲಯ ಉಪಾಧ್ಯಕ್ಷರಾದ ಕಾಶಿನಾಥ್ ಗೊಗಟೆರವರು ಗೌರವ ಉಪಸ್ಥಿತರಿದ್ದರು.
2025ನೆ ಸಾಲಿನ ಕಾರ್ಯದರ್ಶಿ ಜೆಸಿ ಮನೋಹರ್ ಇವರು 2026ರ ಕಾರ್ಯದರ್ಶಿ ಜೆಸಿ ಹರ್ಷಿತಾ ಬೆಜ್ಜಂಗಳ ಇವರಿಗೆ, 2025ರ ಕೋಶಾಧಿಕಾರಿ ಜೆಸಿ ರುಕ್ಮಯ್ಯ ಕುಲಾಲ್ ಜೆಸಿ ಸತೀಶ್ ನಾಯ್ಕ್ ಇವರಿಗೆ, 2025ರ ಲೇಡಿ ಜೆಸಿ ಕೊ-ಆರ್ಡಿನೆಟರ್ ಜೆಸಿ ಆಶಾಮೋಹನ್, ಜೆಸಿ ರಂಜಿನಿ ಶೆಟ್ಟಿ ಇವರಿಗೆ, 2025ರ ಜೆಜೆಸಿ ಚೇರ್ ಪರ್ಸನ್ ಸ್ವಸ್ತಿ ಶೆಟ್ಟಿ 2026ನೆ ಸಾಲಿನ ದೀಕ್ಷಿತಾ ಎಸಿ ಇವರಿಗೆ ಅಧಿಕಾರ ಹಸ್ತಾಂತರಿಸಿದರು.
ಕೃಷ್ಣನಾರಾಯಣ ಮುಳಿಯ ದಂಪತಿಗಳಿಗೆ ಸನ್ಮಾನ
ಜೆಸಿಐ ಪುತ್ತೂರು ಘಟಕದ ಪೂರ್ವಾಧ್ಯಕ್ಷರಾದ ಕೃಷ್ಣನಾರಯಣ ಮುಳಿಯ ಇವರಿಗೆ ಸ್ವಚ್ಚ ಪುತ್ತೂರು ಮಿಷನ್ ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಯೋಗ್ಯಾಸ್ ಘಟಕದ ಯೋಜನೆಯ ಅನುಷ್ಠಾನದ ಸಾಧನೆಗಾಗಿ ಅವರ ಧರ್ಮಪತ್ನಿ ಅಶ್ವಿನಿ ಮುಳಿಯ ಇವರೊಂದಿಗೆ ಸನ್ಮಾನ ನಡೆಯಿತು.
2026ರ ಅಧ್ಯಕ್ಷರ ಆಶಯದ ಪೋಸ್ಟರ್ ಬಿಡುಗಡೆ
ನೂತನ ಅಧ್ಯಕ್ಷರಾದ ಜಿತೇಶ್ ರೈಯವರು “ನಾಯಕತ್ವದ ಗುಣಗಳು”ಎಂಬ ಪರಿಕಲ್ಪನೆಯಡಿಯಲ್ಲಿ, ಯುವ ಜನತೆ ಮತ್ತು ವಿದ್ಯಾರ್ಥಿಗಳಿಗೆ ತರಭೇತಿ ಯೋಜನೆ ಹಮ್ಮಿ ಕೊಂಡಿದ್ದು ಇದರ ಪೋಸ್ಟರನ್ನು ಅತಿಥಿಗಳು ಬಿಡುಗಡೆ ಗೊಳಿಸಿದರು.ಈ ಸಂದರ್ಭದಲ್ಲಿ ಜೆಸಿಐ ಪುತ್ತೂರು ಘಟಕವನ್ನು 55 ವರ್ಷಗಳ ಹಿಂದೆ ಪ್ರಾರಂಭ ಮಾಡಲು ಮಾರ್ಗದರ್ಶನ ನೀಡಿದ ಕೆ ಆರ್ ಶೆಣೈಯವರನ್ನು ಸನ್ಮಾನಿಸಲಾಯಿತು.
ಘಟಕಾಡಳಿತ ಮಂಡಳಿ-2026ರ ಉಪಾಧ್ಯಕ್ಷರುಗಳು
ಜೆಸಿ ಪ್ರಜ್ವಲ್ ರೈ ಸೊರಕೆ (ವಿಪಿ ಮ್ಯಾನೇಜ್ಮೆಂಟ್)
ಜೆಸಿ ನರಸಿಂಹ ಪೈ (ವಿಪಿ ಟ್ರೈನಿಂಗ್)
ಜೆಸಿ ರಮ್ಯಾ ಭಾಗ್ಯೇಶ್ ರೈ (ವಿಪಿ ಕಮ್ಯೂನಿಟಿ & ಡೆವಲಪ್ಮೆಂಟ್)
ಜೆಸಿ ಗೌರವ್ ಭಾರಧ್ವಾಜ್ (ವಿಪಿ ಗ್ರೋಥ್ & ಡೆವೆಲಪ್ಮೆಂಟ್)
ಜೆಸಿ ಸಾಯಿರಾಂ ಬಾಳಿಲ (ವಿಪಿ ಪಿ. ಆರ್ & ಮಾರ್ಕೆಟಿಂಗ್)
ಜೆಸಿ ಮನೋಹರ್ ಪಾಟಾಳಿ (ವಿಪಿ ಬ್ಯುಸಿನೆಸ್)

ನಿರ್ದೇಶಕರು
ಜೆಸಿ ಸುಹಾಸ್ ರೈ ಜೆಸಿ.ಸ್ವಾತಿಶಶಿರಾಜ್ ರೈ
ಜೆಸಿ ಶಿಲ್ಪಾ ಪಿ ಶೆಟ್ಟಿ
ಜೆಸಿ ಮಾನಸ ವೈ
ಜೆಸಿ ಸುಪ್ರೀತ್ ಕೆಸಿ
ಜೆಸಿ ಶರತ್ ಶ್ರೀನಿವಾಸ್
ಜೆಸಿ ವಿಘ್ನೇಶ್ ನಾಯ್ಕ್
ಜೆಸಿ ಸಂದೀಪ್ ರೈ
ಜೆಸಿ ವಿರೂಪಾಕ್ಷ ಭಟ್
ಜೆಸಿ ಆಶಾ ಮೋಹನ್
ಜೆಸಿ ಶೋಭಾ ರೈ
ಜೆಸಿ ಸತ್ಯ ಶಂಕರ್
ಜೆಸಿ ಪ್ರಜ್ವಲ್ ಡಿಸೋಜ
ಜೆಸಿ ಸಂದೇಶ್ ಪಿಎಸ್
ಜೆಸಿ ಸಂದೇಶ್ ರೈ
ಜೆಸಿ ಅಶ್ವಿನಿ ಸಂಪ್ಯ.
ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ, ಲಯನ್ಸ್, ಜೆಸಿ ಬೆಳ್ಳಾರೆ, ಜೆಸಿ ಮಂಗಳೂರು, ಜೆಸಿ ವಿಟ್ಲ, ಇತರ ಘಟಕದ ಅಧ್ಯಕ್ಷರುಗಳು ಮತ್ತು ನಿಕಟಪೂರ್ವಧ್ಯಕ್ಷರುಗಳು,ವಲಯ 15ರ ಘಟಕಡಾಳಿತ ಮಂಡಳಿಯ ಸದಸ್ಯರು ಹಾಗೂ ಇತರ ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.










