ಹೆಚ್‌ಪಿಆರ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

0


ಪುತ್ತೂರು: ಹೆಚ್ಪಿಆರ್ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸಯನ್ಸ್ ಇದರ ವಾರ್ಷಿಕ ಕ್ರೀಡಾಕೂಟವು ಫೆಬ್ರವರಿ 22 ರಂದು ಕೊಂಬೆಟ್ಟು ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡಿದ್ದು, ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಪ್ರಮೀಳಾ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಕ್ರೀಡೆ ಎನ್ನುವುದು ಚಟುವಟಿಕೆಯಲ್ಲ, ಅದು ಸಾಧಕನ ಶ್ರಮ. ಆತನ ಸಾಮರ್ಥ್ಯ, ಕೌಶಲ್ಯ, ಕ್ರೀಡಾ ಸಾಧಕನ ಸ್ವತ್ತೇ ಹೊರತು, ಸೋಮಾರಿಗಳ ಸ್ವತ್ತು ಅಲ್ಲ ಎಂದು ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು. ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇದರ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಕ್ರೀಡಾಜ್ಯೋತಿ ಮೂಲಕ ದೀಪ ಪ್ರಜ್ವಲನೆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕ್ರೀಡಾ ಮಹತ್ವಗಳ ಕುರಿತು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಇವ್ನೀಸ್ ಆಗ್ನೆಸ್ ಡಿಸೋಜಾ, ಉಪಪ್ರಾಂಶುಪಾಲೆ ಜಲಜ, ಕೊಂಬೆಟ್ಟು ಸ.ಪ.ಪೂ ಕಾಲೇಜಿನ ದೈಹಿಕ ಉಪನ್ಯಾಸಕ ವಿಜೇತ್ ಕುಮಾರ್, ಕ್ರೀಡಾ ಸಂಯೋಜಕಿ ಪ್ರಮೀಳಾನಾಗೇಶ್, ಕ್ರೀಡಾ ಕಾರ್ಯದರ್ಶಿ ರಿಶಾದ್ ವೇದಿಕೆಯಲ್ಲಿದ್ದರು. ಹೆಚ್ ಪಿಆರ್ ಸಂಸ್ಥೆಯ ವಿದ್ಯಾರ್ಥಿನಿ ಅಂಕಿತಾ ಅಥಿತಿಗಳನ್ನು ಸ್ವಾಗತಿಸಿದರು. ಈ ವೇಳೆ ಕಾಲೇಜಿನ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು. ಹೆಚ್ ಪಿಆರ್ ಸಂಸ್ಥೆಯ ವಿದ್ಯಾರ್ಥಿನಿ ರಿನಾದ ಕಾರ್ಯಕ್ರಮ ನಿರೂಪಿಸಿ, ದಿಶಾ ತಂಡ ಪ್ರಾರ್ಥಿಸಿ, ಶಹದಾ ಕಾರ್ಯಕ್ರಮವನ್ನು ವಂದಿಸಿದರು. ಆ ಬಳಿಕ ವಿದ್ಯಾರ್ಥಿಗಳಿಂದ ಆಟೋಟ ಸ್ಪರ್ಧೆ ನಡೆಯಿತು.

LEAVE A REPLY

Please enter your comment!
Please enter your name here