ಕ್ರಿಸ್ಟೋಫರ್ ಫಿಟ್‌ನೆಸ್ ಸೆಂಟರ್‌ಗೆ ಬಾಡಿಬಿಲ್ಡಿಂಗ್, ಸ್ವಿಮ್ಮಿಂಗ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳ ಗರಿ

0

ಪುತ್ತೂರು: ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ನ ವಿವಿಧ ಕಡೆಗಳಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಮ್‌ಗೆ ಕೀರ್ತಿ ತಂದಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಪುರುಷರ ಮೆನ್ಸ್ ಫಿಸಿಕ್ ಸ್ಪರ್ಧೆಯಲ್ಲಿ 90ಕೆಜಿ ವಿಭಾಗದಲ್ಲಿ ಯತೀಶ್ ರವರಿಗೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, 85ಕೆಜಿ ವಿಭಾಗದಲ್ಲಿ ಪ್ರತೀಕ್ ರೈರವರಿಗೆ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ, 75ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ, 65ಕೆಜಿ ವಿಭಾಗದಲ್ಲಿ ಹವೀಶ್ ರವರಿಗೆ ನಾಲ್ಕನೇ ಸ್ಥಾನ, 60ಕೆಜಿ ವಿಭಾಗದಲ್ಲಿ ಮನ್ವಿತ್ ರವರಿಗೆ ನಾಲ್ಕನೇ ಸ್ಥಾನ ಗಳಿಸಿರುತ್ತಾರೆ.

ಅಲಂಕಾರ್ ಐರನ್ ಟೆಂಪಲ್ ಜಿಮ್ ವತಿಯಿಂದ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ 75ಕೆಜಿ ವಿಭಾಗದಲ್ಲಿ ಪ್ರಜ್ವಲ್ ರವರಿಗೆ ಜ್ಯೂನಿಯರ್ ವಿಭಾಗದಲ್ಲಿ ಮೂರನೇ ರನ್ನರ್-ಅಪ್ ಹಾಗೂ ಸೀನಿಯರ್ ವಿಭಾಗದಲ್ಲಿಯೂ 3ನೇ ರನ್ನರ್-ಅಪ್, 65ಕೆಜಿ ವಿಭಾಗದಲ್ಲಿ ಹವೀಶ್ ರವರು ಮೂರನೇ ರನ್ನರ್ ಅಪ್ ಸ್ಥಾನ, 60ಕೆಜಿ ವಿಭಾಗದಲ್ಲಿ ಜೀವಿತ್ ರವರಿಗೆ ಮೂರನೇ ರನ್ನರ್ ಅಪ್ ಸ್ಥಾನ ಗಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ 60ಕೆಜಿ ವಿಭಾಗದಲ್ಲಿ ಗಗನ್ ರವರಿಗೆ ಬೆಳ್ಳಿ ಪದಕ, ಕರ್ನಾಟಕ ಕಬಡ್ಡಿ ಲೀಗ್ ತಂಡದ ವಿಜಯಪುರ ಲಯನ್ಸ್ ನಲ್ಲಿ ಅಧೀಶ್ ಶೆಟ್ಟಿರವರಿಗೆ ಸ್ಥಾನ ಗಳಿಸಿದ್ದಾರೆ.

ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಧೀರಜ್ ಕೆಮ್ಮಿಂಜೆರವರು 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಶಾಟ್ ಪುಟ್ ನಲ್ಲಿ ದ್ವಿತೀಯ ಸ್ಥಾನದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ, ಪಿಯುಸಿ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ವಿಘ್ನೇಶ್ ರವರು ಶಾಟ್ ಪುಟ್ ನಲ್ಲಿ ಚಿನ್ನದ ಪದಕ, ಡಿಸ್ಕಸ್ ಥ್ರೋನಲ್ಲಿ  ಬೆಳ್ಳಿ ಪದಕದೊಂದಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮಟ್ಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯ 77ಕೆಜಿ ವಿಭಾಗದಲ್ಲಿ ಸಿಂಚನಾರವರಿಗೆ ಬೆಳ್ಳಿ ಪದಕ, 61ಕೆಜಿ ವಿಭಾಗದಲ್ಲಿ ಪ್ರೇಕ್ಷಾರವರಿಗೆ ಬೆಳ್ಳಿ ಪದಕ ಪಡೆದಿದ್ದಾರೆ.

ಮಂಗಳೂರಿನ ಹಮೀಕರಿ (Hamekarri) ಈಜುಕೊಳದಲ್ಲಿ ನಡೆದ ರಾಜ್ಯ ಮಟ್ಟದ ‘ಫಿನ್-ಸ್ವಿಮ್ಮಿಂಗ್’ ಸ್ಪರ್ಧೆಯಲ್ಲಿ ಸ್ವೀಕೃತ್ ಆನಂದ್ ರವರು 50 ಮೀಟರ್ ಸರ್ಫೇಸ್ ಸ್ವಿಮ್ ನಲ್ಲಿ 1 ಚಿನ್ನದ ಪದಕ, 50 ಮೀಟರ್ ಬೈ-ಫಿನ್ಸ್, 100 ಮೀಟರ್ ಬೈ-ಫಿನ್ಸ್ ಮತ್ತು 50 ಮೀಟರ್ ಅಪ್ನಿಯಾ ವಿಭಾಗಗಳಲ್ಲಿ -3 ಬೆಳ್ಳಿ ಪದಕಗಳು, ಪುಣೆಯ ಛತ್ರಪತಿ ಶಿವಾಜಿ ಈಜುಕೊಳದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ‘ಫಿನ್-ಸ್ವಿಮ್ಮಿಂಗ್’ ಸ್ಪರ್ಧೆಯಲ್ಲಿ 50 ಮೀಟರ್ ಸರ್ಫೇಸ್ ಸ್ವಿಮ್ 10ನೇ ಸ್ಥಾನ, 50 ಮೀಟರ್ ಬೈ-ಫಿನ್ಸ್ ನಲ್ಲಿ 4ನೇ ಸ್ಥಾನ, 100 ಮೀಟರ್ ಬೈ-ಫಿನ್ಸ್ 5ನೇ ಸ್ಥಾನ, 50 ಮೀಟರ್ ಅಪ್ನಿಯಾದಲ್ಲಿ 4ನೇ ಸ್ಥಾನ ಗಳಿಸಿರುತ್ತಾರೆ ಎಂದು ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ತರಬೇತುದಾರ ನವನೀತ್ ಬಜಾಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here