







ಪುತ್ತೂರು:ಮಡಂತ್ಯಾರ್ ನಿವಾಸಿ, ಉಪ್ಪಿನಂಗಡಿ ಸೈಂಟ್ ಫಿಲೋಮಿನಾ ಶಾಲೆ, ಬೆಳ್ತಂಗಡಿಯ ಹೋಲಿ ರೆಡೀಮರ್ ಶಾಲೆ, ಮಡಂತ್ಯಾರು ಗಾರ್ಡಿಯನ್ ಏಂಜಲ್ಸ್ ಶಾಲೆಗಳಲ್ಲಿ ಸುಮಾರು 38 ವರ್ಷ ಕಾಲ ಸೇವೆ ಸಲ್ಲಿಸಿ 2003ರಲ್ಲಿ ನಿವೃತ್ತರಾಗಿರುವ ಲೂಯಿಸ್ ಫೆರ್ನಾಂಡೀಸ್ ರವರ ಪತ್ನಿ, ನಿವೃತ್ತ ಶಿಕ್ಷಕಿ ಶ್ರೀಮತಿ ರುಫಿನಾ ರೊಡ್ರಿಗಸ್(80 ವ.)ರವರು ಜ.24 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.


ರುಫೀನಾ ಟೀಚರ್ ಎಂದೇ ಗುರುತಿಸಿಕೊಂಡಿರುವ ರುಫಿನಾ ರೊಡ್ರಿಗಸ್ ರವರು ನಿವೃತ್ತಿಯ ಬಳಿಕ ಇವರು ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದು, ಸಮನ್ವಯ ವೆಲ್ಫೇರ್ ಗ್ರೂಪ್ ಎಂಬ ಸಹಕಾರಿ ಸಂಸ್ಥೆ ಯ ಸಕ್ರಿಯ ಸದಸ್ಯರಾಗಿದ್ದು , ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಾಲಕಿಯರಿಗೆ ಹೊಲಿಗೆ/ಟೈಲರಿಂಗ್ ತರಬೇತಿ ಹಾಗೂ ಇತರ ಕರಕೌಶಲ್ಯಗಳ ಮೂಲಕ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ಮೂಲಕ ಸಮಾಜಸೇವೆಗೆ ತಮ್ಮನ್ನು ಅರ್ಪಿಸಿದ್ದರು.



ಮೃತರು ಪತಿ, ಈರ್ವರು ಪುತ್ರರು, ಈರ್ವರು ಪುತ್ರಿಯರು ಹಾಗೂ ಎಂಟು ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.










