







ವಿಜ್ಞಾನಿಯಾಗಲು ಶ್ರಮ, ನಿಷ್ಠೆ, ಶಿಸ್ತು, ತಾಳ್ಮೆ ಅಗತ್ಯ- ಸುರೇಶ್ ಡಿ


ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆ ಆಯೋಜಿಸಲಾಯಿತು.



ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ.ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿಜ್ಞಾನವೆಂದರೆ ವಿಚಾರಿಸುವುದು, ಪ್ರಶ್ನೆ ಮಾಡುವುದು, ಸತ್ಯವನ್ನು ಅರಿಯುವುದು. ವಿಜ್ಞಾನದ ಬೆಳವಣಿಗೆಯಲ್ಲಿ ವಿಜ್ಞಾನಿಗಳ ಪಾತ್ರ ಅಮೂಲ್ಯವಾದದ್ದು. ವಿಜ್ಞಾನಿಗಳಾಗಲು ಶ್ರಮ, ನಿಷ್ಠೆ, ಶಿಸ್ತು, ತಾಳ್ಮೆ ಅತ್ಯಗತ್ಯ ಎಂದು ಹೇಳಿ ವೈಜಾನಿಕ ಅರಿವು ಮೂಡಿಸಿದರು. ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣ ಸಂಯೋಜಕಿ ಅಮೃತಾಕಲಾರವರು ಸ್ಪರ್ಧಾ ನಿಯಮ ವಿವರಿಸಿ ಶುಭಹಾರೈಸಿದರು. ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ತೀರ್ಪುಗಾರರಾದ ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜು ವಿಜ್ಞಾನ ಶಿಕ್ಷಕಿ ಸಿಂಧೂ ವಿ.ಕೆ., ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಐ.ಟಿ ವಿಭಾಗದ ಉಪನ್ಯಾಸಕರು ಆಶ್ಲೇಷ್ ಕುಮಾರ್, ಸಿಆರ್ಪಿ ಶಶಿಕಲಾ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೊ ಹಾಗೂ ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಬಿ.ಟಿ. ಮಹೇಶ್ಚಂದ್ರ ಸಾಲಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ರೋಸಲಿನ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ ಶುಭಹಾರೈಸಿದರು.
ಸ್ಪರ್ಧೆಯ ನಂತರ ಸಮಾರೋಪ ಕಾರ್ಯಕ್ರಮ ಜರುಗಿತು. ವಿಜೇತರಾದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿರುವ ಪ್ರಶಸ್ತಿ ಪತ್ರ ವಿತರಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕರಾದ ಅನುಷಾ ಸ್ವಾಗತಿಸಿ, ಹರಿಣಾಕ್ಷಿ ವಂದಿಸಿ, ಲೆನಿಟಾ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು. ದಿಲೀಪ್ ಡಿಸೋಜ ಸಮಾರೋಪ ಕಾರ್ಯಕ್ರಮ ನಿರ್ವಹಿಸಿದರು.
10 ಶಾಲೆಗಳ ವಿದ್ಯಾರ್ಥಿಗಳು ಭಾಗಿ
ಒಟ್ಟು 10 ಶಾಲೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕು.ನಿಲಿಶಾ ವಿಯೋಲಾ ವೇಗಸ್ (ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಪುತ್ತೂರು) ಪ್ರಥಮ, ಕುವಿರಾ ಕೆ.ವಿ (ಅಂಬಿಕಾ ವಿದ್ಯಾಲಯ ಬಪ್ಪಳಿಗೆ ಪುತ್ತೂರು) ದ್ವಿತೀಯ, ಕ್ಷಮಾ ಭಟ್ ಡಿ. (ಸ.ಪ.ಪೂ. ಕಾಲೇಜು ಕೊಂಬೆಟ್ಟು ಪುತ್ತೂರು) ತೃತೀಯ ಸ್ಥಾನ ಗಳಿಸಿದರು.










