ಭವ್ಯಾ.ಪಿ.ಆರ್ ನಿಡ್ಪಳ್ಳಿ ಅವರು ಬರೆದ ಕಥೆ ಬಹುಮಾನಕ್ಕೆ ಆಯ್ಕೆ

0

ಪುತ್ತೂರು: ಮೈಸೂರು ಅಸೋಸಿಯೇಷನ್ ಮುಂಬಯಿಯ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿದ ನೇಸರು ಜಾಗತಿಕ ಕಥೆ ಸ್ಪರ್ಧೆಯಲ್ಲಿ ಭವ್ಯಾ.ಪಿ.ಆರ್ ನಿಡ್ಪಳ್ಳಿ ಅವರು ಬರೆದ ‘ಕೊನೆಯವಳು‘ ಎಂಬ ಕಥೆ ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದೆ.

ಮಾರ್ಚ್ ನಲ್ಲಿ ಮುಂಬಯಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಭವ್ಯ ಪಿ.ಆರ್.ನಿಡ್ಪಳ್ಳಿ ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಕಾಲೇಜು ಇಲ್ಲಿನ ಪತ್ರಿಕೋದ್ಯಮ‌ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬರೆದ ಅನೇಕ ಲೇಖನ, ಕಥೆ, ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ ಮತ್ತು ಆಕಾಶವಾಣಿ ಮಂಗಳೂರಿನಲ್ಲಿ ಭಿತ್ತರಗೊಂಡಿವೆ. ಇವರು ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹರೀಶ್ ಮಂಜೊಟ್ಟಿ ಅವರ ಪತ್ನಿ.

LEAVE A REPLY

Please enter your comment!
Please enter your name here