ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದಲ್ಲಿ ವಾರ್ಷಿಕ ಹಬ್ಬ “ಶಿಶು ಸಂಭ್ರಮ”

0

ಪುತ್ತೂರು: ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶುಮಂದಿರದ ವಾರ್ಷಿಕ ಹಬ್ಬ ’ಶಿಶು ಸಂಭ್ರಮ’ ಜ.31ರಂದು ನಡೆಯಿತು. ಅತಿಥಿಗಳಿಂದ ದೀಪ ಪ್ರಜ್ವಲನೆ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೀಪ ಜ್ಯೋತಿ ಹಾಡುವುದರ ಮೂಲಕ ಸಭಾ ಕಾರ್ಯಕ್ರಮ ಮೊದಲ್ಗೊಂಡು, ಮಕ್ಕಳಿಂದ ವಿವಿಧ ಸಭಾ ಕಾರ್ಯಕ್ರಮಗಳು ನಡೆಯಿತು. ಪುಟಾಣಿಗಳಾದ ಪ್ರತ್ಯುಷ್ – ಪ್ರಸಾದ್ ಹಾಗೂ ಇಶಾನ್ವಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಶಿಶುಮಂದಿರದ ಅಧ್ಯಕ್ಷ ಕೆ. ರಾಜಗೋಪಾಲ್ ಭಟ್ ಇವರಿಂದ ಪ್ರಾಸ್ತಾವಿಕ ಮತ್ತು ಪರಿಚಯ ನಡೆಯಿತು. ಶಿಶುಮಂದಿರದ ಹಿರಿಯ ಮಾತಾಜಿ ರೇಖಾಕುಮಾರಿ ವರದಿ ವಾಚಿಸಿದರು.


ಕೋರ್ ಟೆಕ್ನಾಲಾಜೀಸ್ ಮಾಲಕ ಅನೂಪ್ ಕೆ.ಜೆ ಯವರು ಹಿತನುಡಿಗಳನ್ನಾಡಿದರು. ಶಿಶು ಸಂಭ್ರಮ ವಾರ್ಷಿಕ ಹಬ್ಬದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ನಿರ್ದೇಶಕ ಮುರಳೀಧರ ಕೆಯವರು ಶಿಶುಮಂದಿರದ ಬಗ್ಗೆ ಮಾತಾಡಿ, ಇಲ್ಲಿನ ಸರಳತೆ, ಶಿಸ್ತು, ಶ್ಲೋಕ ಹೇಳಿಕೊಡುವಂತದ್ದು, ದೇವರ ಮೇಲಿನ ಭಕ್ತಿ, ದೇಶೀಯತೆ ಮತ್ತು ಭಾರತದ ಶಕ್ತಿಯನ್ನು, ಪೌರಾಣಿಕತೆಯನ್ನು, ವೀರ ನಾಯಕರ ಬಗ್ಗೆ ತಿಳಿಸಿಕೊಡುವಂತದ್ದು ಶಿಶುಮಂದಿರದ ವಿಶೇಷತೆಯಾಗಿದೆ ಎಂದರು. ಪೋಷಕರು ಮಕ್ಕಳನ್ನು ಶಿಶುಮಂದಿರಕ್ಕೆ ಸೇರಿಸುವುದಷ್ಟೇ ಅಲ್ಲದೆ, ಸಂಸ್ಕಾರವನ್ನು, ಭಾರತೀಯತೆಯನ್ನು, ಸತ್ವಗಳನ್ನು ನೆನಪಿಸಿ, ನಾವು ಕೂಡ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು. ಇದು ಉಳಿದರೆ ಭಾರತದ ಭವಿಷ್ಯ ಗಟ್ಟಿಯಾಗುತ್ತದೆ. ವಿಶ್ವ ಗುರು ಭಾರತದ ಕನಸು ನನಸಾಗುತ್ತದೆ ಎಂದರು.


ಶಿಶು ಸಂಭ್ರಮದ ಸವಿ ನೆನಪಿಗಾಗಿ ಮಕ್ಕಳಿಗೆ ಸ್ಮರಣಿಕೆಯನ್ನು ನೀಡಲಾಯಿತು. ಮಾತೆಯರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತದಾರವರಿಗೆ ಬಹುಮಾನವನ್ನು ವಿತರಿಸಲಾಯಿತು. ಬಳಿಕ ಮಕ್ಕಳಿಂದ, ಮಾತೆಯರಿಂದ, ಮಾತಾಜಿ ಬಳಗದವರಿಂದ ವಿವಿಧ ರೀತಿಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು.


ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಿಶು ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ರಾಜಗೋಪಾಲ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು ಮುರಳೀಧರ .ಕೆ, ಪುತ್ತೂರು ಕೋರ್ ಟೆಕ್ನಾಜೀಸ್ ಮಾಲಕರು ಅನೂಪ್ ಕೆ.ಜೆ, ಜೊತೆಗೆ ಮಾತೃ ಭಾರತಿಯ ಅಧ್ಯಕ್ಷೆ ಲಕ್ಷ್ಮೀಪ್ರಭಾ ಹಾಗೂ ಕಾರ್ಯದರ್ಶಿ ರಮ್ಯಾ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಪಾಲಕರು, ಮಾತಾಜಿ ವೃಂದದವರು ಹಾಗೂ ನೆರೆಹೊರೆಯವರು ಉಪಸ್ಥಿತರಿದ್ದು ಕಾರ್ಯಕ್ರಮವು ಸಂಭ್ರಮದಿಂದ ನೆರವೇರಿತು. ದಿಶಾನಿ ಮತ್ತು ಮನಸ್ವಿ ವಂದಿಸಿದರು.

LEAVE A REPLY

Please enter your comment!
Please enter your name here