






ವಿದ್ಯಾರ್ಥಿಗಳು ಆರ್ಥಿಕ ಸಾಕ್ಷರತೆಯನ್ನು ಪಡೆಯುವುದು ವಿಕಸಿತ ಭಾರತಕ್ಕೆ ಪೂರಕ – ಮಧುಸೂದನ್


ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆ ಇಲ್ಲಿನ ವಿದ್ಯಾರ್ಥಿಗಳು ಆರ್ಥಿಕ ಸಾಕ್ಷರತಾ ಶಿಕ್ಷಣ ಕಾರ್ಯಾಗಾರವನ್ನು ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘ ಇಲ್ಲಿಗೆ ಭೇಟಿ ನೀಡಿ ಅಲ್ಲಿನ ಕಾರ್ಯನಿರ್ವಾಹಕಾಧಿಕಾರಿ ಮಧುಸೂದನ್ ಇವರಿಂದ ಮಾಹಿತಿಯನ್ನು ಪಡೆದರು.



ಬ್ಯಾಂಕಿಂಗ್ ವ್ಯವಹಾರ, ವಾರ್ಷಿಕ ಆಯವ್ಯಯ ಸಾಲ, ಬಡ್ಡಿದರ ಇತ್ಯಾದಿ ವಿಷಯಗಳಲ್ಲಿ ಸ್ಥೂಲವಾದ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ಎಳವೆಯಲ್ಲೆ ಆರ್ಥಿಕ ಸಹಕಾರ ಪಡೆಯುವುದು ವಿಕಸಿತ ಭಾರತಕ್ಕೆ ಪೂರಕವೆಂದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ಮಾತನಾಡಿ ಪಿಎಂಶ್ರೀ ಚಟುವಟಿಕೆಯನ್ನು ಅರ್ಥವತ್ತಾಗಿ ಕಾರ್ಯರೂಪಕ್ಕೆ ತಂದು ಅನುಷ್ಠಾನಗೊಳಿಸಿರುವುದು ಮಾದರಿ ಕೆಲಸ . ಮಕ್ಕಳು ಪ್ರತ್ಯಕ್ಷವಾಗಿ ವಿಷಯವನ್ನು ಅರಿತುಕೊಳ್ಳುವುದು ಇಂದಿನ ಅಗತ್ಯ ಎಂದರು.

ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ವಿಶ್ವನಾಥ ಬಲ್ಯಾಯ ಮುಂಡೋಡಿ ,ಉಪಾಧ್ಯಕ್ಷರಾದ ಪವಿತ್ರಾ ಇವರು ಮಕ್ಕಳಿಗೆ ಕೃಷಿ ಚಟುವಟಿಕೆಗಳ ಮಾಹಿತಿ ಹಣ ಉಳಿತಾಯ ಮಾಡುವ ಬಗ್ಗೆ ಮಾಹಿತಿ ಒದಗಿಸಿದರು. ಶಾಲಾ ಮುಖ್ಯಗುರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು ಶಿಕ್ಷಕಿ ಶಿಲ್ಪರಾಣಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಸ್ ಬಿ ಐ ನರಿಮೊಗರು ಇಲ್ಲಿ ಬ್ಯಾಕಿಂಗ್ ವ್ಯವಹಾರದ ಬಗ್ಗೆ ಮಾಹಿತಿಯನ್ನು ಅಲ್ಲಿನ ಪ್ರಬಂಧಕರು ನೀಡಿದರು. ನರಿಮೊಗರು ಅಂಚೆ ಕಛೇರಿಗೆ ಭೇಟಿ ನೀಡಿ ಅಂಚೆ ಇಲಾಖೆಯ ಸವಲತ್ತುಗಳನ್ನು ಪಡೆಯಲಾಯಿತು. ನರಿಮೊಗರು ಗ್ರಾಮ ಪಂಚಾಯತ್ ಕಾರ್ಯಗಳು, ಗ್ರಂಥಾಲಯದ ಮಹತ್ವದ ಬಗ್ಗೆಯೂ ಮಾಹಿತಿ ಪಡೆಯಲಾಯಿತು. ನಿತ್ಯ ತರಗತಿ ಕೋಣೆಯಲ್ಲಿ ಹೇಳಲಾಗುವ ವಿಷಯಗಳು ಹೊರ ಪ್ರಪಂಚದಲ್ಲಿ ಪ್ರತ್ಯಕ್ವಾಗಿ ಕಂಡಾಗ ಕಲಿಕೆ ಹೇಗೆ ಗಟ್ಟಿಗೊಳ್ಳುತ್ತದೆ ಎನ್ನುವುದಕ್ಕೆ ಆರ್ಥಿಕ ಸಾಕ್ಷರತಾ ಶಿಕ್ಷಣ ಕಾರ್ಯಾಗಾರ ಸಾಕ್ಷಿಯಾಯಿತು.










