







*ಗಿರಿಶಂಕರ್ ಸುಲಾಯರವರಿಗೆ ಗಿರಿಶಂಕರ್ ಸುಲಾಯರೇ ಸರಿಸಾಟಿ- ಬಿ.ವಿ.ಸೂರ್ಯನಾರಾಯಣ
*ಸಮಾಜ ಮರೆಯಲು ಸಾಧ್ಯವಿಲ್ಲ- ಸುಂದರಿ
*ಮಾರ್ಗದರ್ಶನೀಯ- ಸುರೇಶ್ ರೈ
*ಬೆಲೆಕಟ್ಟಲು ಸಾಧ್ಯವಿಲ್ಲ- ಗಣೇಶ್ ಉದನಡ್ಕ
*ವ್ಯಾಮೋಹವನ್ನು ಹೊಂದಿಲ್ಲ- ಗಿರಿಶಂಕರ್ ಸುಲಾಯ



ಪುತ್ತೂರು: . ಸವಣೂರು ಯುವಕ ಮಂಡಲ, ಕಾಣಿಯೂರು-ಸವಣೂರು ರೈತ ಉತ್ಪಾದಕ ಕಂಪೆನಿ ಲಿಮಿಟೆಡ್, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ತಾಲೂಕು ಕೃಷಿಕ ಸಮಾಜ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ಹಾಗೂ ವರ್ತಕರ ಸಂಘದ ಆಶ್ರಯದಲ್ಲಿ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಗಿರಿಶಂಕರ ಸುಲಾಯ ಇವರಿಗೆ ಅಭಿನಂದನಾ ಸಮಾರಂಭ ಫೆ. 14 ರಂದು ಸವಣೂರು ಯುವ ಸಭಾಭವನದಲ್ಲಿ ಜರಗಿತು.




ಗಿರಿಶಂಕರ್ ಸುಲಾಯರವರಿಗೆ ಗಿರಿಶಂಕರ್ ಸುಲಾಯರೇ ಸರಿಸಾಟಿ- ಬಿ.ವಿ.ಸೂರ್ಯನಾರಾಯಣ:
ವಿಶ್ರಾಂತ ಪ್ರಾಚಾರ್ಯ ಬಿ.ವಿ.ಸೂರ್ಯನಾರಾಯಣರವರು ಅಭಿನಂದನಾ ಭಾಷಣದಲ್ಲಿ ಮಾತನಾಡಿ ಗಿರಿಶಂಕರ್ ಸುಲಾಯರವರಿಗೆ ಗಿರಿಶಂಕರ್ ಸುಲಾಯರವರೇ ಸರಿಸಾಟಿ, ಇವರು ತಮ್ಮ ಜೀವನದಲ್ಲಿ ತೋರುತ್ತಿರುವ ಬದ್ಧತೆ, ಪ್ರಾಮಾಣಿಕತೆ ಹಾಗೂ ನಾಯಕತ್ವ ಸಮಾಜಕ್ಕೆ ಬಹುದೊಡ್ಡ ಹೆಸರನ್ನು ತಂದಿದೆ ಎಂದು ಹೇಳಿ, ಗಿರಿಶಂಕರ್ ಪ್ರಶಸ್ತಿಯ ಹಿಂದೆ ಹೋಗಿಲ್ಲ, ಪ್ರಶಸ್ತಿಯು ಅವರು ಮಾಡಿರುವ ಸಾಧನೆಯನ್ನು ನೋಡಿ ಬಂದಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.

ಸಮಾಜ ಮರೆಯಲು ಸಾಧ್ಯವಿಲ್ಲ- ಸುಂದರಿ:
ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಮಾತನಾಡಿ ಗಿರಿಶಂಕರ್ ಸುಲಾಯರವರಿಗೆ ರಾಜ್ಯ ಪ್ರಸಸ್ತಿ ಒಲಿದು ಬಂದಾಗ ಅತ್ಯಂತ ಖುಷಿಪಟ್ಟೆ, ನಾನು ಕೂಡಲೇ ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿದೆ, ಹಲವು ಮಂದಿ ಲೈಕ್ ಕೊಟ್ಟರು, ಇದನ್ನು ನೋಡಿ ಮತ್ತಷ್ಟು ಖುಷಿ ಆಯಿತು. ನಾನು ಈ ಬಾರಿ ಅಧ್ಯಕ್ಷನಾಗಿದ್ದ ವೇಳೆ ಪಂಚಾಯತ್ ಹಿರಿಯ ಸದಸ್ಯ ಗಿರಿಶಂಕರ್ ಸುಲಾಯರವರು ಸಲಹೆ-ಮಾರ್ಗದರ್ಶನವನ್ನು ಪಡೆದಿದ್ದೇನೆ ಎಂದು ಹೇಳಿ, ಸುಲಾಯರವರ ಸಮಾಜ ಸೇವೆಗೆ ಅವರ ಪತ್ನಿ ಸುಜಯರವರ ಸಹಕಾರವನ್ನು ಸಮಾಜ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಮಾರ್ಗದರ್ಶನೀಯ- ಸುರೇಶ್ ರೈ :
ರಾಜ್ಯ ಯುವಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳುರವರು ಮಾತನಾಡಿ ಗಿರಿಶಂಕರ್ ಸುಲಾಯರವರ ಆದರ್ಶ ಬದುಕು ಯುವ ಪೀಳಿಗೆಗೆ ಮಾರ್ಗದಶೀನಿಯ ಎಂದು ಹೇಳಿದರು.

ಬೆಲೆಕಟ್ಟಲು ಸಾಧ್ಯವಿಲ್ಲ- ಗಣೇಶ್ ಉದನಡ್ಕ:
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕರವರು ಮಾತನಾಡಿ ಗಿರಿಶಂಕರ್ ಸುಲಾಯರವರ ಸಮಾಜ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ, ವಿಶ್ರಾಂತಿಯಲ್ಲದೇ ಸದಾ ಸಮಾಜದ ಹಿತಕ್ಕಾಗಿ ಗಿರಿಶಂಕರ್ ದುಡಿಯುತ್ತಿದ್ದಾರೆ ಎಂದರು.

ವ್ಯಾಮೋಹವನ್ನು ಹೊಂದಿಲ್ಲ- ಗಿರಿಶಂಕರ್ ಸುಲಾಯ
ಸನ್ಮಾನ ಸ್ವೀಕರಿಸಿದ ಗಿರಿಶಂಕರ್ ಸುಲಾಯರವರು ಮಾತನಾಡಿ, ನಾನು ಎಂದಿಗೂ ಹಣ, ಸಂಪತ್ತು ಮೇಲೆ ವ್ಯಾಮೋಹವನ್ನು ಹೊಂದಿಲ್ಲ, ನಾನು ಯಾವಾಗಲೂ ಸಂತೃಪ್ತ ಬದುಕನ್ನು ಹೊಂದಿದ್ದೇನೆ, ನಾನು ಯಾರಿಗೂ ಹೆದರಿ ಬದುಕುವುದಿಲ್ಲ, ನೂರು ಜನ ಬಂದರೂ ನಾನು ಒಬ್ಬನೇ ಎದುರಿಸುತ್ತೇನೆ, ಸಮಾಜ ನನಗೆ ಎಲ್ಲವನ್ನು ನೀಡಿದೆ, ನಾನು ಪ್ರಶಸ್ತಿಯನ್ನು ಎಂದಿಗೂ ಬಯಸಿಲ್ಲ ಎಂದರು, ನಾನು ಬಾಲ್ಯದಲ್ಲಿ ಪಟ್ಟ ನೋವು, ದುಮ್ಮನ ನನಗೆ ಬದುಕಿನಲ್ಲಿ ಹೊಸ ತಿರುವು ನೀಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ರವರು ಮಾತನಾಡಿ ಗಿರಿಶಂಕರ್ ಸುಲಾಯರವರ ಮಾರ್ಗದರ್ಶನದಲ್ಲಿ ನಮ್ಮ ಯುವಕ ಮಂಡಲ ರಾಜ್ಯ ಮಟ್ಟದಲ್ಲಿ ಹೆಸರು ಪಡೆದಿದೆ, ಅವರ ಸಮಾಜಮುಖಿ ಕೆಲಸ ಕಾರ್ಯಗಳು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು.

ಗಿರಿಶಂಕರ್ ಸುಲಾಯರವರ ಪತ್ನಿ ಸುಜಯ ಗಿರಿಶಂಕರ್ ರವರು ಸಂದಭೋಚಿತವಾಗಿ ಮಾತನಾಡಿದರು. ಗಿರಿಶಂಕರ್ ಪುತ್ರಿ ಮಾನ್ವಿ ಜಿ.ಸುಲಾಯ ರವರು ಸನ್ಮಾನದ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸವಣೂರು ಪ್ರಾ.ಕೃ. ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಸುರೇಶ್ ಒಡಬಾಯಿ ವಂದಿಸಿದರು. ತಾರಾನಾಥ ಸವಣೂರು ಹಾಗೂ ಧನಂಜಯ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ನ್ಯಾಯವಾದಿ ಮಹೇಶ್ ಕೆ ಸವಣೂರು, ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಚೇತನ್ ಕುಮಾರ್, ಕೋಡಿಬೈಲು, ಉದ್ಯಮಿಗಳಾದ ರಫೀಕ್ ಅರ್ತಿಕೆರೆ, ಸುಬ್ರಾಯ ಪಾಲ್ತಾಡಿ, ಬಿಜೆಪಿ ಮಹಿಳಾ ಮೋರ್ಚ್ ಸುಳ್ಯ ಕ್ಷೇತ್ರದ ಅಧ್ಯಕ್ಷೆ ಇಂದಿರಾ ಬಿ.ಕೆ, ಸಿ.ಎ, ಬ್ಯಾಂಕ್ ನಿರ್ದೇಶಕ ಗಂಗಾಧರ್ ಪೆರಿಯಡ್ಕ, ರಾಜೇಶ್ ಇಡ್ಯಾಡಿರವರುಗಳು ಅತಿಥಿಗಳನ್ನು ಗೌರವಿಸಿದರು.










