






ಪುತ್ತೂರು: ಸರ್ವೆ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಪರವಾದ ಬೇಡಿಕೆಗಳ ಪಟ್ಟಿಯನ್ನು ಗ್ರಾಮದ ಬಿಜೆಪಿ ಮುಖಂಡರು ಶಾಸಕ ಅಶೋಕ್ ರೈ ಅವರಿಗೆ ಸಲ್ಲಿಸಿದ್ದಾರೆ.


ಫೆ.16ರಂದು ಸರ್ವೆ ಗ್ರಾಮದ ವಿವಿಧ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನಿರ್ವಹಿಸಲು ಶಾಸಕರು ಆಗಮಿಸಿದ್ದ ವೇಳೆ ಸ್ಥಳೀಯ ಬಿಜೆಪಿ ಮುಖಂಡ ರಾಧಾಕೃಷ್ಣ ರೈ ರೆಂಜಲಾಡಿ ನೇತೃತ್ವದಲ್ಲಿ ಮನವಿ ನೀಡಲಾಯಿತು.



ಗ್ರಾಮದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವುದು, ಸರ್ವೆಯನ್ನು ಪ್ರತ್ಯೇಕ ಗ್ರಾಮ ಪಂಚಾಯತ್ ಆಗಿ ಮಾಡುವುದು, ಗ್ರಾಮ ಆಡಳಿತಾಧಿಕಾರಿ ಕಚೇರಿಯನ್ನು ಕಲ್ಪಣೆಯಲ್ಲಿ ನಿರ್ಮಾಣ ಮಾಡುವುದು, ಮೊಬೈಲ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು. ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ, ರಾಧಾಕೃಷ್ಣ ರೈ ರೆಂಜಲಾಡಿ, ಅಶೋಕ್ ರೈ ಸೊರಕೆ ಉಪಸ್ಥಿತರಿದ್ದರು.










