







ಪುತ್ತೂರು: ಮಂಗಳೂರಿನಲ್ಲಿ ಮಾ.1ರಂದು ವಿ ವನ್ ಅಕ್ವೆಟಿಕ್ ಕ್ಲಬ್ ವತಿಯಿಂದ ನಡೆದ ಅಸ್ಮಿತಾ ಸ್ವಿಮ್ಮಿಂಗ್ ಲೀಗ್ ಮಲ್ಟಿ ಸಿಟಿ ಲೀಗ್ ಸ್ಪರ್ಧೆಯಲ್ಲಿ ಪುತ್ತೂರಿನ ಬಾಲವನದ ಇಬ್ಬರು ಈಜುಪಟುಗಳು ಉತ್ತಮ ಸಾಧನೆಗೈದಿದ್ದಾರೆ.


ಸ್ಪರ್ಧೆಯಲ್ಲಿ ಭಾಗವಹಿಸಿದ ಆಸ್ಥಾ ಅವರು 25 ಮೀ ಬ್ಯಾಕ್‌ಸ್ಟ್ರೋಕ್ (BR)ನಲ್ಲಿ ಬೆಳ್ಳಿ, 25 ಮೀ ಬಟರ್‌ಫ್ಲೈ (FLY)ನಲ್ಲಿ ಬೆಳ್ಳಿ, 25 ಮೀ ಫ್ರೀಸ್ಟೈಲ್ (FS)ನಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ.



ಪೂರ್ವಿಕಾ ಅವರು 25 ಮೀ ಬ್ಯಾಕ್‌ಸ್ಟ್ರೋಕ್ (BR)ನಲ್ಲಿ ಕಂಚು ಪದಕ ಪಡೆದುಕೊಂಡಿದ್ದಾರೆ.
ಒಟ್ಟು ಬಾಲವನ ಈಜು ತಂಡವು 4 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈಜುಪಟುಗಳು ಬಾಲವನದಲ್ಲೇ ಈಜು ತರಬೇತಿಯನ್ನು ಪಡೆಯುತ್ತಿದ್ದು, ಪಾರ್ಥ ವಾರಣಾಶಿ, ಕ್ರತಿ ತೇಜ, ತ್ರಿಶೂಲ್ ಗೌಡ, ವಿಕಾಸ್ ಹಾಗೂ ಶಿಶಿಲ್ ಗೌಡ ಅವರು ತರಬೇತಿ ನೀಡುತ್ತಿದ್ದಾರೆ.










