ಪುತ್ತೂರು ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಅನ್ನಸಂತರ್ಪಣೆಗೆ ಅಕ್ಕಿ ಕೊಡುಗೆ

0

ಪುತ್ತೂರು: ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ ಪುತ್ತೂರು ಇದರ ಗೌರವಾಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆರವರ ನೇತೃತ್ವದಲ್ಲಿ ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಾಲಯಕ್ಕೆ ಒಂದು ದಿನದ ಅನ್ನಸಂತರ್ಪಣೆಗಾಗಿ ಅಕ್ಕಿಯನ್ನು ಕೊಡುಗೆಯಾಗಿ ನೀಡಲಾಯಿತು.

ಶ್ರೀಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆದ ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ ಪುತ್ತೂರು ಇದರ 28ನೇ ವಾರ್ಷಿಕ ಮಹಾಸಭೆಗೆ ಸಭಾಂಗಣವನ್ನು ಉಚಿತವಾಗಿ ನೀಡಿದ ಪ್ರಯುಕ್ತ ಸಂಘದ ಗೌರವಾಧ್ಯಕ್ಷರ ಅಪೇಕ್ಷೆಯಂತೆ ದೇವಾಲಯಕ್ಕೆ ಸಂಘದ ವತಿಯಿಂದ ಅನ್ನ ಸಂತರ್ಪಣೆ ಉದ್ದೇಶವಾಗಿ ಒಂದು ಕ್ವಿಂಟಲ್ ಅಕ್ಕಿಯನ್ನು ದೇಣಿಗೆಯಾಗಿ ನೀಡಲಾಯಿತು.

ಸಂಘದ ಗೌರವಾಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಧ್ಯಕ್ಷ ತಾರಾನಾಥಗೌಡ ಬನ್ನೂರು, ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕೀಲ, ಸಂಚಾಲಕ ಅರವಿಂದ್ ಪೆರಿಗೇರಿ, ಉಪಾಧ್ಯಕ್ಷ ಶಶಿಧರ್ ಸೀಟಿಗುಡ್ಡೆ, ಜೊತೆ ಕಾರ್ಯದರ್ಶಿ ಲಕ್ಷ್ಮಣ್ ಬನ್ನೂರು ಹಾಗೂ ಸದಸ್ಯರಾದ ತೀರ್ಥರಾಮ ಜಡೆಕಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here