







ನೂತನ ಅಧಿಕಾರಿಯಾಗಿ ಆಶಾ ನಾಯಕ್ ಅಧಿಕಾರ ಸ್ವೀಕಾರ


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ (DPEO) ಭರತ್ ಕೆ. ಅವರು ಮಾರ್ಚ್ 31ರಂದು ಅಧಿಕಾರ ವಹಿಸಿಕೊಂಡು, ಅದೇ ದಿನ ಸೇವೆಯಿಂದ ನಿವೃತ್ತರಾದರು.
ಕಳೆದ ಎರಡು ತಿಂಗಳಿಂದ ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಕಳೆದ ನಾಲ್ಕು ವರ್ಷಗಳಿಂದ ಮಂಗಳೂರು ಉತ್ತರ ವಲಯದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾರ್ಚ್ 31ರಂದು ಅವರಿಗೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಪದೋನ್ನತಿ ದೊರೆತಿದ್ದು, ಅಂದೇ ಅವರು ವಯೋನಿವೃತ್ತಿ ಹೊಂದಿದರು.



ಗೌರವಪೂರ್ವಕ ಬೀಳ್ಕೊಡುಗೆ:
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ದ.ಕ. ಜಿಲ್ಲೆ) ವತಿಯಿಂದ ಭರತ್ ಕೆ. ಅವರಿಗೆ ಅಭಿನಂದಿಸಿ, ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರಾದ ಕರುಣಾಕರ ಮಣಿಯಾಣಿ, ಜಿಲ್ಲಾ ಕಾರ್ಯದರ್ಶಿ ಚೆಲುವಮ್ಮ, ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಶಿವಪ್ರಸಾದ್ ರೈ, ಪುತ್ತೂರು ತಾಲೂಕು ಸಂಘದ ಸಹ ಕಾರ್ಯದರ್ಶಿ ಪ್ರಮೀಳಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ನೂತನ ಅಧಿಕಾರಿ ಆಶಾ ನಾಯಕ್ ಅವರಿಗೆ ಸ್ವಾಗತ:
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ದೈಹಿಕ ಶಿಕ್ಷಣಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಆಶಾ ನಾಯಕ್ ಅವರನ್ನು ಗ್ರೇಡ್-1 ಜಿಲ್ಲಾ ಸಂಘದ ಪರವಾಗಿ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.










