ಉದ್ಯಮಿ ಡಾ| ಎಂ. ಎಸ್. ನಝೀರ್‌ರವರಿಗೆ ʼಹಿಂದೂಸ್ಥಾನ ರತ್ನ ಅವಾರ್ಡ್ʼ ಪ್ರದಾನ

0

ಪುತ್ತೂರು: ವಾಣಿಜ್ಯೋದ್ಯಮಿ ಪುತ್ತೂರಿನ ಮುರ ನಿವಾಸಿ ಡಾ| ಎಂ. ಸಯ್ಯದ್ ನಝೀರ್ ರವರಿಗೆ ಪರಿಸರ ಮತ್ತು ಸಮಾಜ ಸೇವೆಗಾಗಿ ಹಿಂದುಸ್ಥಾನ ರತ್ನ 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಮುಂಬೈ ಗ್ಲೋಬಲ್ ಆ್ಯಂಡ್ ರಿಯಾಶ್ ಎಂಟರ್ಮೆಂಟ್ ಸಂಸ್ಥೆಯ ವತಿಯಿಂದ ಮುಂಬೈ ಅಂದೇರಿ ಸ್ಟಾರ್ ಬಜಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟ ನಿರ್ದೇಶಕ ಶಹಬಾಝ್ ಖಾನ್, ಜೆ ಬ್ರಂಡನ್ ಹಿಲ್ ಮತ್ತು ಸಿನಿಮಾ ನಟ ಗೋವಿಂದ ರವರ ಸಹೋದರ ನಿರ್ಮಾಪಕ ಹಾಗೂ ನಿರ್ದೇಶಕ ಕೀರ್ತಿ ಕುಮಾರ್ ಸಹಿತ ಚಲನಚಿತ್ರ ನಟರು ಡಾ| ಎಂ.ಎಸ್ ನಝೀರ್ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಡಾ. ಎಂ.ಸಯ್ಯದ್ ನಝೀರ್ ಸಾಹೇಬ್ ಅವರು ಪುತ್ತೂರು ಮುರ ನಿವಾಸಿಯಾಗಿದ್ದು ಪ್ರಿಯಾ ಟ್ರಾನ್ಸ್ ಪೋರ್ಟ್ ಮಾಲಕರೂ ಆಗಿದ್ದಾರೆ. ಪ್ರಸ್ತುತ ಮಂಗಳೂರಿನಲ್ಲಿ ವಾಸವಾಗಿರುವ ಇವರು ವಾಣಿಜ್ಯೋದ್ಯಮದ ಜೊತೆಗೆ ಪರಿಸರ ಹಾಗೂ ಹಸಿರುಕರಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಇವರ ವಿಶೇಷ ಸಾಧನೆಗಾಗಿ ಈಗಾಗಲೇ ಅಮೇರಿಕನ್ ಯುನಿವರ್ಸಿಟಿವತಿಯಿಂದ
ಗೌರವ ಡಾಕ್ಟರೇಟ್, ದಾದಾಸಾಹೇಬ್ ಫಾಲ್ಕೆ ಐಕಾನ್ ಅವಾರ್ಡ್ ಫಿಲ್ಡ್ ಆರ್ಗನೈಜೇಶನ್ ಪ್ರಶಸ್ತಿ, ಛತ್ರಪತಿ ಶಿವಾಜಿ ಮಹಾರಾಜ್ ಗೌರವ ಪ್ರಶಸ್ತಿ, 9ನೇ ಫಿಲಾಸಫಿಕಲ್ ಮುಂಬೈ ಪ್ರೆಸ್
ವಾರಪಂತ ಮೀಡಿಯಾ ಅವಾರ್ಡ್, ಪ್ರತಿಷ್ಠಿತ ಅಖಂಡ ಭಾರತ ಗೌರವ ಪ್ರಶಸ್ತಿ,ಬಿಜಿನೆಸ್ ಲೀಡರ್ ಶಿಪ್ ಪ್ರಶಸ್ತಿ, ‘ಮುಂಬೈ,,ಜಿಟಿಎಂ ಪ್ರಶಸ್ತಿ ಬೆಂಗಳೂರು, ಬಾಲಿವುಡ್ ಐಫಾ ಅವಾರ್ಡ್ ಮುಂಬೈ ಪ್ರಶಸ್ತಿ, ರಾಷ್ಟ್ರೀಯ ಬುದ್ದಾಂಜಲಿ ಶಾಂತಿ ಪ್ರಶಸ್ತಿ, ರಾಷ್ಟ್ರೀಯ ಬಾಬಾ ಸಾಹೇಬ್ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ, ಅಖಂಡ ಭಾರತ ಗೌರವ ಪ್ರಶಸ್ತಿ, ಬಾಂಗ್ಲಾ ದೇಶದ ಪ್ರತಿಷ್ಠಿತ ಕೈಮೇಟ್ ಚೇಂಜ್ ಮೇಕರ್ಸ್ ಪ್ರಶಸ್ತಿ, ಬ್ಯಾಂಕಾಂಕ್‌ನ ಪ್ರತಿಷ್ಠಿತ ಪರಿಸರ ಅವಾರ್ಡ್, ಪರಿಸರ ಹಸಿರುಕರಣ ಹಾಗೂ ಸಮಾಜ ಸೇವೆಗಾಗಿ ದುಬೈಯ ಅಂತರಾಷ್ಟ್ರೀಯ ಪ್ರಶಸ್ತಿ, ಬಿದಿರು ಬೆಳೆಯ ಹಸಿರು ಕರಣಕ್ಕೆ ಮಿಯೆಟ್ನಾಂ ಪ್ರಶಸ್ತಿ, ಉತ್ತರ ಪ್ರದೇಶ ಸರಕಾರದ ಪರಿಸರ ಪ್ರಶಸ್ತಿ, ಹಾಗೂ ಮಧ್ಯ ಪ್ರದೇಶದ ಸೋಶಿಯಲ್ ಚೇಂಜ್ ಅವಾರ್ಡ್, ವರ್ಲ್ಡ್ ಬಿಜಿನೆಸ್ ಸಮ್ಮಿತ್ ಪ್ರಶಸ್ತಿ, ಇತ್ತೀಚೆಗೆ ಇಂಡಿಯನ್ ಸ್ಟಾರ್ ಎಚೀವರ್ಸ್ ಅವಾರ್ಡ್ ಇವರಿಗೆ ಸಂದಿದೆ. ಜೆಮ್ಸ್ ಗೇಟ್ ಜುವೆಲ್ಲರ್ಸ್, ಆಸ್ಟ್ರೇಜೆಮ್ಸ್ ಮತ್ತು ಆಲ್ ಖಝರ್ ಪರ್ಫೋಮ್ಸ್ ಬ್ರಾಂಡಿನ ಮಾಲಕರಾಗಿರುವ ಇವರು ಒಳನಾಡು ಮೀನುಗಾರಿಕೆ ಮೀನು ತಳಿಗಳ ಅಭಿವೃದ್ಧಿಯಲ್ಲಿ ಅಂತರಾಷ್ಟ್ರೀಯ ಪರಿಣಿತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪರಿಸರ ಘನ ತ್ಯಾಜ್ಯ ನಿರ್ವಹಣೆ ಬೋಟಿಂಗ್ ಮತ್ತು ಮೀನುಗಾರಿಕೆ, ಪ್ಲಾಸ್ಟಿಕ್ ಮುಕ್ತ ಪರಿಸರ, ಗಿಡಮರಗಳ ಹಾಗೂ ನೀರು ಸಂರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ| ಎಂ. ಸಯ್ಯದ್ ನಝೀರ್ ಸಾಹೇಬ್ ರವರು 180ಕ್ಕೂ ಹೆಚ್ಚು ಕೆರೆಗಳು ಮತ್ತು ಕೊಳಗಳನ್ನು ಸ್ವಚ್ಛಗೊಳಿಸಿದ್ದಾರೆ. ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರ ಹೆಚ್ಚಿಸುವಿಕೆ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡಲು ಸಹಾಯ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here