







ಕಡಬ: ಡಬ್ಲ್ಯೂ. ಎಫ್. ಎಫ್. ಕರ್ನಾಟಕ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್–2026ರ ಅಂಗವಾಗಿ ಏಪ್ರಿಲ್ 26ರಂದು ಬೆಂಗಳೂರಿನ Surana College ಪೀಣ್ಯದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಡಬ ತಾಲೂಕಿನ ಪ್ರತಿಭೆ ಗಾಯನ್ ಆರೆಂಬಿ ಗಮನಾರ್ಹ ಸಾಧನೆ ಮಾಡಿದ್ದಾರೆ.


05 ರಿಂದ 09 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಸ್ಪರ್ಧಿಸಿದ ಗಾಯನ್ ಆರೆಂಬಿ ಬೆಳ್ಳಿ ಪದಕ ಪಡೆದು, ಉತ್ತರಾಖಂಡದಲ್ಲಿ ಜೂನ್ 26ರಿಂದ 28ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.



ಗಾಯನ್ ಆರೆಂಬಿ ಅವರು ಕಡಬದ ಅಜಂತ ಪ್ಯಾಶನ್ ಟೈಲರ್ ಮಾಲಕರಾದ ಎಣ್ಮೂರು ಗ್ರಾಮದ ಆರೆಂಬಿ ನಿವಾಸಿ ರಾಧಾಕೃಷ್ಣ ಗೌಡ ಹಾಗೂ ಶ್ರೀಮತಿ ನಳಿನಿ ದಂಪತಿಯ ಪುತ್ರರಾಗಿದ್ದಾರೆ. ಪ್ರಸ್ತುತ ಅವರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಶಾಲೆಯ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಯೋಗ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಗಾಯನ್, ನಿಂತಿಕಲ್ನ ನಿರಂತರ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕರಾದ Sharath Margiladka ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ಸಾಧನೆಯ ಮೂಲಕ ಕುಟುಂಬ ಹಾಗೂ ಶಾಲೆಗೆ ಕೀರ್ತಿ ತಂದಿರುವ ಗಾಯನ್ಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.










