ಕ್ಯಾಂಪ್ಕೊ ನೌಕರರ ಸಂಘದಿಂದ ಚಿಕಿತ್ಸೆಗೆ ನೆರವು

0

ಪುತ್ತೂರು: ಕ್ಯಾಂಪ್ಕೊ ನೌಕರರ ಸಂಘ (BMS) ವತಿಯಿಂದ ನಿತಿನ್ ಕೋಟ್ಯಾನ್ ಅವರ ಪುತ್ರಿ ಧೃತಿ ಅವರ ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸಾ ವೆಚ್ಚಕ್ಕಾಗಿ ರೂ.5 ಲಕ್ಷ ಆರ್ಥಿಕ ನೆರವು ನೀಡಲಾಯಿತು.

ಸಂಘದ ಸದಸ್ಯರಿಂದ ಸಂಗ್ರಹಿಸಲಾದ ರೂ.5,00,000 ಮೊತ್ತದ ಚೆಕ್‌ನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು ನಿತಿನ್ ಕೋಟಿಯನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ನಿರ್ದೇಶಕ ಪುರುಷೋತ್ತಮ ಭಟ್, ಡಿಜಿಎಂ ಗೋವಿಂದ ಭಟ್, ಕ್ಯಾಂಪ್ಕೊ ನೌಕರರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಯದರ್ಶಿ ವಿನೋದ್, ಸಂಯುಕ್ತ ಕಾರ್ಯದರ್ಶಿ ಮೋಹನ್ ಮಾಡ, ಕಾರ್ಯಕಾರಿ ಸದಸ್ಯ ಚಂದ್ರಹಾಸ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಸಂಕಷ್ಟದ ಸಂದರ್ಭದಲ್ಲಿ ಧೃತಿ ಅವರ ಚಿಕಿತ್ಸೆಗೆ ಉದಾರ ಮನಸ್ಸಿನಿಂದ ಸಹಾಯಹಸ್ತ ಚಾಚಿದ ಸಂಘದ ಎಲ್ಲಾ ಸದಸ್ಯರು ಹಾಗೂ ಹಿತೈಷಿಗಳಿಗೆ ಕ್ಯಾಂಪ್ಕೊ ನೌಕರರ ಸಂಘ ಕೃತಜ್ಞತೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here